ಭಾರತಕ್ಕೆ ಕಾಲಿಟ್ಟ 5ಜಿ ನೆಟ್‌ವರ್ಕ್: ಮೋಸ ಹೋಗದಿರಿ ಎಚ್ಚರ..!

By Kannadaprabha News  |  First Published Oct 7, 2022, 10:30 PM IST

4ಜಿಯಿಂದ 5ಜಿಗೆ ಬದಲಾವಣೆ ಮಾಡುತ್ತೇವೆಂದು ಹೇಳಿದ ಒಟಿಪಿ ಪಡೆದು ಹಣ ಲಪಟಾಯಿಸತ್ತಾರೆ ಎಚ್ಚರ, ಪೊಲೀಸ್‌ ಇಲಾಖೆಯಿಂದ ಜನರಲ್ಲಿ ಜಾಗೃತಿ


ಜಗದೀಶ ವಿರಕ್ತಮಠ

ಬೆಳಗಾವಿ(ಅ.07): ಮಕ್ಕಳ ಕಳ್ಳರ ವದಂತಿಯಿಂದ ಕಂಗೆಟ್ಟಿದ್ದ ಪೊಲೀಸರಿಗೆ ಇದೀಗ 5ಜಿ ನೆಟ್‌ವರ್ಕ್ ಬರುತ್ತಿದ್ದಂತೆ ಮತ್ತೆ ಹಾರ್ಡ್‌ವರ್ಕ್ ಆರಂಭವಾಗಿದೆ. ಕರೆಗಳ ಮೂಲಕ ಒಟಿಪಿ ಪಡೆದು ವಂಚನೆ ಮಾಡುವವರ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ಖಾಕಿ ಪಡೆ ಕಾರ್ಯ ಪ್ರವೃತ್ತವಾಗಿದೆ.

Tap to resize

Latest Videos

ಕೆಲವು ದಿನಗಳಿಂದ ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಕ್ಕಳ ಕಳ್ಳರ ಹಾವಳಿ ವದಂತಿ ಹೆಚ್ಚಾಗಿತ್ತು. ಇದರಿಂದಾಗಿ ಗ್ರಾಮಕ್ಕೆ ಆಗಮಿಸುವ ಹೊಸಬರು, ಅಪರಿಚಿತರು, ಸಾಧು, ಸನ್ಯಾಸಿಗಳು, ಭಿಕ್ಷುಕರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿ ಗ್ರಾಮಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ಜನರಲ್ಲಿರುವ ಮಕ್ಕಳ ಕಳ್ಳರ ಆತಂಕವನ್ನು ದೂರ ಮಾಡುವ ಪ್ರಯತ್ನ ಮಾಡಿದ್ದರು. ಇದೀಗ 5ಜಿ ನೆಟ್‌ವರ್ಕ್ ಹೆಸರಲ್ಲಿ ವಂಚನೆ ಜಾಲ ಮುಂಚೂಣಿಗೆ ಬಂದಿದೆ. ಮೊಬೈಲ್‌ ಬಳಕೆದಾರರು ಸ್ವಲ್ಪ ಯಾಮಾರಿದರೂ ಮಕ್ಮಲ್‌ ಟೋಪಿ ಹಾಕಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ನಯವಂಚಕರ ಜಾಲದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗುತ್ತಿದ್ದಾರೆ.

BELAGAVI: ಡಬಲ್ ಮರ್ಡರ್‌ಗೆ ಬೆಚ್ಚಿಬಿದ್ದ ಸುಳೇಭಾವಿ: ಪೊಲೀಸ್ ಬಿಗಿ ಬಂದೋಬಸ್ತ್!

ಇತ್ತೀಚಿಗೆ 4ಜಿ ಯಿಂದ 5ಜಿ (5ನೇ ಜನರೇಷನ್‌) ನೆಟ್‌ವರ್ಕ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯುಕ್ತವಾಗಿ ಚಾಲನೆ ನೀಡಿದ್ದಾರೆ. ಜತೆಗೆ ಶೀಘ್ರ ಹಾಗೂ ತ್ವರಿತವಾಗಿ ನೆಟ್‌ವರ್ಕ್ ಬಳಕೆದಾರರಿಗೆ ತಲುಪುವಂತೆ ಸೂಚನೆಯನ್ನೂ ನೀಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ನಯವಂಚಕರ ಗ್ಯಾಂಗ್‌ ಮೊಬೈಲ್‌ ಬಳಕೆದಾರರಿಗೆ ಕರೆ ಮಾಡಿ, ನಿಮ್ಮ ಬಳಿ ಇರುವ ಸಿಮ್‌ 4ಜಿ ಇದ್ದು, ಅದನ್ನು 5ಜಿಗೆ ಪರಿವರ್ತನೆ ಅಥವಾ ಅಪ್‌ಗ್ರೇಡ್‌ ಮಾಡಲಾಗುತ್ತದೆ ಎಂದು ಬಣ್ಣದ ಮಾತುಗಳನ್ನಾಡಿ ನಂಬಿಕೆ ಬರುವಂತೆ ಮನಸು ಪರಿವರ್ತನೆ ಮಾಡುತ್ತಾರೆ.

