ಮೊದಲೇ ಪತ್ತೆ ಹಚ್ಚಿದರೆ ಕ್ಯಾನ್ಸರ್ ಗುಣಪಡಿಸಬಹುದಾದ ಆರೋಗ್ಯ ಸಮಸ್ಯೆಯಾಗಿದೆ. ಇದಕ್ಕೆ ಸೂಕ್ತ ಚಿಕಿತ್ಸೆಯೂ ಲಭ್ಯವಿರುವ ಕಾರಣ ಕ್ಯಾನ್ಸರ್ ನಿಂದ ಬಳಲುವವರು ಆತಂಕ ಪಡಬೇಕಾಗಿಲ್ಲ. ಇದಕ್ಕೆ ಆಯುರ್ವೇದದಲ್ಲಿ ಸೂಕ್ತ ಚಿಕಿತ್ಸೆ ಇದೆ ಎಂದು ಮೈಸೂರು ತಾಲೂಕು ಚಿಕ್ಕಹಳ್ಳಿಯಲ್ಲಿರುವ ಜನನಿ ಆಸ್ಪತ್ರೆಯ ಆಯುರ್ವೇದ ವೈದ್ಯ ಡಾ. ಚಂದ್ರ ತಿಳಿಸಿದರು.
ಮೈಸೂರು : ಮೊದಲೇ ಪತ್ತೆ ಹಚ್ಚಿದರೆ ಕ್ಯಾನ್ಸರ್ ಗುಣಪಡಿಸಬಹುದಾದ ಆರೋಗ್ಯ ಸಮಸ್ಯೆಯಾಗಿದೆ. ಇದಕ್ಕೆ ಸೂಕ್ತ ಚಿಕಿತ್ಸೆಯೂ ಲಭ್ಯವಿರುವ ಕಾರಣ ಕ್ಯಾನ್ಸರ್ ನಿಂದ ಬಳಲುವವರು ಆತಂಕ ಪಡಬೇಕಾಗಿಲ್ಲ. ಇದಕ್ಕೆ ಆಯುರ್ವೇದದಲ್ಲಿ ಸೂಕ್ತ ಚಿಕಿತ್ಸೆ ಇದೆ ಎಂದು ಮೈಸೂರು ತಾಲೂಕು ಚಿಕ್ಕಹಳ್ಳಿಯಲ್ಲಿರುವ ಜನನಿ ಆಸ್ಪತ್ರೆಯ ಆಯುರ್ವೇದ ವೈದ್ಯ ಡಾ. ಚಂದ್ರ ತಿಳಿಸಿದರು.
ಇದುವರೆಗೆ ಆಯುರ್ವೇದ ಮೂಲಕ ಹಲವಾರು ಮಂದಿಗೆ ಕ್ಯಾನ್ಸರ್ ಗುಣಪಡಿಸಲಾಗಿದೆ. ಇವರಲ್ಲಿ 86 ವರ್ಷದವರಿಂದ ಹಿಡಿದು 9ನೇ ತರಗತಿ ಓದುತ್ತಿರುವವರೂ ಸೇರಿದ್ದಾರೆ. ಎಷ್ಟೋ ಮಂದಿ ಆಯುರ್ವೇದ ಚಿಕಿತ್ಸೆ ಅರಿವಿಲ್ಲದೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಇತರೆ ಚಿಕಿತ್ಸೆ ಪಡೆದರೂ ಗುಣಪಡಿಸಿಕೊಳ್ಳಲಾಗದೇ ಸಾವಿಗೀಡಾಗುತ್ತಿದ್ದಾರೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿಷಾದಿಸಿದರು.
undefined
ಕ್ಯಾನ್ಸರ್ ವಾಸಿಯಾಗದ ಸಮಸ್ಯೆಯಲ್ಲ. ವಾಂತಿ, ಭೇದಿ, ಊಟ ಸೇರದಿರುವುದು, ಚಿಕಿತ್ಸೆ ಪಡೆದರೂ ದೀರ್ಘಕಾಲ ವಾಸಿಯಾಗದ ಜ್ವರ ಮೊದಲಾದವು ಕ್ಯಾನ್ಸರ್ ಲಕ್ಷಣಗಳೂ ಆಗಿರುಬಹುದಾಗಿವೆ. ಇದಕ್ಕೆ ಆಯುರ್ವೇದದಲ್ಲಿ ಅರ್ಬುದ ಎಂಬ ಹೆಸರಿದ್ದು, ತಾವು ನೀಡುವ ಚಿಕಿತ್ಸೆಯು ಕ್ಯಾನ್ಸರ್ ಗಂಟು ಬೆಳೆಯಲು ಬಿಡುವುದಿಲ್ಲ. ಜೊತೆಗೆ ಹರಡಲೂ ಬಿಡುವುದಿಲ್ಲ ಎಂದರು.
ರೋಗ ಪತ್ತೆಯಾದ ತಕ್ಷಣ ಹಲವರು ತಮ್ಮ ಚಿಕಿತ್ಸೆ ಪಡೆದು ಗುಣ ಹೊಂದಿದ್ದಾರೆ. ಕೆಲವರು ಅನ್ಯ ಚಿಕಿತ್ಸೆಯ ದುಷ್ಪರಿಣಾಮ ತಾಳಲಾರದೇ ತಮ್ಮಲ್ಲಿ ಚಿಕಿತ್ಸೆ ಪಡೆದು ಗುಣ ಹೊಂದಿದ್ದಾರೆ. ಇನ್ನೊ ತಮ್ಮ ಚಿಕಿತ್ಸೆಯಲ್ಲಿ ಅಡ್ಡ ಪರಿಣಾಮವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಹಿರಿಯ ತಜ್ಞ ಚಂದ್ರಶೇಖರ್ ಇದ್ದರು.