ಕೊರೋನಾ ಎಫೆಕ್ಟ್‌ನಿಂದ ಚಿತ್ರಮಂದಿರಗಳಿಗೆ ಪ್ರೇಕ್ಷಕರ ಕೊರತೆ| ಸಿರುಗುಪ್ಪ ನಗರದ ಚಿತ್ರಮಂದಿರಗಳು ಖಾಲಿ ಖಾಲಿ| ಟಿಕೆಟ್ ದರದಲ್ಲಿ ಶೇ. 50ರಷ್ಟು ಕಡಿತ ಮಾಡಿದ ಚಿತ್ರಮಂದಿರಗಳ ಮಾಲೀಕರು|
ಸಿರುಗುಪ್ಪ(ಮಾ.12): ಕೊರೋನಾ ಎಫೆಕ್ಟ್‌ನಿಂದ ನಗರದಲ್ಲಿರುವ ಚಿತ್ರಮಂದಿರಗಳಿಗೆ ಪ್ರೇಕ್ಷಕರ ಕೊರತೆ ಉಂಟಾಗಿದ್ದು, ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯಲು ಚಲನಚಿತ್ರ ಮಂದಿರಗಳ ಮಾಲೀಕರು ಟಿಕೆಟ್ ದರವನ್ನು ಕಡಿಮೆ ಮಾಡಿದ್ದರೂ ಪ್ರೇಕ್ಷಕರು ಮಾತ್ರ ಚಿತ್ರಮಂದಿರಗಳ ಕಡೆಗೆ ಸುಳಿಯುತ್ತಿಲ್ಲ. ಕೇವಲ ಬೆರಳೆಣಿಕೆಯಷ್ಟು ಪ್ರೇಕ್ಷಕರು ಮಾತ್ರ ಕಳೆದ ಕೆಲವು ದಿನಗಳಿಂದ ಬರುತ್ತಿದ್ದು, ಮಾಲೀಕರನ್ನು ಚಿಂತೆಗೀಡು ಮಾಡಿದೆ.
ನಗರದಲ್ಲಿರುವ ರಾಮಕೃಷ್ಣ ಚಿತ್ರಮಂದಿರದಲ್ಲಿ ಕನ್ನಡ ಚಿತ್ರ ದ್ರೋಣ, ಬಾಲಾಜಿ ಚಿತ್ರಮಂದಿರದಲ್ಲಿ ಭಾಗಿ-3 ಹಿಂದಿ ಚಲನಚಿತ್ರ ಪ್ರದರ್ಶನಗೊಳ್ಳುತ್ತಿವೆ. ಆದರೆ ಕಳೆದ ಕೆಲವು ದಿನಗಳಿಂದ ಚಿತ್ರ ಮಂದಿರಗಳ ಕಡೆಗೆ ಪ್ರೇಕ್ಷಕರು ಬಾರದೇ ಇರುವುದರಿಂದ ಚಿತ್ರಮಂದಿರಗಳ ಮಾಲೀಕರು ಟಿಕೆಟ್ ದರದಲ್ಲಿ ಶೇ. 50ರಷ್ಟು ಕಡಿತ ಮಾಡಿದ್ದು, ಈ ಬಗ್ಗೆ ಚಲನಚಿತ್ರ ಮಂದಿರಗಳ ಮುಂದೆ ಸೂಚನಾಫಲಕ ಅಳವಡಿಸಿದ್ದರೂ ಚಲನಚಿತ್ರ ಮಂದಿರಗಳು ಖಾಲಿ ಖಾಲಿಯಿವೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಮುಂಚೆ ಚಿತ್ರ ಬಿಡುಗಡೆಗೊಂಡಾಗ ಚಿತ್ರಮಂದಿರಗಳ ಮಾಲೀಕರು ಬಾಲ್ಕನಿಗೆ 100 ರಿಂದ 200ಗಳವರೆಗೆ ದರ ನಿಗದಿ ಮಾಡಿದ್ದರು, ಎಕಾನಮಿಕ್ ಕ್ಲಾಸ್‌ಗೆ 70 ರಿಂದ 100ರ ವೆಗೆ ದರ ನಿಗದಿ ಮಾಡಿದ್ದರೂ ಮುಗಿಬಿದ್ದು ಟಿಕೆಟ್ ಕೊಂಡು ಚಿತ್ರ ನೋಡುತ್ತಿದ್ದ ಪ್ರೇಕ್ಷಕರು ಇಂದು ಬಾಲ್ಕನಿಗೆ 50, ಕೆಳ ತರಗತಿಗೆ 40 ನಿಗದಿಗೊಳಿಸಿದರೂ ಚಿತ್ರಮಂದಿರಗಳ ಹತ್ತಿರ ತಿರುಗಿನೋಡದೇ ಇರುವುದರಿಂದ ಪ್ರಸಿದ್ಧ ನಾಯಕರ ಚಿತ್ರಗಳ ವೀಕ್ಷಣೆಗೆ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿದೆ.