Chikkamagaluru: ವಿಕ್ಟೋರಿಯಾ ರಾಣಿ ಕಾಲದ ಟೆಲಿಸ್ಕೋಪ್ ಮಾರಾಟಕ್ಕೆ ಯತ್ನ : ಓರ್ವನ ಬಂಧನ

By Sathish Kumar KH  |  First Published Jan 8, 2023, 8:14 PM IST

ಮರದಿಂದ ನಿರ್ಮಾಣವಾದ 1915ನೇ ಇಸವಿಯ ವಿಕ್ಟೋರಿಯಾ ರಾಣಿ ಕಾಲದ ದುಬಾರಿ ಬೆಲೆಯ ಟೆಲಿಸ್ಕೋಪನ್ನ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನ ಚಿಕ್ಕಮಗಳೂರು ಜಿಲ್ಲೆ ಕಡೂರು ಪೊಲೀಸರು ಬಂಧಿಸಿದ್ದಾರೆ.


ಚಿಕ್ಕಮಗಳೂರು (ಜ.08):  ಮರದಿಂದ ನಿರ್ಮಾಣವಾದ 1915ನೇ ಇಸವಿಯ ವಿಕ್ಟೋರಿಯಾ ರಾಣಿ ಕಾಲದ ದುಬಾರಿ ಬೆಲೆಯ ಟೆಲಿಸ್ಕೋಪನ್ನ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನ ಚಿಕ್ಕಮಗಳೂರು ಜಿಲ್ಲೆ ಕಡೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ಕೊಳವೆ ರೀತಿಯ ಉದ್ದವಾದ ಸುಮಾರು ಎರಡು ಅಡಿಗೂ ಉದ್ದವಿರುವ ಟೆಲಿಸ್ಕೋಪ್ ವಶಪಡಿಸಿಕೊಂಡಿದ್ದಾರೆ. 

ಮೈಸೂರಿನ ಹೆಬ್ಬಾಳ ಸಮೀಪದ ಸೆಕೆಂಡ್ ಸ್ಟೇಜ್ ನಿವಾಸಿ ಕೆಂಪರಾಜ್ ಬಂಧಿತ ಆರೋಪಿ. ಈ ಟೆಲಿಸ್ಕೋಪ್ ವಿಕ್ಟೋರಿಯಾ ರಾಣಿ ಕಾಲದ ವಿಕ್ಟೋರಿಯನ್ ಮೆರಿನ್ ಟೆಲಿಸ್ಕೋಪ್ ಎಂದು ತಿಳಿದು ಬಂದಿದೆ. ರಿಯಲ್ ಎಸ್ಟೇಟ್ ಕೆಲಸವನ್ನು ಮಾಡುವ ಬಂಧಿತ ಕೆಂಪರಾಜು ಈ ಟೆಲಿಸ್ಕೋಪನ್ನ ಮೈಸೂರಿನಲ್ಲಿ ಕಡಿಮೆ ಬೆಲೆಗೆ ಖರೀದಿ ಮಾಡಿದ್ದನು. ಅದನ್ನ ಚಿಕ್ಕಮಗಳೂರು ಜಿಲ್ಲೆ ಕಡೂರಿನ ಜೈನ್ ಟೆಂಪಲ್ ರಸ್ತೆಯ ವ್ಯಾಪಾರಿಗೆ ಸುಮಾರು 15 ಲಕ್ಷಕ್ಕೆ ಮಾರಾಟ ಮಾಡಲು ಯತ್ನಿಸುತ್ತಿದ್ದನು. ಈ ವೇಳೆ ಮಾಹಿತಿ ತಿಳಿದ ಕಡೂರು ಪೊಲೀಸರು ದಾಳಿ ಮಾಡಿ ಆರೋಪಿಯನ್ನ ವಶಕ್ಕೆ ಪಡೆದು, ಟೆಲಿಸ್ಕೋಪನ್ನ ವಶಕ್ಕೆ ಪಡೆದಿದ್ದಾರೆ.