ಇವರ ಬಣ್ಣದ ಮಾತುಗಳಿಗೆ ಮರಳಾಗುತ್ತಿದ್ದಂತೆ ನಿಮ್ಮ ಮೊಬೈಲ್‌ಗೆ ಒಂದು ಮೆಸೇಜ್‌ ಬರುತ್ತದೆ. ಅದರಲ್ಲಿರುವ ಒಟಿಪಿ ನಂಬರ್‌ ಹೇಳಿ ಎಂದು ತಿಳಿಸಲಾಗುತ್ತದೆ. ಬಳಿಕೆ ಈ ನಂಬರ್‌ ಪಡೆಯುತ್ತಿದ್ದಂತೆ ಕ್ಷಣಾಧÜರ್‍ದಲ್ಲೇ ನಮ್ಮ ಬ್ಯಾಂಕ್‌ ಖಾತೆಯಲ್ಲಿರುವ ಸಾವಿರಾರು ಅಥವಾ ಲಕ್ಷಾಂತರ ರುಪಾಯಿ ವಂಚಕರು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಳ್ಳುವ ವ್ಯವಸ್ಥಿತ ಕಾರ್ಯವನ್ನು ಮಾಡುತ್ತಿದ್ದಾರೆ.

ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆ: ಜೀವದ ಹಂಗು ತೊರೆದು ಅಜ್ಜಿ ರಕ್ಷಿಸಿದ ಯುವಕ..!

ಇತ್ತೀಚಿಗೆ ಭಾರತದಲ್ಲಿ 5ಜಿ ಸೇವೆ ಆರಂಭಗೊಂಡಿದೆ. ಆದ ಕಾರಣ ವಿವಿಧ ನೆಟ್‌ವರ್ಕ್ ಕಂಪನಿಯವರು ಎಂದು ಹೇಳಿ ಕರೆ ಮಾಡಿ ನಿಮ್ಮ ಸಿಮ್‌ ಕಾರ್ಡ್‌ನ್ನು 4ಜಿ ಯಿಂದ 5ಜಿಗೆ ಅಪ್‌ಡೇಟ್‌ ಮಾಡುತ್ತೇವೆ ಎಂದು ಹೇಳಿ ಒಟಿಪಿ ಅಥವಾ ಲಿಂಕ್‌ ಕಳುಹಿಸಿ ನಿಮ್ಮ ಖಾತೆಯಲ್ಲಿರುವ ಹಣವನ್ನು ದೋಚುವ ಸಾಧ್ಯತೆ ಇದೆ. ಇದರಿಂದ ಯಾವುದೇ ಕಾರಣಕ್ಕೂ ಒಟಿಪಿ ಹೇಳುವುದಾಗಲಿ ಹಾಗೂ ಲಿಂಕ್‌ಗಳನ್ನು ಒತ್ತಬಾರದು ಎಂದು ಬೆಳಗಾವಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ, ವಾಟ್ಸಾಪ್‌, ಫೇಸ್‌ಬುಕ್‌ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಕಾರ್ಯವನ್ನು ಕೈಗೊಂಡಿದ್ದಾರೆ.

ಒಟಿಪಿ ಹಾಗೂ ಲಿಂಕ್‌ ಮೂಲಕ ಸಾರ್ವಜನಿಕರನ್ನು ವಂಚನೆ ಮಾಡಿರುವ ಹಲವಾರು ಪ್ರಕರಣಗಳು ನಡೆದಿವೆ. ಈ ಹಿನ್ನೆಲೆಯಲ್ಲಿ 5ಜಿ ಸೇವೆ ಹೆಸರಿನಲ್ಲಿಯೂ ಜನರನ್ನು ವಂಚನೆ ಮಾಡಬಾರದು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ವ್ಯವಹರಿಸಬೇಕೆಂಬ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಒಟಿಪಿ ಹೇಳುವುದಾಗಲಿ ಅಥವಾ ಲಿಂಕ್‌ ಒತ್ತುವುದಾಗಲಿ ಮಾಡಬಾರದು ಅಂತ ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸಂಜೀವ್‌ ಪಾಟೀಲ ತಿಳಿಸಿದ್ದಾರೆ. 
 

click me!