Chikkamagaluru: ಮಹಿಷ ದಸರಾ ಆಚರಣೆಗೆ ಯತ್ನ: ಹಲವರ ಬಂಧನ, ಸರ್ಕಾರದ ವಿರುದ್ಧ ಪ್ರತಿಭಟನೆ

By Govindaraj S  |  First Published Oct 20, 2023, 6:42 PM IST

ಮೈಸೂರಿನ ಮಹಿಷಾ ದಸರಾ ಕಿಚ್ಚು ಕಾಫಿನಾಡಿಗೂ ಹಬ್ಬಿ ರಾದ್ದಾಂತ ಸೃಷ್ಟಿಸಿದೆ. ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನಲ್ಲಿ ಮಹಿಷ ದಸರಾ ಆಚರಣೆಗೆ ಮುಂದಾದ ದಲಿತ/ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಅ.20): ಮೈಸೂರಿನ ಮಹಿಷಾ ದಸರಾ ಕಿಚ್ಚು ಕಾಫಿನಾಡಿಗೂ ಹಬ್ಬಿ ರಾದ್ದಾಂತ ಸೃಷ್ಟಿಸಿದೆ. ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನಲ್ಲಿ ಮಹಿಷ ದಸರಾ ಆಚರಣೆಗೆ ಮುಂದಾದ ದಲಿತ/ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಷಾಸುರನ ಭಾವಚಿತ್ರ ಪ್ರದರ್ಶನ ಮಾಡಿ ಮೆರವಣಿಗೆಗೆ ಮುಂದಾದ ಪ್ರಗತಿಪರ ಸಂಘಟನೆ ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

Latest Videos

undefined

ನಿಷೇಧಾಜ್ಞೆ ನಡುವೆಯೂ ಮಹಿಷ ದಸರಾ ಆಚರಣೆ ಮಾಡುವ ಯತ್ನ: ಮೈಸೂರು ,ಉಡುಪಿ ಬಳಿಕ ಚಿಕ್ಕಮಗಳೂರಿನಲ್ಲೂ ಮಹಿಷಾ ದಸರಾ ಮಾಡೇ ಮಾಡ್ತೀವಿ ಎಂದು ಜಿಲ್ಲಾಡಳಿತಕ್ಕೆ ಸೆಡ್ಡು ಹೊಡೆದು ಕಾರ್ಯಕ್ರಮ ಆಯೋಜನೆ ಮಾಡಲು ಮುಂದಾಗಿದ್ದಗ  ಹೈಡ್ರಾಮಕ್ಕೆ ಸಾಕ್ಷಿ ಆಯಿತು.  ನಗರದ ಹನುಮಂತಪ್ಪ ವೃತ್ತದಲ್ಲಿ ಸುಮಾರು 60ಕ್ಕೂ ಹೆಚ್ಚು ದಲಿತಪರ ಸಂಘಟನೆಯ ಮುಖಂಡರು ಏಕಾಏಕಿ ಮಹಿಷಾಸುರನ ಬ್ಯಾನರ್ ಹಿಡಿದು ಆಚರಣೆಗೆ ಮುಂದಾದ್ರೂ, ನಿಷೇಧಾಜ್ಞೆ ನಡುವೆಯೂ ಮಹಿಷ ದಸರಾ ಆಚರಣೆ ಮಾಡಲು ಬಂದಿದ್ದ ಕಾರ್ಯಕರ್ತರನ್ನು ಪೊಲೀಸರು ತಡೆಯುವ ಯತ್ನವನ್ನು ನಡೆಸಿದರು. 

ಈ ಹಂತದಲ್ಲಿ ಪೊಲೀಸರು ಹಾಗೂ ದಲಿತ ಸಂಘಟನೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ತಡೆದು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದ್ದರು.  ಪೊಲೀಸರು ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ದಲಿತಪರ ಸಂಘಟನೆಯ ಮುಖಂಡರು ಘೋಷಣೆ ಕೂಗಿದ್ರು. ಪೊಲೀಸರು ಅವರನ್ನು ಬಂಧಿಸಿ ಕಡೂರು ಪೊಲೀಸ್ ಠಾಣೆಗೆ ಕರೆದೊಯ್ದರು. ಆದರೂ ಪಟ್ಟು ಸಡಿಲಿಸದ ಕೆಲ ಸಂಘಟನೆಗಳು ದಸರಾ ಮುಗಿಯುವ ವೇಳೆಗೆ ಮಹಿಷಾ ದಸರಾ ಮಾಡೇ ಮಾಡ್ತೀವಿ ಅಂತ ಜಿಲ್ಲಾಡಳಿತಕ್ಕೆ ಸವಾಲು ಎಸೆದಿದ್ದಾರೆ.

ಎರಡು ಕಾಲಿಲ್ಲವಾದ್ರೂ ಈಜು ವಿಭಾಗದಲ್ಲಿ ಪ್ಯಾರಾ ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾದ ಕನ್ನಡಿಗ!

ಬಂಧನ ಖಂಡಿಸಿ ಪ್ರತಿಭಟನೆ: ಮಹಿಷ ದಸರಾಗೆ ಪಟ್ಟು ಹಿಡಿದ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರ ಕ್ರಮ ಖಂಡಿಸಿ ಮತ್ತೊಂದು ತಂಡ ಅಂಗಡಿ ಚಂದ್ರು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ. ಮಹಿಷನ ಪರ ಘೋಷಣೆ ಕೂಗಿ ಸರ್ಕಾರದ ವಿರುದ್ಧ ಅಕ್ರೋಶ ಹೊರಹಾಕಿದ್ದಾರೆ. ಇವರನ್ನು ಕೂಡ ಬಂಧಿಸಿ ಕಡೂರು ಠಾಣೆಗೆ ಕರೆದೊಯ್ಯಲಾಗಿದೆ. ಒಟ್ಟಾರೆ ಮೈಸೂರು ಜಿಲ್ಲೆಗೆ ಸೀಮಿತವಾಗಿದ್ದ ಮಹಿಷಾ ದಸರಾ ಕಿಚ್ಚು ಕಾಫಿ ನಾಡಿಗೂ ಹಬ್ಬಿದ್ದು, ಜಿಲ್ಲಾಡಳಿತಕ್ಕೆ ದಲಿತಪರ ಸಂಘಟನೆಗಳು ಸವಾಲು ಎಸೆದಿದ್ದಾರೆ. ಈ ನಡುವೆ ಚಿಕ್ಕಮಗಳೂರು ನಗರದಾದ್ಯಂತ ನಿಷೇಧಾಜ್ಞೆ ಜಾರಿಯಾಗಿದ್ದು, ಪೊಲೀಸರು ಬಿಗಿ ಭದ್ರತೆ ವಹಿಸಿದ್ದಾರೆ.

click me!