Tap to resize

Latest Videos

ಚಿಕ್ಕಮಗಳೂರು: ಬಿಜೆಪಿ ಟಿಕೆಟ್‌ಗಾಗಿ ಅಭಿಮಾನಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ..!

ಆಂಗ್ಲೋ ಮೈಸೂರು ಕದನಕ್ಕೆ ನಂಟು?: ಇನ್ನು ಮೈಸೂರು ಮಹಾಸಂಸ್ಥಾನದ ಆಡಳಿತದ ಅವಧಿಯಲ್ಲಿ ದಂಗೆದ್ದು ಅಧಿಕಾರಕ್ಕೆ ಬಂದ ಶ್ರೀರಂಗಪಟ್ಟಣದ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್‌ ನಡುವೆ ಕದನಗಳು ನಡೆದಿವೆ. ಈ ವೇಳೆ ಮೈಸೂರು ಮೈಸೂರು ಮಹಾಸಂಸ್ಥಾನದಲ್ಲಿ ಸೇನೆಯಲ್ಲಿದ್ದ ಹೈದರಾಲಿ ಈ ಟೆಲಿಸ್ಕೋಪ್‌ ಅನ್ನು ಬಳಸಿದ್ದನೇ ಎಂಬ ಅನುಮಾನ ಕಾಡುತ್ತಿವೆ. ಜೊತೆಗೆ, ಆಂಗ್ಲೋ ಮೈಸೂರು ಯುದ್ಧದ ವೇಳೆ ಮೊದಲ ಎರಡು ಕದನದಲ್ಲಿ ಸೋಲನುಭವಿಸಿದ ಬ್ರಿಟೀಷರು ಈ ಟೆಲಿಸ್ಕೋಪ್‌ ನಿರ್ಮಿಸಿದ್ದರೇ ಎಂಬ ಶಂಕೆಯೂ ಇದೆ. ಆದರೆ, ಇದನ್ನು ಪುರಾತತ್ವ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಿದ ನಂತರ ಯಾವ ಕಾಲದ್ದು ಮತ್ತು ಯಾರ ಆಡಳಿತಾವಧಿಯಲ್ಲಿ ನಿರ್ಮಾಣ ಆಗಿದೆ ಎಂಬುದನ್ನು ಪತ್ತೆಹಚ್ಚಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದುಡಿದು ತಿನ್ನುವ ಅಂಗವಿಕಲ ಮಾದರಿ ಆಗಬೇಕು (ಚಿಕ್ಕಮಗಳೂರು:) ದೇಹದ ಯಾವುದೇ ಭಾಗ ಊನವಾಗಿದ್ದರೆ ಸಾಕು ಅದನ್ನೆ ನೆಪಮಾಡಿಕೊಂಡು ಉದರ ಪೋಷಣೆಗೆ ನಾನಾ ಹಗಲುವೇಷಗಳನ್ನು ತೊಟ್ಟು, ಸಾರ್ವಜನಿಕರೆದುರು ಕೈಯೊಡ್ಡುವುದನ್ನು ನೋಡಿದ್ದೇವೆ. ಕೈಕಾಲುಗಳಿಗೆ ಯಾವ ಗಾಯವಾಗದಿದ್ದರೂ ಬ್ಯಾಂಡೇಜ್ ಬಟ್ಟೆ ಸುತ್ತಿಕೊಂಡು ಬೇಡುವುದನ್ನು ಕಂಡಿದ್ದೇವೆ. ಆದರೆ ಇಲ್ಲೊಬ್ಬರು ವಿಶೇಷಚೇತನರಾಗಿದ್ದರೂ, ಕೈಯೊಡ್ಡಿ ಬೇಡುತ್ತಿಲ್ಲ, ಇನ್ನೊಬ್ಬರು ಹಂಗಿನಕೂಳು ತಿನ್ನುತ್ತಿಲ್ಲ, ತನಗೆ ಎದುರಾದ ಸಮಸ್ಯೆಗಳನ್ನು ದಿಟ್ಟತನದಿಂದ ಎದುರಿಸುವ ಮೂಲಕ ಬದುಕಿನ ಬಂಡಿಎಂಬ ನೊಗಕ್ಕೆ ಹೆಗಲುಕೊಟ್ಟು ಜೀವನವೆಂಬ ರಥವನ್ನು ಎಳೆಯುತ್ತಿದ್ದಾರೆ. ಆ ವ್ಯಕ್ತಿಯನ್ನು ನೋಡಬೇಕೆಂದರೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮಕ್ಕೆ ಹೋಗಬೇಕು. ಒಂದು ಕೈ ಸ್ವಾಧೀನ ಇಲ್ಲದಿದ್ದರೂ ದುಡಿಯುವ ಉತ್ಸಾಹ ಬತ್ತಿಲ್ಲ, ಛಲದಂಕ ಮಲ್ಲನಂತೆ ಅಂಗವಿಕಲತೆಯನ್ನು ಮೆಟ್ಟಿನಿಂತು ಬದುಕಿ ತೋರಿಸುತ್ತಿದ್ದಾರೆ. ವಿಶೇಷ ಚೇತನರಿಗೆ ಮಾದರಿಯಾಗಿದ್ದಾರೆ.

