* ಫೆಬ್ರವರಿ ಅಂತ್ಯದೊಳಗೆ ಮೀಟರ್ ಪರಿಷ್ಕರಣೆಗೆ ಅವಕಾಶ
* ಕನಿಷ್ಠ ಪ್ರಯಾಣ ದರದ ನಂತರದ ಪ್ರತಿ ಕಿ.ಮೀ.ದರ 15ಕ್ಕೆ ಹೆಚ್ಚಳ
* ರಾತ್ರಿ 10ರಿಂದ ಬೆಳಗ್ಗೆ 5ರ ವರೆಗೆ ನಿಗದಿತ ದರದ ಅರ್ಧಪಟ್ಟು ಹೆಚ್ಚಳ
ಬೆಂಗಳೂರು(ಡಿ.01): ಕಳೆದ ಒಂಬತ್ತು ವರ್ಷಗಳ ಬಳಿಕ ಬೆಂಗಳೂರು(Bengaluru) ನಗರದಲ್ಲಿ ಆಟೋ ಪ್ರಯಾಣ ದರ(Auto Fare) ಹೆಚ್ಚಳ ಮಾಡಿದ್ದು, ಬುಧವಾರದಿಂದ (ಡಿ.1) ಅಧಿಕೃತವಾಗಿ ಜಾರಿಗೆ ಬರಲಿದೆ.
ಪ್ರತಿ 1.8 ಕಿ.ಮೀ. ದೂರದವರೆಗೂ ಈವರೆಗೂ ಇದ್ದ ಕನಿಷ್ಠ ಪ್ರಯಾಣ ದರ (Minimum Charge) 25ಗಳಿಂದ 30ಕ್ಕೆ ಏರಿಕೆಯಾಗಲಿದೆ. ಕನಿಷ್ಠ ಪ್ರಯಾಣ ದರದ ನಂತರದ ಪ್ರತಿ ಕಿ.ಮೀ.ದರ 15ಕ್ಕೆ ಹೆಚ್ಚಳವಾಗಲಿದೆ.
ಕಾಯುವಿಕೆಯ ದರ(Waiting Charge) ಮೊದಲ 5 ನಿಮಿಷ ಉಚಿತವಾಗಿರುತ್ತದೆ(Free), ನಂತರ ಪ್ರತಿ 15 ನಿಮಿಷಕ್ಕೆ 5 ನಿಗದಿಗೊಳಿಸಲಾಗಿದೆ. ಪ್ರಯಾಣಿಕರ ಲಗೇಜು ದರ ಮೊದಲ 20 ಕೆ.ಜಿ.ಗೆ ಉಚಿತವಾಗಿರಲಿದೆ. 20 ಕೆ.ಜಿ.ಯಿಂದ 50 ಕೆ.ಜಿ.ವರೆಗೆ .5 ನಿಗದಿ ಪಡಿಸಲಾಗಿದೆ. ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ಆಟೋ ಪ್ರಯಾಣ ದರ ಸಾಮಾನ್ಯದರ ಜತೆಗೆ ಅರ್ಧ ಪಟ್ಟು ಹೆಚ್ಚಳವಾಗಲಿದೆ.
ಆಟೋ ಪ್ರಯಾಣ ದರದಲ್ಲಿ ಪರಿಷ್ಕರಣೆಯಾಗಿರುವ ಹಿನ್ನೆಲೆಯಲ್ಲಿ ಆಟೋ ಚಾಲಕರು(Auto Drivers) ತಮ್ಮ ಆಟೋಗಳ ಮೀಟರ್‌ಗಳಿಗೆ 2022 ಫೆಬ್ರವರಿ 28ರೊಳಗೆ ಪುನಃ ಸಾರಿಗೆ ಅಧಿಕಾರಿಗಳಿಂದ ಪ್ರಮಾಣೀಕರಿಸಿಕೊಂಡು ಮುದ್ರೆ ಹಾಕಿಸಿಕೊಳ್ಳಬೇಕಾಗಿದೆ. ಅಲ್ಲದೆ ದರಗಳ ವಿವರವನ್ನು ಪ್ರತಿಯೊಂದು ಆಟೋ ರಿಕ್ಷಾದಲ್ಲಿ ಪ್ರಯಾಣಿಕರಿಗೆ(Passengers) ಕಾಣುವಂತೆ ಪ್ರದರ್ಶಿಸಬೇಕಾಗಿದೆ. ರಾತ್ರಿ ಪ್ರಯಾಣ ಮಾಡುವವರು (ರಾತ್ರಿ 10ರಿಂದ ಬೆಳಗ್ಗೆ 5ರ ವರೆಗೆ ನಿಗದಿತ ದರದ ಅರ್ಧಪಟ್ಟು ಹೆಚ್ಚಳ) ಪ್ರಯಾಣ ವೆಚ್ಚದ ಒಂದೂವರೆ ಪಟ್ಟು ಪಾವತಿ ಮಾಡಬೇಕಾಗುತ್ತದೆ.
Price Hike ಶಾಕ್; ಶೀಘ್ರದಲ್ಲೇ ಮದ್ಯ, ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳ ದರ ಹೆಚ್ಚಳ!
