
ಹಾಸನ ಮತ್ತು ಹೊಳೆ ನರಸೀಪುರ ಯಾರ್ಡ್‌ಗಳಲ್ಲಿ ಅಗತ್ಯ ನಿರ್ವಹಣಾ ಕಾರ್ಯಗಳಿಂದಾಗಿ, ಈ ಕೆಳಗಿನ ರೈಲು ಸೇವೆಗಳನ್ನು ರದ್ದುಗೊಳಿಸಲಾಗುತ್ತದೆ, ಭಾಗಶಃ ರದ್ದುಪಡಿಸಲಾಗುತ್ತದೆ ಮತ್ತು ನಿಯಂತ್ರಿಸಲಾಗುತ್ತದೆ ಎಂದು ದಕ್ಷಿಣ ಪಶ್ಚಿಮ ರೈಲ್ವೆ ಪ್ರಕಟಣೆ ಮೂಲಕ ತಿಳಿಸಿದೆ.
1. ರೈಲು ಸಂಖ್ಯೆ 56267 ಅರಸೀಕೆರೆ-ಮೈಸೂರು ದೈನಂದಿನ ಪ್ಯಾಸೆಂಜರ್ ಅನ್ನು 19.08.2026 ರಂದು ರದ್ದುಗೊಳಿಸಲಾಗಿದೆ.
2. ರೈಲು ಸಂಖ್ಯೆ 56268 ಮೈಸೂರು-ಅರಸೀಕೆರೆ ದೈನಂದಿನ ಪ್ಯಾಸೆಂಜರ್ ಅನ್ನು 25.08.2026 ಮತ್ತು 01.09.2026 ರಂದು ರದ್ದುಗೊಳಿಸಲಾಗಿದೆ
1. ರೈಲು ಸಂಖ್ಯೆ 16225 ಮೈಸೂರು-ಶಿವಮೊಗ್ಗ ಟೌನ್ ಡೈಲಿ ಎಕ್ಸ್‌ಪ್ರೆಸ್ ಅನ್ನು 19.08.2026 ರಂದು ಮೈಸೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದುಪಡಿಸಲಾಗುವುದು.
2. ರೈಲು ಸಂಖ್ಯೆ 16226 ಶಿವಮೊಗ್ಗ ಟೌನ್-ಮೈಸೂರು ಡೈಲಿ ಎಕ್ಸ್‌ಪ್ರೆಸ್ ಅನ್ನು 25.08.2026 ಮತ್ತು 01.09.2026 ರಂದು ಅರಸೀಕೆರೆ ಮತ್ತು ಮೈಸೂರು ನಡುವೆ ಭಾಗಶಃ ರದ್ದುಪಡಿಸಲಾಗುವುದು.
1. ರೈಲು ಸಂಖ್ಯೆ 16221 ತಾಳಗುಪ್ಪ-ಮೈಸೂರು ಕುವೆಂಪು ಎಕ್ಸ್‌ಪ್ರೆಸ್, 19.08.2026 ರಂದು ಪ್ರಾರಂಭವಾಗಲಿದ್ದು, ಮಾರ್ಗದಲ್ಲಿ 90 ನಿಮಿಷಗಳ ಕಾಲ ನಿಯಂತ್ರಣದಲ್ಲಿರಲಿದೆ.
ಇದಾಗಲೇ ಇನ್ನೂ ಕೆಲವು ರೈಲುಗಳ ರದ್ದತಿ ಕುರಿತು ಮಾಹಿತಿ ನೀಡಲಾಗಿದೆ.
ರೈಲು ಸಂಖ್ಯೆ 20652: ತಾಳಗುಪ್ಪ–ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್ (Talguppa – KSR Bengaluru Express) ರೈಲಿನ ಸಂಚಾರವು ಭಾಗಶಃ ರದ್ದಾಗಲಿದೆ. ಆಗಸ್ಟ್ 22, 23 ಮತ್ತು 26 ರಂದು ಈ ರೈಲು ಅರಸೀಕೆರೆಯಲ್ಲಿಯೇ ಮುಕ್ತಾಯಗೊಳ್ಳಲಿದ್ದು, ಮುಂದೆ ಹೋಗುವವರು ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕಿದೆ.
ರೈಲು ಸಂಖ್ಯೆ 20689: ಯಶವಂತಪುರ–ಶಿವಮೊಗ್ಗ ಟೌನ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ( Yesvantpur–Shivamogga Town Intercity Express) ರೈಲಿನ ಮಾರ್ಗ ಬದಲಾವಣೆ ಮಾಡಲಾಗಿದೆ. ಆಗಸ್ಟ್ 22, 23 ಮತ್ತು 26 ರಂದು ಈ ರೈಲು ಚಿಕ್ಕಬಾಣಾವರ, ನೆಲಮಂಗಲ, ಹಾಸನ ಹಾಗೂ ಅರಸೀಕೆರೆ ಮಾರ್ಗವಾಗಿ ಸಂಚರಿಸಲಿದೆ. ಈ ರೈಲಿಗೆ ತುಮಕೂರು ಮತ್ತು ತಿಪಟೂರು ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
ಆಗಸ್ಟ್ 26 ರಂದು ಈ ರೈಲುಗಳ ಸೇವೆ ರದ್ದು ಆಗಲಿವೆ. ಅವುಗಳೆಂದರೆ
ಚಿಕ್ಕಮಗಳೂರು–ಯಶವಂತಪುರ (ರೈಲು ಸಂಖ್ಯೆ: 16239),
ಯಶವಂತಪುರ–ಚಿಕ್ಕಮಗಳೂರು (ರೈಲು ಸಂಖ್ಯೆ: 16240),
ಕೆಎಸ್ಆರ್ ಬೆಂಗಳೂರು–ಮೈಸೂರು ಒಡೆಯರ್ (ರೈಲು ಸಂಖ್ಯೆ: 12614),
ಕೆಎಸ್ಆರ್ ಬೆಂಗಳೂರು–ತುಮಕೂರು ಮೆಮು (ರೈಲು ಸಂಖ್ಯೆ: 66567) ಹಾಗೂ
ತುಮಕೂರು–ಕೆಎಸ್ಆರ್ ಬೆಂಗಳೂರು ಮೆಮು (ರೈಲು ಸಂಖ್ಯೆ: 66572)
ಅದೇ ರೀತಿ, ಆಗಸ್ಟ್ 22 ಮತ್ತು 26 ರಂದು ಯಲಹಂಕ–ಅರಸೀಕೆರೆ (ರೈಲು ಸಂಖ್ಯೆ: 66505) ಮತ್ತು ಅರಸೀಕೆರೆ–ಯಲಹಂಕ (ರೈಲು ಸಂಖ್ಯೆ: 66506) ಮೆಮು ರೈಲುಗಳ ಸಂಚಾರವೂ ಇರುವುದಿಲ್ಲ.
ಅಂತೆಯೇ, ವಾಸ್ಕೋ ಡ ಗಾಮ–ಯಶವಂತಪುರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 17310) ಹಾಗೂ ಮೈಸೂರು–ಬೆಳಗಾವಿ ವಿಶ್ವಮಾನವ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 20676) ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಇವು ತಿಪಟೂರು ಮತ್ತು ತುಮಕೂರು ಬದಲಿಗೆ ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.