ಚಿಕ್ಕಮಗಳೂರು: ಬತ್ತದ ದುಡಿಯುವ ಉತ್ಸಾಹ, ಛಲದಂಕ ಮಲ್ಲನಂತೆ ಅಂಗವಿಕಲತೆ ಮೆಟ್ಟಿನಿಂತ ಧೀರ..!

ಸ್ವಾವಲಂಬಿ ಬದುಕು ನಡೆಸುವ ಮೂಲಕ ಇತರರಿಗೆ ಸ್ಪೂರ್ತಿ:  ಜೀವನದಲ್ಲಿ ಛಲವೊಂದಿದ್ದರೆ ಯಾವ ಸಾಧನೆಯನ್ನು ಮಾಡಬಹುದು ಎನ್ನುವುದಕ್ಕೆ ಅಂಗವಿಕಲತೆ ಹೊಂದಿರುವ ವ್ಯಕ್ತಿಯೊಬ್ಬರ ಸಾಹಸಗಾಥೆ ಇದು. ಬಲಗೈ ಸ್ವಾಧೀನ ಕಳೆದುಕೊಂಡಿದ್ದರೂ ಅದನ್ನು ನೆಪಮಾಡಿ ಕೊಂಡು ಕೊರಗುತ್ತಾ ಮೂಲೆಯಲ್ಲಿ ಕೂರದೆ,ಸ್ವಾವಲಂಬಿ ಬದುಕು ನಡೆಸುವ ಮೂಲಕ ಇತರರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ಈ ಛಲಗಾರ ವಿಶೇಷಚೇತನರನ್ನು ಕಾಣಬೇಕಾದರೆ ಬಣಕಲ್ ಗ್ರಾಮಕ್ಕೆ ತೆರಳಬೇಕು. ಅಲ್ಲಿ ಕಾಣಸಿಗುವ ವ್ಯಕ್ತಿಯೇ ಹೆಸರೆ ಸ್ವಾಮಿ. ಕ್ರೀಡಾ ಕ್ಷೇತ್ರವಿರಲಿ, ಶಿಖರರೋಹಿಗಳಾಗಿರಲಿ, ಇತರೆ ಕ್ಷೇತ್ರದಲ್ಲಿ ವಿಶೇಷ ಚೇತನರು ತಮ್ಮ ಚಾಪನ್ನು ಮೂಡಿಸಿದ್ದಾರೆ. ಅವರಂತೆಯೇ ಕೂಲಿ ಕೆಲಸದಲ್ಲೂ ಸ್ವಾಮಿ ಎಂಬುವವರು ತಮ್ಮ ಹೆಜ್ಜೆಗುರುತುಗಳನ್ನು ಮೂಡಿಸಿದ್ದಾರೆ. ಇತರರಿಗೆ ಮಾದರಿಯಾಗಿ ನಿಂತಿದ್ದಾರೆ. ಬದುಕು ಕಟ್ಟಿಕೊಂಡಿದ್ದಾರೆ.

click me!