ಮಂಡ್ಯದಲ್ಲಿ ಬ್ರಹ್ಮಚಾರಿಗಳ ಪಾದಯಾತ್ರೆ: ಎಂಗೇಜ್‌ಮೆಂಟ್‌ ಆದವರಿಗೂ ನೋ ಎಂಟ್ರಿ..!

Published : Aug 10, 2022, 01:02 PM IST
ಮಂಡ್ಯದಲ್ಲಿ ಬ್ರಹ್ಮಚಾರಿಗಳ ಪಾದಯಾತ್ರೆ: ಎಂಗೇಜ್‌ಮೆಂಟ್‌ ಆದವರಿಗೂ ನೋ ಎಂಟ್ರಿ..!

ಸಾರಾಂಶ

ಬ್ರಹ್ಮಚಾರಿಗಳ ನಡೆ, ಮಹದೇಶ್ವರ ಬೆಟ್ಟದ ಕಡೆ ಎಂಬ ಶೀರ್ಷಿಕೆ ಅಡಿ ಪಾದಯಾತ್ರೆ ಆಯೋಜನೆ

ಮಂಡ್ಯ(ಆ.10):  ಮಂಡ್ಯದಲ್ಲಿ ಬ್ರಹ್ಮಚಾರಿಗಳ ಪಾದಯಾತ್ರೆ ವಿಚಾರ ಬಹಳಷ್ಟು ಚರ್ಚೆ ಆಗ್ತಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಫೋಸ್ಟರ್ ಸಾಕಷ್ಟು ಸದ್ದು ಮಾಡುತ್ತಿದೆ. ಬ್ರಹ್ಮಚಾರಿಗಳ ನಡೆ, ಮಹದೇಶ್ವರ ಬೆಟ್ಟದ ಕಡೆ ಎಂಬ ಶೀರ್ಷಿಕೆ ಅಡಿ ಪಾದಯಾತ್ರೆ ಆಯೋಜಿಸಲಾಗಿದೆ.

ಮದ್ದೂರು ತಾಲೂಕು ಕೆ.ಎಂ.ದೊಡ್ಡಿಯಿಂದ ಮಲೈ ಮಹದೇಶ್ವರ ಬೆಟ್ಟಕ್ಕೆ 122 ಕಿ.ಮೀ ಪಾದಯಾತ್ರೆ ಮಾಡುವುದಾಗಿ ಹೇಳಲಾಗಿದೆ. ಮಳವಳ್ಳಿ- ಕೊಳ್ಳೆಗಾಲ- ಹನೂರು ಮಾರ್ಗವಾಗಿ ಬ್ರಹ್ಮಚಾರಿಗಳ ಪ್ರಯಾಣ ನಡೆಯಲಿದೆ. ಪಾದಯಾತ್ರೆಗೆ ಬರುವವರಿಗೆ ಕೆಲ ಷರತ್ತುಗಳನ್ನು ವಿಧಿಸಲಾಗಿದೆ. ಆಧಾರ್ ಕಾರ್ಡ್‌ ಪ್ರಕಾರ ಕಡ್ಡಾಯವಾಗಿ 30 ವರ್ಷ ದಾಟಿರಬೇಕು ಎಂಬುದು ಮೊದಲನೆ ಷರತ್ತು. ವಿವಾಹಿತರಿಗೆ ಪಾದಯಾತ್ರೆಗೆ ಅವಕಾಶವಿಲ್ಲ ಎಂಬ ಕಠಿಣ ಷರತ್ತು ಹಾಕಲಾಗಿದೆ. 

ರಂಗನತಿಟ್ಟು ಪಕ್ಷಿಧಾಮಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ: ರಾಮ್ಸರ್ ಪಟ್ಟಿಗೆ ಸೇರ್ಪಡೆ

ನಿಶ್ಚಿತಾರ್ಥ ಆಗಿದ್ದವರಿಗೂ ಪಾದಯಾತ್ರೆಗೆ ಬರುವಂತಿಲ್ಲ ಎಂದು ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ. ಪ್ರತಿ 5 ಕಿ.ಮೀಗೆ ಚಹಾ ವಿರಾಮ ಹಾಗೂ ಪ್ರತಿ 10 ಕಿ.ಮೀಗೆ ಸ್ನ್ಯಾಕ್ಸ್ ವ್ಯವಸ್ಥೆಯನ್ನು ಆಯೋಜಕರು ಮಾಡಿದ್ದಾರೆ. ಆದರೆ ಪಾದಯಾತ್ರೆ ಹೊರಡುವ ದಿನಾಂಕ ಮಾತ್ರ ಇನ್ನು ನಿಗಧಿಯಾಗಿಲ್ಲ. ಅದರ ರೂಪುರೇಷೆಯನ್ನು ಶೀಘ್ರದಲ್ಲೇ ತಿಳಿಸುವುದಾಗಿ ಪೋಸ್ಟರ್‌ನಲ್ಲಿ ಬರೆಯಲಾಗಿದೆ. ಇದೀಗ ಬ್ರಹ್ಮಚಾರಿಗಳ ಪಾದಯಾತ್ರೆ ಪೋಸ್ಟರ್ ಸಾಕಷ್ಟು ವೈರಲ್ ಆಗ್ತಿದೆ.
 

PREV
Read more Articles on
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!