ಸುಮಾರು ವರ್ಷಗಳಿಂದ ನೂರಾರು ಕೆರೆ ತುಂಬಿದೆ ಅಂತ ಗ್ರಾಮಸ್ಥರು ಖುಷಿಯಾಗಿದ್ರು. ತುಂಬಿದ ಕೆರೆ ಇದೀಗ ಆ ಗ್ರಾಮದ ಜನರಲ್ಲಿ ಮತ್ತೊಮ್ಮೆ ಆತಂಕ ಹುಟ್ಟಿಸಿದೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಅ.7): ಅದು ಆ ಭಾಗದ ಜನರ ಪಾಲಿಗೆ ಆಸರೆಯಾಗಿದ್ದ ಬಹು ದೊಡ್ಡಕೆರೆ. ಸುಮಾರು ವರ್ಷಗಳಿಂದ ನೂರಾರು ಕೆರೆ ತುಂಬಿದೆ ಅಂತ ಗ್ರಾಮಸ್ಥರು ಖುಷಿಯಾಗಿದ್ರು. ತುಂಬಿದ ಕೆರೆ ಇದೀಗ ಆ ಗ್ರಾಮದ ಜನರಲ್ಲಿ ಮತ್ತೊಮ್ಮೆ ಆತಂಕ ಹುಟ್ಟಿಸಿದೆ. ವಿಶಾಲ ಕೆರೆಯ ಹರವು ತುಂಬಿದ ನೀರು, ಬಿರುಕು ಬಿಟ್ಟ ಕೆರೆಯ ಏರಿ. ಇದು ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ಹೊರವಲಯದಲ್ಲಿರುವ ಬಿಚ್ಚುಗತ್ತಿ ಭರಮಣ್ಣನಾಯಕ ದೊಡ್ಡಕೆರೆ. ಬಿಚ್ಚುಗತ್ತಿ ಭರಮಣ್ಣ ನಾಯಕನಿಂದ ನಿರ್ಮಾಣವಾಗಿದ್ದ ಈ ಕೆರೆ ಸುಮಾರು 50 ವರ್ಷಗಳ ಬಳಿಕ ಇದೀಗ ತುಂಬಿದ್ದರಿಂದ ಕೆರೆಯ ಏರಿ ಮೇಲಿನ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಹೋದ ವರ್ಷ ಸಹ ಇದೇ ರೀತಿ ಹಾದಿ ಬಿರುಕು ಬಿಟ್ಟಿತ್ತು. ಆದ್ರೆ ಅಧಿಕಾರಿಗಳು, ಜನಪ್ರತಿನಿಧಿಗಳು ಏನೂ ಆಗಲ್ಲ ಎಂದು ಆತಂಕ ಪಡಬೇಡಿ ಎಂದು ಕಾಮಗಾರಿ ನಡೆಸಿದ್ರು. ಅದ್ರೆ ಕಾಮಗಾರಿ ನಡೆಸಿದ್ರು ಮತ್ತೊಮ್ಮೆ ಕೆರೆ ಏರಿ ಬಿರುಕು ಬಿಟ್ಟಿರೋದು ಸುತ್ತಮುತ್ತಲಿನ ಗ್ರಾಮಸ್ಥರು ಮತ್ತಷ್ಟು ಆತಂಕ ಸೃಷ್ಟಿಸಿದೆ. ತುಂಗಭದ್ರಾ ನದಿಯಿಂದ ಕೆರೆಗೆ ಹೋದ ವರ್ಷದಿಂದ ಸತತವಾಗಿ ನೀರು ಹರಿಯುತ್ತಿದೆ. ಇದರಿಂದ ಕೆರೆ ತುಂಬಿದೆ.
