ದೊಣ್ಣೆಹಳ್ಳಿಯ ರಾಷ್ಟ್ರೀಯ ಹೆದ್ದಾರಿ 50ರ ಕ್ರಾಸ್‌ನ ಪೆಟ್ರೋಲ್ ಬಂಕ್ ಹತ್ತಿರ ನಡೆದ ದುರ್ಘಟನೆ
ದಾವಣಗೆರೆ(ಆ.10): ಖಾಸಗಿ ಬಸ್‌ವೊಂದು ಪಲ್ಟಿಯಾದ ಪರಿಣಾಮ 9 ಮಂದಿ ಗಾಯಗೊಂಡ ಘಟನೆ ಜಿಲ್ಲೆಯ ಜಗಳೂರು ದೊಣ್ಣೆಹಳ್ಳಿ ಬಳಿ ಇಂದು(ಬುಧವಾರ) ನಡೆದಿದೆ. ನಿದ್ರೆಯ ಮಂಪರಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ ಅಂತ ಹೇಳಲಾಗುತ್ತಿದೆ. ದೊಣ್ಣೆಹಳ್ಳಿಯ ರಾಷ್ಟ್ರೀಯ ಹೆದ್ದಾರಿ 50ರ ಕ್ರಾಸ್‌ನ ಪೆಟ್ರೋಲ್ ಬಂಕ್ ಹತ್ತಿರ ದುರ್ಘಟನೆ ಸಂಭವಿಸಿದ್ದು ಬಸ್‌ನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು ಕಡೆಯಿಂದ ವಿಜಯಪುರ ಜಿಲ್ಲೆಯ ಸಿಂದಗಿ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ವೇಗವಾಗಿ ಚಲಿಸುತಿದ್ದರಿಂದ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಸುಮಾರು 30 ಜನ ಪ್ರಯಾಣಿಕರಲ್ಲಿ 9 ಕ್ಕೂ ಹೆಚ್ಚು ಜನರಿಗೆ ಗಂಭೀರವಾದ ಗಾಯಗಳಾಗಿದೆ. ಗಾಯಾಳುಗಳನ್ನು ಜಗಳೂರು ನಂತರ ದಾವಣಗೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
Road Accident ಹುಬ್ಬಳ್ಳಿಯಲ್ಲಿ MLC ಬಸವರಾಜ ಹೊರಟ್ಟಿ ಕಾರು ಅಪಘಾತ
ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಗಾಯಾಳುಗಳನ್ನು ಜಗಳೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಐವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷವಶಾತ್ ಯಾವುದೇ ಪ್ರಾಣಾ ಹಾನಿ ಸಂಭವಿಸಿಲ್ಲ. ಈ ಬಗ್ಗೆ ಜಗಳೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.