Kodagu: ಹೃದಯಾಘಾತಕ್ಕೆ 6ನೇ ತರಗತಿ ವಿದ್ಯಾರ್ಥಿ ಬಲಿ

By Sathish Kumar KH  |  First Published Jan 8, 2023, 7:46 PM IST

ಕೊಡಗು ಜಿಲ್ಲೆಯ ಕೂಡುಮಂಗಳೂರು ಗ್ರಾಮದಲ್ಲಿ 6ನೇ ತರಗತಿ ಓದುತ್ತಿದ್ದ ಬಾಲಕ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ರಾತ್ರಿ ಮಲಗಿದ್ದ ವೇಳೆ ಎರಡು ಬಾರಿ ಹೃದಯಾಘಾತ ಆಗಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.


ಕೊಡಗು (ಜ.08):  ಹೃದಯಾಘಾತಕ್ಕೆ ವಯಸ್ಸಾದವರೇ ಬಲಿಯಾಗುತ್ತಾರೆ ಎಂದು ಹೇಳಲು ಸಾಧ್ಯವಾಗದಂತಹ ಸ್ಥಿತಿ ಬಂದಿದೆ. ಇತ್ತೀಚೆಗೆ ಯುವಜನರು ಹೇದಯಾಘಾತಕ್ಕೆ ಬಲಿಯಾಗುವ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಆದರೆ, ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ 6ನೇ ತರಗತಿ ಓದುತ್ತಿದ್ದ ಬಾಲಕ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.

ಎಲ್ಲ ವಯಸ್ಸಿನವರಿಗೂ ದೈಹಿಕ ಚಟುವಟಿಕೆಗಳು ಅಗತ್ಯವಾಗಿದೆ. ಎಲ್ಲರೂ ತಮ್ಮ ಆರೋಗ್ಯಕ್ಕಾಗಿ ದೈಹಿಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಹೇಳುತ್ತಾರೆ. ಇನ್ನು ಮಕ್ಕಳು ಆಟವಾಡುವುದೇ ಹೆಚ್ಚಾಗಿರುವ ಕಾರಣ ಪ್ರತ್ಯೇಕ ದೈಹಿಕ ಕಸರತ್ತು ಮಾಡುವುದು ಬೇಕಿಲ್ಲ. ಇನ್ನು ಮಾನಸಿಕವಾಗಿಯೂ ಹೆಚ್ಚಿನ ಒತ್ತಡ ಇರಬಾರದು ಎಂದು ಹೇಳುತ್ತಾರೆ. ಮಕ್ಕಳು ಇಂತಹ ಘಟನೆಗಳಿದ್ದರೂ ಮರುಕ್ಷಣವೇ ಘಟನೆಗಳನ್ನು ಮರೆತುಬಿಡುವ ಕಾರಣದಿಂದ ಮಾನಸಿಕ ಒತ್ತಡಕ್ಕೆ ಒಳಗಾಗುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ, ಕುಶಾಲನಗರದ ಬಾಲಕನೊಬ್ಬ ದೈಹಿಕ ಚಟುವಟಿಕೆ ಇಲ್ಲದೆ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗಿ ತನ್ನ 12ನೇ ವಯಸ್ಸಿಗೆ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

Latest Videos

undefined

Mandya: ನಾಟಕ ಮಾಡುವ ವೇಳೆಯೆ ಹೃದಯಘಾತದಿಂದ ಕುಸಿದು ಬಿದ್ದು ಪ್ರಾಣಬಿಟ್ಟ ಕಲಾವಿದ!

ಕೀರ್ತನ್ (12) ಹೃದಯಾಘಾತದಿಂದ ಮೃತಪಟ್ಟ ಬಾಲಕ ಆಗಿದ್ದಾನೆ. ಕೊಡಗಿನ ಕೂಡುಮಂಗಳೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಮಂಜಾಚಾರಿ ಎಂಬುವರ ಪುತ್ರನಾಗಿದ್ದಾನೆ. ಕುಶಾಲನಗರದ ಭಾರತ್ ಮಾತಾ ಶಾಲೆಯಲ್ಲಿ ಮೃತ ಕೀರ್ತನ್‌ 6ನೇ ತರಗತಿ ಅಭ್ಯಾಸ ಮಾಡುತ್ತಿದ್ದನು. ಆದರೆ, ದುರ್ದೈವ ಎಂದರೆ ಅತಿ ಚಿಕ್ಕ ವಯಸ್ಸಿಗೆ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಚಾಕೊಲೆಟ್ ಅಂತಾ ಇಲಿ ಪಾಷಾಣ ತಿಂದು ಮಗು ಸಾವು; ಎಲ್ಲೆಂದರಲ್ಲೇ ಪಾಷಾಣ ಇಡುವ ಪೋಷಕರೇ ಎಚ್ಚರ!

ಘಟನೆ ನಡೆದಿದ್ದು ಹೇಗೆ?: ಸಾಮಾನ್ಯ ದಿನಗಳಂತೆ ಶನಿವಾರ ಬೆಳಗ್ಗೆ ಶಾಲೆಗೆ ಹೋಗಿ ಕೀರ್ತನ್‌ ಮನೆಗೆ ಆಗಮಿಸಿದ್ದಾನೆ. ನಂತರ ಶಾಲೆಯಲ್ಲಿ ನಿಡಿದ್ದ ಹೋಮ್‌ವರ್ಕ್‌ಗಳನ್ನು ಮುಗಿಸಿ ರಾತ್ರಿ ಊಟ ಮಾಡಿ ಪೋಷಕರೊಂದಿಗೆ ಮಲಗಿದ್ದಾನೆ. ಆದರೆ, ರಾತ್ರಿ ವೇಳೆ ಇದ್ದಕ್ಕಿದ್ದಂತೆ ಮನೆಯಲ್ಲಿ ಮಲಗಿರುವಾಗಲೇ ಹೃದಯಾಘಾತ ಆಗಿದೆ. ನೋವು ತಾಳಲಾರದೇ ಎರಡು ಬಾರಿ ಜೋರಾಗಿ ಎದೆನೋವು ಎಂದು ಕಿರುಚಿಕೊಂಡಿದ್ದಾನೆ. ಇನ್ನು ತೀವ್ರ ಎದೆನೋವಿನಿಂದ ಬಳಲುತ್ತಿದ್ದ ಮಗನನ್ನು ಪೋಷಕರು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ, ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

click me!