
ಶಿವಮೊಗ್ಗ (ಆ.28) ವಾಲ್ಮೀಕಿ ಹಗರಣ ಮತ್ತೆ ಕಾಂಗ್ರೆಸ್ ಸರ್ಕಾರಕ್ಕೆ ಕಂಟವಾಗಿದೆ. ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಸಿದ 25 ದಿನದಲ್ಲಿ ಸಚಿವ ಬಿ ನಾಗೇಂದ್ರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಾಗೇಂದ್ರಗೆ ಸಚಿವ ಸ್ಥಾನ ನೀಡಿದ ಬೆನ್ನಲ್ಲೇ ಬಿಜೆಪಿ ಹೋರಾಟ ಆರಂಭಿಸಿತ್ತು. ಸದನದ ಒಳಗೆ ಹಾಗೂ ಹೊರಗೆ ನಿರಂತರ ಹೋರಾಟ ಕಾಂಗ್ರೆಸ್ ಹೈಕಮಾಂಡ್‌ಗೆ ಮುಜುಗುರ ತಂದಿತ್ತು. ಹಲವು ಸುತ್ತಿನ ಹೈಡ್ರಾಮ ಬಳಿಕ ಬಿ ನಾಗೇಂದ್ರ ಅಧಿಕೃತವಾಗಿ ರಾಜೀನಾಮೆ ಘೋಷಿಸಿದ್ದಾರೆ. ರಾಜೀನಾಮೆ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ. ಬಿ ನಾಗೇಂದ್ರ ರಾಜೀನಾಮೆಯಿಂದ ನಮ್ಮ ಹೋರಾಟ ನಿಲ್ಲಲ್ಲ ಎಂದು ಎಚ್ಚರಿಸಿದ್ದಾರೆ.
ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಬಿವೈ ರಾಜೇಂದ, ಗಂಭೀರವಾದ ಭ್ರಷ್ಟಾಚಾರದ ಆರೋಪವನ್ನು ಹೊಂದಿರುವಂತಹ ನಾಗೇಂದ್ರ ರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದೆ ದೊಡ್ಡ ತಪ್ಪು . ವಾಲ್ಮೀಕಿ ನಿಗಮದ 187 ಕೋಟಿ ಹಣ ತೆಲಂಗಾಣಕ್ಕೆ ವರ್ಗಾವಣೆ ಮಾಡಿದ್ದಾರೆ. ಚಂದ್ರಶೇಖರ್ ತಮ್ಮ ನೋಟ್ ನಲ್ಲಿ ಸಚಿವ ನಾಗೇಂದ್ರ ಮೌಖಿಕ ಆದೇಶ ಮೇರೆಗೆ ಹಣ ವರ್ಗಾವಣೆ ಎಂದು ಬರೆದಿದ್ದರು. ಸದನದ ಒಳಗೆ ಮತ್ತು ಹೊರಗೆ ಬೃಹತ್ ಪ್ರತಿಭಟನೆ ನಡೆಸಿದಾಗ ಸದನ ಮೊಟುಕು ಮಾಡಿ ಪಲಾಯನ ಮಾಡಿದರು. ಇದು ಬಿಜೆಪಿ ಹೋರಾಟಕ್ಕೆ ಸಿಕ್ಕ ಜಯ ಎಂದು ವಿಜಯೇಂದ್ರ ಹೇಳಿದ್ದಾರೆ.
ಕೆಪಿಎಸ್ಸಿ ಹಗರಣ, ಬರದ ಬಗ್ಗೆ ಚರ್ಚೆ ಮಾಡಲಿಲ್ಲ . ಬಿಜೆಪಿ ಹೋರಾಟ ಕೇವಲ ನಾಗೇಂದ್ರ ರಾಜೀನಾಮೆಯಿಂದ ನಿಲ್ಲುವುದಿಲ್ಲ. 185 ಕೋಟಿ ಹಣ ವಾಲ್ಮೀಕಿ ನಿಗಮದ ಅಕೌಂಟಿಗೆ ವಾಪಸ್ ಬರಬೇಕು. ದಲಿತ ಸಮುದಾಯದ ಅಭಿವೃದ್ಧಿಗೆ ಹಣ ವಾಪಸ್ ಬರಬೇಕು . ಈ ಹಣ ವಾಪಸ್ ಬರುವವರೆಗೂ ಹೋರಾಟ ಮುಂದುವರೆಯುತ್ತದೆ ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.
ಸೆಪ್ಟೆಂಬರ್ ಒಂದರಿಂದ ರಾಯಚೂರು ಜಿಲ್ಲೆಯ ಲಿಂಗಸೂರಿನಿಂದ ಬಳ್ಳಾರಿ ವರೆಗೆ ಪಾದಯಾತ್ರೆ ನಡೆಯಲಿದೆ. ನಾಗೇಂದ್ರ ರಾಜೀನಾಮೆ ಬರದ ವಿಚಾರ , ಗೃಹ ಲಕ್ಷ್ಮಿ ಯೋಜನೆ ಯಲ್ಲಿ 5000 ಕೋಟಿ ಹಗರಣ ಆಗಿದೆ. ಸರ್ಕಾರ ಬಂದ ಮೇಲೆ ಒಂದು ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದರು . ಕಾಂಗ್ರೆಸ್ ಇದೀಗ ಎಲ್ಲಾ ಸಮುದಾಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ನಾಗೇಂದ್ರ ಹಲವು ಸವಾಲು ಹಾಕಿದ್ದಾರೆ . ಮೃತ ಚಂದ್ರಶೇಖರ ಪತ್ನಿಗೆ ಪಿ ಎಫ್ ಕೂಡ ಬಂದಿಲ್ಲ . ಯಾವುದೇ ಕಾರಣಕ್ಕೂ ಪಾದಯಾತ್ರೆಯ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ . ಸಿದ್ದರಾಮಯ್ಯ ಲೋಕಾಯುಕ್ತ ಬರ್ಕಾಸ್ ಮಾಡಿ ಎಸಿಬಿ ರಚನೆ ಮಾಡಿದ್ದರು . ಸಿಬಿಐ ಪ್ರಾಸಿಕ್ಯೂಶನ್ ಗೆ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ . ನನ್ನ ಅಕೌಂಟಿಗೆ ಹಣ ಬಂದಿಲ್ಲ ಎಂದು ನಾಗೇಂದ್ರ ಹೇಳಿದ್ರೆ ಮೂರು ಕಾಸಿನ ಬೆಲೆ ಇಲ್ಲ ಎಂದಿದ್ದಾರೆ.
ಬರ ನಮಗೆ ಆದ್ಯತೆ ಇತ್ತು. ಕೆಪಿಎಸ್ಸಿ ಹಗರಣದಿಂದ ನೌಕರರು ಉದ್ಯೋಗ ಸಿಗದೆ ಬೀದಿಗೆ ಇಳಿದಿದ್ದಾರೆ. ನಮ್ಮ ಮೊದಲ ಹಂತದ ಹೋರಾಟ ಇದಕ್ಕೆ ಜಯ ಸಿಕ್ಕಿದೆ. ಬಿಜೆಪಿ ಯುವಜನತೆಯ ಪರವಾಗಿ ನಿಲ್ಲುತ್ತದೆ ಕೆಪಿಎಸ್ಸಿ ಹಗರಣನ ಚರ್ಚೆ ಆಗಬೇಕು ಎಂದು ವಿಜಯೇಂದ್ರ ಹೇಳಿದ್ದಾರೆ.