ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಸಮೀಪದ ಹೋಟೆಲ್‌ನ ಮೂವರು ಸಿಬ್ಬಂದಿಗೆ ಕೊರೋನಾ ಇದೆ ಎಂದು ಹೊರಡಿಸಲಾಗಿದ್ದ ಸೂಚನೆ ಪತ್ರವನ್ನ ಹಿಂಪಡೆಯಲಾಗಿದೆ.
ಬಾಗಲಕೋಟೆ, (ಜೂನ್.17): ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ ಡೀನ್ ಡಾ ಹೆಚ್. ಬಿ. ಪಾಟೀಲ್, ಮೂವರಿಗೆ ಕೊರೋನಾ ಇದೆ ಎಂದು ಖಚಿತಪಡಿಸಿ ಹೊರಡಿಸಿದ್ದ ಅಧಿಸೂಚನೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಡಾ ಹೆಚ್. ಬಿ. ಪಾಟೀಲ್ ಇವರು ವೈದ್ಯರಲ್ಲ, ಬದಲಿಗೆ ಅವರು ತೋಟಗಾರಿಕೆ ವಿಶ್ವವಿದ್ಯಾಲಯದ ಡೀನ್ ಆಗಿದ್ದಾರೆ. ಆದ್ರೆ, ಇವರು ವೈದ್ಯರು ಹೇಳಿದಂತೆ ವಿವಿ ಸಮೀಪದ ಹೋಟೆಲ್ ಸಿಬ್ಬಂದಿಗೆ ಕೊರೋನಾ ಇದೆ ಎಂದು ಹೇಳಿದ್ದಾರೆ. ಅಲ್ಲದೇ ಈ ಬಗ್ಗೆ ಅಧಿಸೂಚನೆಯನ್ನೂ ಹೊರಡಿಸಿದ್ದಾರೆ.
ಹೋಟೆಲ್ ಸಿಬ್ಬಂದಿಗೆ ಅಂಟಿದ ಕೊರೋನಾ: ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ ಟೆನ್ಷನ್..!
ಯಾವ ಹೋಟೆಲ್ ಸಿಬ್ಬಂದಿಗೂ ಕೊರೋನಾ ಇಲ್ಲ. ಆದರೆ, ಡಾ ಹೆಚ್. ಬಿ. ಪಾಟೀಲ್ ಕೊರೋನಾ ಇದೆ ಎಂದು ಅಧಿಸೂಚನೆ ಹೇಗೆ ಹೊರಡಿಸಿದ್ರು ಎನ್ನುವ ಪ್ರಶ್ನೆಗಳು ಉದ್ಭವಿಸಿದ್ದರು. ಅಲ್ಲದೇ ಇದು ದೊಡ್ಡ ರಾದ್ಧಾಂತವಾಗಿತ್ತು. ಇದು ಭಾರಿ ವಿವಾದದಕ್ಕೆ ಕಾರಣವಾಗುತ್ತಿದ್ದಂತೆಯೇ ಎಚ್ಚೆತ್ತ ಕುಲಪತಿ ಕೆ.ಎಂ.ಇಂದಿರೇಶ್, ಕೋವಿಡ್ ಬಗ್ಗೆ ಹೊರಡಿಸಿದ ಸುತ್ತೋಲೆಯನ್ನು ಕೂಡಲೇ ವಾಪಸ್ ಪಡೆದಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂದಿರೇಶ್, ಸಿಬ್ಬಂದಿ ಯಲ್ಲಿ ಸುರಕ್ಷತೆ ಕ್ರಮಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಆಂತರಿಕವಾಗಿ ಸುತ್ತೋಲೆ ಹೊರಡಿಸಲಾಗಿತ್ತು. ಆದ್ರೆ ತಪ್ಪಾಗಿ ಪತ್ರ ಆಗಿದೆ. ಹೀಗಾಗಿ ತಕ್ಷಣವೇ ಪತ್ರವನ್ನ ಹಿಂಪಡೆದಿದ್ದೇವೆ. ಈ ಬಗ್ಗೆ ತೋಟಗಾರಿಕೆ ವಿವಿಯಲ್ಲಿ ಆತಂಕ ಬೇಡ. ಬದಲಿಗೆ ಜಾಗೃತಿ ಇರಲಿ ಎಂದು ಹೇಳಿ ಕೈತೊಳೆದುಕೊಂಡರು.
ಡೀನ್ ಅಧಿಸೂಚನೆ ಯಡವಟ್ಟು
ಹೋಟೆಲ್‌ನಲ್ಲಿ ಉಪಹಾರ, ಚಹಾ ಸೇವಿಸದಂತೆ ತೋಟಗಾರಿಕೆ ವಿವಿಯ ಮಹಾವಿದ್ಯಾಲಯದ ಸಿಬ್ಬಂದಿಗೆ ಡೀನ್ ಡಾ ಹೆಚ್. ಬಿ. ಪಾಟೀಲ್ ಅವರು ಅಧಿಸೂಚನೆ ಹೊರಡಿಸಿ, ವಿಶ್ವವಿದ್ಯಾಲಯದ ಶಿಕ್ಷಕ, ಶಿಕ್ಷಕೇತರ, ಗುತ್ತಿಗೆ ಸಿಬ್ಬಂದಿ ಯಾವುದೇ ಹೊಟೇಲ್‌ನಲ್ಲಿ ಉಪಹಾರ ಸೇವಿಸದಂತೆ ಸೂಚನೆ ನೀಡಿದ್ದರು.
ಆದ್ರೆ, ಹೋಟೆಲ್‌ನ ಯಾವುದೇ ಸಿಬ್ಬಂದಿಗೆ ಕೊರೋನಾ ಇರಲಿಲ್ಲ. ಇದರಿಂದ ಡಾ ಹೆಚ್. ಬಿ. ಪಾಟೀಲ್ ಹೊರಡಿಸಿದ್ದ ಅಧಿಸೂಚನೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಸುತ್ತೋಲೆಯನ್ನು ವಾಪಸ್ ಪಡೆದು ವಿವಾದಕ್ಕೆ ತೆರೆ ಎಳೆದಿದ್ದಾರೆ.