ಆಟೋ ದರ (ರು.ಗಳಲ್ಲಿ) ಕನಿಷ್ಠ ದರ 30
2ಕಿ.ಮೀ ಬಳಿಕ ಪ್ರತಿ ಕಿ.ಮೀ 15
ಕಾಯುವಿಕೆ 5 ನಿಮಿಷದ ಬಳಿಕ 5
ಮೊದಲ 20 ಕೆಜಿ ಲಗ್ಗೇಜ್ ಉಚಿತ
ಹೆಚ್ಚುವರಿ 20 ಕೆಜಿ ಲಗ್ಗೇಜ್ 5
ಆಟೋ ದರ ಏರಿಕೆಗೆ ಮನವಿ
ಪೆಟ್ರೋಲ್(Petrol), ಡಿಸೇಲ್(Diesel), ಹಾಗೂ ಗ್ಯಾಸ್(Gas) ದರ ಏರಿಕೆಯಿಂದ ಕಂಗಾಲಾಗಿದ್ದಾರೆ. ಬೆಂಗಳೂರಿನಲ್ಲಿ 2 ಲಕ್ಷ ಆಟೋ ಚಾಲಕರು ನಿತ್ಯ ಸಂಚಾರ ಮಾಡುತ್ತಾರೆ. ಪ್ರಸ್ತುತ ಪ್ರಯಾಣ ದರ 25 ರು. ಇದ್ದು ಇದನ್ನ 36 ರು.ಗಳಿಗೆ ಏರಿಕೆ ಮಾಡುವಂತೆ ಮಾರ್ಚ್‌ನಲ್ಲಿ ಮನವಿ ಮಾಡಲಾಗುತ್ತು.
2013 ರಲ್ಲಿ 1.9 ಕಿ ಮೀಟರ್ ಗೆ ಕನಿಷ್ಟ ಪ್ರಯಾಣ ದರ 20 ರಿಂದ 25 ರು. ಹೆಚ್ಚಳವಾಗಿತ್ತು. 2019 ರಲ್ಲಿ ದರ ಹೆಚ್ಚಳ ಮಾಡುವಂತೆ ಮನವಿ ಮಾಡಲಾಗಿತ್ತು. ಆದರೆ ಆಟೋ ದರ ಹೆಚ್ಚಳಕ್ಕೆ ಸರ್ಕಾರ ಅನುಮತಿ ನೀಡಿರಲಿಲ್ಲ. ಆದ್ರೆ ಇದೀಗ ತೈಲ ಹಾಗೂ ಗ್ಯಾಸ್ ದರ ಹೆಚ್ಚಳ ಬೆನ್ನಲ್ಲೇ ದರ ಪರಿಷ್ಕರಣೆ ಮಾಡುವಂತೆ ಆಟೋ ಚಾಲಕರು ಮನವಿ ಮಾಡಿದ್ದರು.
ಬೆಂಗಳೂರಿನಲ್ಲಿ ಸಾವಿರಾರು ಆಟೋಗಳು ನಿತ್ಯ ಕಾರ್ಯನಿರ್ವಹಿಸುತ್ತಿದ್ದು, ಆಟೋಗಳ ದರ ಪರಿಷ್ಕರಣೆ ಮಾಡುವಂತೆ ಅಂದಿನ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಣಣ್ ಸವದಿ ಹಾಗೂ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಿಗೆ ಆಟೋ ಚಾಲಕರು ಮನವಿ ಮಾಡಿದ್ದರು.. ಇದೀಗ ಆಟೋ ದರ ಹೆಚ್ಚಳವಾಗಿದೆ. ಇದರಿಂದ ಜನಸಾಮಾನ್ಯರ ಜೀವನದ ಮೇಲೆ ಮತ್ತೊಂದು ದರ ಏರಿಕೆ ಬಿಸಿ ತಟ್ಟಲಿದೆ.
ಹೋಟೆಲ್ ತಿನಿಸು ಶೇ.10 ದುಬಾರಿ: ಇಂದಿನಿಂದಲೇ ಹೊಸ ದರ ಜಾರಿ!
ದಿನಸಿ, ತರಕಾರಿ, ಗ್ಯಾಸ್ ಎಲ್ಲವೂ ದುಬಾರಿ: ಬೀದಿ ಬದಿ ವ್ಯಾಪಾರಿಗಳಿಗೆ ಸಂಕಷ್ಟ
ನಿರಂತರ ಮಳೆ(Rain) ಹಾಗೂ ಇಂಧನ(Fuel), ದಿನಸಿ(Groceries) ವಸ್ತು ಹಾಗೂ ತರಕಾರಿಗಳ(Vegetable) ಬೆಲೆ ಏರಿಕೆಯಿಂದಾಗಿ ಬೀದಿ ಬದಿಯ ಸಣ್ಣ ಸಣ್ಣ ವ್ಯಾಪಾರಿಗಳು, ತಳ್ಳು ಗಾಡಿ ವ್ಯಾಪಾರಿಗಳು ತೀವ್ರ ಆರ್ಥಿಕ ತೊಂದರೆ ಅನುಭವಿಸುತ್ತಿದ್ದಾರೆ.
ನಿತ್ಯ ಸಗಟು ಮಾರುಕಟ್ಟೆಯಿಂದ ಸ್ವಲ್ಪ ಪ್ರಮಾಣದಲ್ಲಿ ತರಕಾರಿ ಖರೀದಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಸಣ್ಣ ವ್ಯಾಪಾರಿಗಳು ದುಬಾರಿ ದರದಲ್ಲಿ ತಂದ ತರಕಾರಿಗಳು ನಿರೀಕ್ಷಿತ ಪ್ರಮಾಣದಲ್ಲಿ ಖರೀದಿಯಾಗದೇ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಮಳೆಗೆ ತೊಯ್ದ ಸೊಪ್ಪುಗಳು ಬೇಗ ಹಾಳಾಗುತ್ತಿರುವುದರಿಂದ ಹಾಕಿದ ಬಂಡವಾಳ ಮರಳಿ ಸಿಗದಂತಾಗಿದೆ.