ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮ ನಡೆಯಿತು.
ವರದಿ : ರಾಜೇಶ್ ಕಾಮತ್, ಏಷ್ಯಾನೆಟ್ ಸುವರ್ಣನ್ಯೂಸ್
ಶಿವಮೊಗ್ಗ (ಮೇ.28) : ಶಿವಮೊಗ್ಗ (Shivamogga) ಜಿಲ್ಲೆಯ ಶಿಕಾರಿಪುರ (Shikaripura) ತಾಲೂಕಿನ ಈಸೂರು (Issuru) ಗ್ರಾಮದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಗ್ರಾಮ ಪಂಚಾಯಿತಿ, ಇವರ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಸ್ವಾತಂತ್ರ್ಯ ಪೂರ್ವದಲ್ಲಿ ಸ್ವಾತಂತ್ರ ಗ್ರಾಮ ಎಂದು ಘೋಷಿಸಿಕೊಂಡ ಈಸೂರು ಗ್ರಾಮದಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮಕ್ಕೆ ಸಂಸದರಾದ ಬಿ. ವೈ ರಾಘವೇಂದ್ರ (BY Raghavendra ) ಚಾಲನೆ ನೀಡಿದರು.
ಸಂಸದ ಬಿ ವೈ ರಾಘವೇಂದ್ರ ಉದ್ಘಾಟನೆ ಮಾಡಿ ಮಾತನಾಡಿ ಛತ್ರವತಿ ಶಿವಾಜಿ ಮಹಾರಾಜರ ಮಗ ರಾಜಾರಾಮನು ಮೊಘಲರನ್ನು ಎದುಲಿಸಲು ಯತ್ನಿಸಿದಾಗ ಔರಂಗಜೇಬನು ದೊಡ್ಡ ಸೈನ್ಯವನ್ನು ದಾಳಿಗೆ ಕಳಿಸುತ್ತಾನೆ. ಇದರಿಂದಾಗಿ ರಾಜಾರಾಮನು ಕೆಳದಿ (Keladi) ಸಂಸ್ಥಾನದಲ್ಲಿ ಆಶ್ರಯ ಕೇಳುತ್ತಾನೆ. ಆಗ ಕರುಣಾಮಯಿಯಾದ ಕೆಳದಿ ರಾಣಿ ಚೆನ್ನಮ್ಮಾಜಿ ರಾಜಾರಾಮನಿಗೆ ಅಭಯ ನೀಡಿ ಯುದ್ಧ ಮಾಡಿ ಮೊಗಲ್ ದೊರೆ ಔರಂಗಜೇಬನ (Aurangzeb) ಬಲಾಢ್ಯ ಸೈನ್ಯವನ್ನು ಸೋಲಿಸಿ ಪರಾಕ್ರಮ ಮೆರೆದ ವೀರ ನಾರಿ ಕೆಳದಿ ಚೆನ್ನಮ್ಮಾಜಿ ಎಂದು ಸಂಸದರಾದ ಬಿ. ವೈ ರಾಘವೇಂದ್ರ ಸಭೆಯಲ್ಲಿ ಮಾತನಾಡಿದರು.
PSI RECRUITMENT SCAM ಕಿಂಗ್‌ಪಿನ್ ಆರ್.ಡಿ ಪಾಟೀಲ್ ಮನೆ ಕೆಲಸದಾಳು ಅರೆಸ್ಟ್!
ಏಸೂರು ಕೊಟ್ಟರು ಈಸೂರು ಕೊಡೆವು ಎಂಬ ಘೋಷಣೆಯ ಮೂಲಕ ಸ್ವಾತಂತ್ರ್ಯ ಪೂರ್ವದಲ್ಲೇ ಸ್ವಾತಂತ್ರ್ಯ ಗ್ರಾಮ ಎಂದು ಘೋಷಿಸಿಕೊಂಡರು. ನಮ್ಮ ಈಸೂರಿನಲ್ಲಿ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮ ನೆಡೆಯುತ್ತಿರುವುದು ನಮ್ಮ ಊರಿನ ಹಿರಿಮೆಯನ್ನು ಎಲ್ಲೆಡೆ ಸಾರುತ್ತಿದೆ.
1942ರ ಸಪ್ಟೆಂಬರ್ ತಿಂಗಳ 25 ರಂದು ಬ್ರಿಟಿಷರಿಂದ ಸ್ವಾತಂತ್ರ್ಯ ಘೋಷಣೆ, ಕೊನೆಗೆ, ಈ ಹೋರಾಟ ಸಂಘಟಿಸಿ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿ ಸುಮಾರು ಒಂದು ವರ್ಷದ ಬಳಿಕ ಭಾರತ ಮಾತಾಕಿ ಜೈ ಎನ್ನುತ್ತಾ ನೇಣು ಹಗ್ಗಕ್ಕೆ ಕೊರಳು ಕೊಟ್ಟ ಗುರುಪ್ಪ, ಜೀನಲ್ಲಿ ಮಲ್ಲಪ್ಪ, ಸೂರ್ಯನಾರಾಯಣಾಚಾರ್, ಬಡಕಳ್ಳಿ ಹಾಲಪ್ಪ ಹಾಗೂ ಗೌಡ್ರು ಶಂಕರಪ್ಪ ಅವರ ಸ್ಮರಣೆಯೇ ನಮ್ಮಲ್ಲಿ ದೇಶಭಕ್ತಿಯ ಭಾವ ಹುಟ್ಟಿಸುತ್ತದೆ. ಅಂದು ಈಸೂರು ಗ್ರಾಮದ ಜನತೆ "ಈಸೂರು ಸ್ವಾತಂತ್ರ್ಯ ಗ್ರಾಮ ಬ್ರಿಟಿಷರಿಗೆ ಪ್ರವೇಶವಿಲ್ಲ'' ಎಂಬ ನಾಮ ಫಲಕವನ್ನು ಊರ ಪ್ರವೇಶದ್ವಾರಕ್ಕೆ ಹಾಕಿದ್ದರು ಎಂದರು.
HIJAB BAN; ಹೈಕೋರ್ಟ್ ಆದೇಶದ ವಿರುದ್ಧದ ಮೇಲ್ಮನವಿ ಪರಿಶೀಲನೆಗೆ ಸುಪ್ರೀಂ ಒಪ್ಪಿಗೆ
ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಕೆ. ಎಸ್ ಗುರುಮೂರ್ತಿ ಯವರು, ಸಾಮಾಜಿಕ ಚಿಂತಕರಾದ ಪ್ರಕಾಶ್ ಮಲ್ಪೆ, ಜಿಲ್ಲಾಪಂಚಾಯತ್ CEO ವೈಶಾಲಿ, ತಹಶೀಲ್ದಾರ್ ಕವಿರಾಜ್, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಚೆನ್ನವೀರಪ್ಪ, ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು ಮತ್ತಿತರ ಮುಖಂಡರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.