undefined
ಕಳೆದ ವರ್ಷವೇ ಹೀಗೆ ಬಿರುಕು ಬಿಟ್ಟು ಹಳೇ ಕಾಮಗಾರಿಯನ್ನು ಹೊಡೆದುಹಾಕಿ ಹೊಸ ಕಾಮಗಾರಿಯ ಮೂಲಕ ಹಾದಿಗೆ ಮಣ್ಣನ್ನು ತುಂಬಿಸಲಾಗಿತ್ತು. ಆಗ ಅದರಲ್ಲಿ ಯಶಸ್ಸು ಲಭ್ಯವಾಗಿತ್ತು. ಆದ್ರೆ ಕಳೆದ ಎರಡು ದಿನಗಳಲ್ಲಿ ಹೋದ ವರ್ಷ ಏರಿ ಬಿರುಕುಬಿಟ್ಟ ಜಾಗದಲ್ಲೇ ಮತ್ತೆ ಬಿರುಕು ಕಾಣಿಸಿಕೊಂಡಿದ್ದರಿಂದ ಗ್ರಾಮಸ್ಥರು, ರೈತರು ಆತಂಕಕ್ಕೀಡಾಗಿದ್ದಾರೆ.
ಕೋಟೆ ಕೆರೆ ಅಭಿವೃದ್ಧಿಗೆ ಡಿಪಿಆರ್ ಸಿದ್ಧಪಡಿಸಿ: ವರಸಿದ್ಧಿ
ಕೆರೆ ಬಹಳ ಪುರಾತನವಾಗಿದ್ದು ಮೊದಲಿನ ಏರಿ ಸರಿಯಾಗಿದೆ. ಅದರ ಪಕ್ಕದಲ್ಲಿ ಕಾಮಗಾರಿ ನಡೆಯುತ್ತಿರುವ ಕೆರೆಯ ಏರಿ ಬಿರುಕು ಬಿಟ್ಟಿರುವುದರಿಂದ ಇಂದು ಸಿರಿಗೆರೆ ತರಳಬಾಳು ಮಠದ ಶ್ರೀಗಳು ಸಹ ಭರಮಸಾಗರ ಕೆರೆಗೆ ಭೇಟಿ ನೀಡಿ, ಪರಿಶೀಲಿಸಿದರು. ಸುಮಾರು ಈ ಕೆರೆಯಿಂದ ಭರಮಸಾಗರ ಸುತ್ತಮುತ್ತಲ ಹಳ್ಳಿಯ 43 ಕೆರೆಗಳಿಗೆ ನೀರಾವರಿಗಾಗಿ ನೀರು ಹರಿಸಲಾಗುತ್ತದೆ. ಹೀಗಾಗಿ ಸುಮಾರು ಎರಡೂವರೆ ಗಂಟೆ ಪರಿಶೀಲಿಸಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ಶ್ರೀಗಳು ತತ್ ಕ್ಷಣ ಪರಿಹಾರ ಕಂಡುಕೊಳ್ಳುವಂತೆ, ರೈತರಿಗೆ ಅನುಕೂಲವಾಗಲಿ ಎಂದು ಮನವಿ ಮಾಡಿದರು.
ಐತಿಹಾಸಿಕ ಡಣಾಯಕನ ಕೆರೆಯಲ್ಲಿ ಬೊಂಗಾ: ಆತಂಕದಲ್ಲಿ ರೈತರು
ಒಟ್ಟಾರೆ ಭರಮಸಾಗರ ದಲ್ಲಿರುವ ದೊಡ್ಡಕೆರೆಯ ಏರಿ ಬಿರುಕು ಬಿಟ್ಟಿದ್ದರಿಂದ ಏರಿಯ ಮೇಲಿನಿಂದ ಸಂಪರ್ಕ ಕಲ್ಪಿಸುವ ರಸ್ತೆ ಕಡಿತಗೊಂಡಿದೆ. ಹೀಗಾಗಿ ಮೂರ್ನಾಲ್ಕು ಗ್ರಾಮದ ಜನ ನಡೆದುಕೊಂಡೇ ಓಡಾಡಬೇಕಿದೆ. ಬೇಗ ಬಿರುಕು ಬಿಟ್ಟ ಕೆರೆಯ ಏರಿಯ ಕಾಮಗಾರಿ ನಡೆದು, ಅದಕ್ಕೆ ಪರಿಹಾರ ಸಿಗಬೇಕಿದೆ. ಕೆರೆಯ ಹಳೆಯ ಏರಿ ಭದ್ರವಾಗಿದ್ದು, ಪಕ್ಕದ ಏರಿಯೂ ಭದ್ರವಾಗಲಿ ಎಂಬುದು ಗ್ರಾಮಸ್ಥರ ಆಶಯ.