ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಹಿಂದೆ ನಾನು ಕೇಳಿದ್ದೆ, ಎರಡು ದಿನ ಪತ್ನಿ ಊರಿಗೆ ಹೋದ್ರೆ ಮಕ್ಕಳನ್ನು ನಿಮಗೆ ನೋಡಿಕೊಳ್ಳಲು ಆಗುತ್ತಾ ಎಂದು ಕೇಳಿದ್ದೆ: ಬಾಯಕ್ಕ ಮೇಟಿ| ಅಡುಗೆ ಮಾಡಿ, ಊಟಕ್ಕೆ ಬಡಿಸುವಳು ಹೆಣ್ಣು, ನಿಮಗೆ ಅಡುಗೆ ಮಾಡಲು ಬರುವುದಿಲ್ಲ. ಹಾಗಾಗಿ ಮಹಿಳೆಯರನ್ನು ಕಡಿಗಣಿಸ್ಬೇಡಿ|
ಬಾಗಲಕೋಟೆ(ಮಾ.08): ಜಿಲ್ಲಾಮಟ್ಟದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಶಾಸಕ ವೀರಣ್ಣ ಚರಂತಿಮಠ ಸಂಸದ ಪಿ. ಸಿ. ಗದ್ದಿಗೌಡರ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಗೈರು ಆಗಿದ್ದಕ್ಕೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬಾಯಕ್ಕ ಮೇಟಿ ಜನಪ್ರತಿನಿಧಿಗಳ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಗರದಲ್ಲಿ ಇಂದು(ಭಾನುವಾರ) ನಡೆದಿದೆ.
ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿ ನಡೆದ ಕಾರ್ಯಕ್ರಮವನ್ನ ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಉದ್ಘಾಟಿಸಿ ಭಾಷಣ ಮಾಡಿದ ವೇಳೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಮಹಿಳೆಯರ ಕಾರ್ಯಕ್ರಮಕ್ಕೆ ಶಾಸಕರು, ಸಂಸದ, ಮಂತ್ರಿಗಳು ಬರಬೇಕಾಗಿತ್ತು, ಮಹಿಳೆಯರು ನಿಮಗೆ ವೋಟ್ ಹಾಕೋದಿಲ್ವಾ, ಮಹಿಳೆಯರಿಲ್ಲದೆ ನೀವೂ ಕಾರ್ಯಕ್ರಮ ಮಾಡಿ ನೋಡೋಣ ಎಂದು ಗೈರಾದ ಶಾಸಕ, ಸಂಸದ, ಸಚಿವರಿಗೆ ಸವಾಲು ಹಾಕಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಾರ್ಯಕ್ರಮಕ್ಕೆ ಮಹಿಳೆಯರಿಗೆ ಸೀರೆ ಕೊಟ್ರೆ ಬರ್ತಾರೆ ಅಂತ ನೀವು ತಿಳಿದಿದ್ದರೆ ತಪ್ಪು, ಮಹಿಳೆಯರನ್ನು ಕಡಿಗಣಿಸ್ಬೇಡಿ ಎಂದು ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಹೇಳಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಹಿಂದೆ ನಾನು ಕೇಳಿದ್ದೆ, ಎರಡು ದಿನ ಪತ್ನಿ ಊರಿಗೆ ಹೋದ್ರೆ ಮಕ್ಕಳನ್ನು ನಿಮಗೆ ನೋಡಿಕೊಳ್ಳಲು ಆಗುತ್ತಾ ಎಂದು ಕೇಳಿದ್ದೆ, ಅಡುಗೆ ಮಾಡಿ,ಊಟಕ್ಕೆ ಬಡಿಸುವಳು ಹೆಣ್ಣು, ನಿಮಗೆ ಅಡುಗೆ ಮಾಡಲು ಬರುವುದಿಲ್ಲ. ಹಾಗಾಗಿ ಮಹಿಳೆಯರನ್ನು ಕಡಿಗಣಿಸ್ಬೇಡಿ ಎಂದು ಶಾಸಕರು, ಸಂಸದ, ಮಂತ್ರಿಗಳಿಗೆ ಸಲಹೆ ನೀಡಿದ್ದಾರೆ. ಮುಂದಿನ ವರ್ಷದ ಮಹಿಳಾ ದಿನಾಚರಣೆಗಾದ್ರೂ ಬನ್ನಿ ಎಂದು ಗೈರಾದ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.