ಮರು ಜಾರಿ ಆಗಲಿದೆಯಾ ಹಳೆ ಪಿಂಚಣಿ ಯೋಜನೆ ..?

By Kannadaprabha News  |  First Published Nov 4, 2023, 9:00 AM IST

2006ರ ಏಪ್ರಿಲ್ ಒಂದರ ನಂತರ ನೇಮಕಗೊಂಡ ನೌಕರರಿಗೆ ಜಾರಿಗೊಳಿಸಿರುವ ನೂತನ ಪಿಂಚಣಿ ಯೋಜನೆ (ಎನ್.ಪಿ.ಎಸ್) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಈಡೇರಿಸಬೇಕು ಎಂದು ವಿಧಾನಪರಿಷತ್‌ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಆಗ್ರಹಿಸಿದರು.


  ಮೈಸೂರು :  2006ರ ಏಪ್ರಿಲ್ ಒಂದರ ನಂತರ ನೇಮಕಗೊಂಡ ನೌಕರರಿಗೆ ಜಾರಿಗೊಳಿಸಿರುವ ನೂತನ ಪಿಂಚಣಿ ಯೋಜನೆ (ಎನ್.ಪಿ.ಎಸ್) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಈಡೇರಿಸಬೇಕು ಎಂದು ವಿಧಾನಪರಿಷತ್‌ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಆಗ್ರಹಿಸಿದರು.

ಅನುದಾನಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ನೂತನ ಯೋಜನೆ ಅಥವಾ ಹಳೆ ಪಿಂಚಣಿ ಯೋಜನೆ ಇಲ್ಲ. ಅವರ ಸಂಧ್ಯಾ ಕಾಲದ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಆದ್ದರಿಂದ ಅವರಿಗೂ ಕೂಡಲೇ ಪಿಂಚಣಿ ಸೌಲಭ್ಯ ಜಾರಿಗೊಳಿಸಬೇಕು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

Latest Videos

undefined

ಶಾಲಾ ಶಿಕ್ಷಣ ಇಲಾಖೆಯಡಿ ಬರುವ ಪದವಿ ಪೂರ್ವ ಮತ್ತು ಪ್ರೌಢ ಇಲಾಖೆಯಲ್ಲಿ ಜಾರಿಗೊಳಸಿರುವ ನೂತನ ಪರೀಕ್ಷಾ ಪದ್ಧತಿ ಪ್ರಕಾರ ಮೂರು ಮುಖ್ಯ ಪರೀಕ್ಷೆಗಳನ್ನು ನಡೆಸಬೇಕಾಗಿದೆ. ಇದರಿಂದ ಪ್ರತಿ ಪರೀಕ್ಷೆಗೆ ಕನಿಷ್ಠ 30 ದಿನಗಳ ಅವಶ್ಯತಕೆಯಿದೆ. ಒಟ್ಟಾರೆ 90 ದಿನಗಳು ಮೂರು ಪರೀಕ್ಷೆಯಿಂದ ಬೇಕಾಗಿದೆ. ಇದು ಉಪನ್ಯಾಸಕರು ಮತ್ತು ಶಿಕ್ಷಕರಿಗೆ ರಜೆ ಸೌಲಭ್ಯ ದೊರೆಯಂತಾಗಿದೆ. ತಕ್ಷಣ ಈ ಇಲಾಖೆಗಳನ್ನು ರಜಾ ರಹಿತ ಇಲಾಖೆಗಳೆಂದು ಘೋಷಣೆ ಮಾಡಿ, ರಜಾ ರಹಿತ ನೌಕರರಿಗೆ ನೀಡುತ್ತಿರುವ ಸೌಲಭ್ಯಗಳನ್ನು ದೊರೆಯುವಂತೆ ಆದೇಶ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ)ಯ ಜಿಲ್ಲಾ ಉಪ ನಿರ್ದೇಶಕರ ಕಚೇರಿಯ ದಿನನಿತ್ಯದ ವ್ಯವಹಾರವನ್ನು ಜಿಪಂ ಸಿಇಒ ಉಸ್ತುವಾರಿಗೆ ವಹಿಸಿ ನೀಡಿರುವ ಆದೇಶವನ್ನು ಹಿಂಪಡೆಯಬೇಕು. ಈ ಹಿಂದೆ ಯಾವ ರೀತಿ ವ್ಯವಸ್ಥೆ ಜಾರಿಯಲ್ಲಿತ್ತು ಅದನ್ನೇ ಮುಂದುವರೆಸಬೇಕು. ತಪ್ಪಿದ್ದಲ್ಲಿ ಮುಂದೆ ಕರ್ನಾಟಕ ರಾಜ್ಯ ಪ್ರಾಂಶುಪಾಲರ ಸಂಘ ಮತ್ತು ಉಪನ್ಯಾಸಕರ ಸಂಘ ಜಂಟಿಯಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಅವರು ಎಚ್ಚರಿಸಿದರು.

ಮುಖಂಡರಾದ ಎಂ.ಎ. ಮಹಾದೇವ್, ಉಮೇಶ್, ಹೊಂಗಯ್ಯ, ಪುಟ್ಟೇಗೌಡ ಇದ್ದರು.

click me!