ಸರ್ಕಾರಿ ಜಮೀನಿನಲ್ಲಿ ವಾಸವಾಗಿ ದಾಖಲೆ ಪತ್ರ ಇಲ್ಲದೆ 94ಸಿ ಯಡಿ ಅರ್ಜಿ ಸಲ್ಲಿಸಿದ ಇಳಂತಿಲ ಗ್ರಾಮದ ಅರ್ಜಿದಾರರ ಸಮ್ಮುಖದಲ್ಲೇ ಬೆಳ್ತಂಗಡಿ ತಹಸೀಲ್ದಾರು ದಾಖಲೆಗಳ ಪರಿಶೀಲನೆ ನಡೆಸಿ ನಿವೇಶನವನ್ನು ಸ್ಥಳದಲ್ಲೇ ಮಂಜೂರುಗೊಳಿಸಿದ್ದಾರೆ.
ಮಂಗಳೂರು(ನ.29): ಸರ್ಕಾರಿ ಜಮೀನಿನಲ್ಲಿ ವಾಸವಾಗಿ ದಾಖಲೆ ಪತ್ರ ಇಲ್ಲದೆ 94ಸಿ ಯಡಿ ಅರ್ಜಿ ಸಲ್ಲಿಸಿದ ಇಳಂತಿಲ ಗ್ರಾಮದ ಅರ್ಜಿದಾರರ ಸಮ್ಮುಖದಲ್ಲೇ ಬೆಳ್ತಂಗಡಿ ತಹಸೀಲ್ದಾರು ದಾಖಲೆಗಳ ಪರಿಶೀಲನೆ ನಡೆಸಿ ನಿವೇಶನವನ್ನು ಸ್ಥಳದಲ್ಲೇ ಮಂಜೂರುಗೊಳಿಸಿದ್ದಾರೆ.
ಉಪ್ಪಿನಂಗಡಿಯ ಬೆಳ್ತಂಗಡಿ ಗಡಿ ಗ್ರಾಮವಾದ ಇಳಂತಿಲ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ತಾಲೂಕು ದಂಡಾಧಿಕಾರಿ ಗಣಪತಿ ಶಾಸ್ತ್ರಿ ಅಧ್ಯಕ್ಷತೆಯಲ್ಲಿ ಗುರುವಾರದಂದು ಕಂದಾಯ ಅದಾಲತ್ ಸಭೆ ನಡೆಯಿತು.
ಪುತ್ತೂರು ರೇಪ್: 4ನೇ ಆರೋಪಿ ಪ್ರಜ್ವಲ್‌ಗೆ ಜಾಮೀನು
ಗ್ರಾಮ ವ್ಯಾಪ್ತಿಯಲ್ಲಿ ಒಟ್ಟು 600 ಅರ್ಜಿಗಳ ಪೈಕಿ ಬಾಕಿಯಾದ 49 ಅರ್ಜಿಗಳಲ್ಲಿ ಉಂಟಾಗಿರುವ ತೊಡಕುಗಳನ್ನು ಪರಿಶೀಲಿಸಿ ಮಂಜೂರಾತಿ ನೀಡಿದ್ದಾರೆ. ಬಳಿಕ ಅರಣ್ಯ ವ್ಯಾಪ್ತಿಯ 40 ಅರ್ಜಿಗಳನ್ನು ತಕ್ಷಣವೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಮಂಜೂರಾತಿಗೆ ಪ್ರಯತ್ನಿಸುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.
ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯರಾದ ಕೃಷ್ಣಯ್ಯ ಆಚಾರ್ಯ, ಗ್ರಾಪಂ ಅಧ್ಯಕ್ಷ ಇಸುಬು ಪೆದಮಲೆ, ಉಪಾಧ್ಯಕ್ಷೆ ಗುಲಾಬಿ, ಸದಸ್ಯರಾದ ಯು.ಟಿ. ಫಯಾಜ್, ಅಹಮ್ಮದ್, ತಿಮ್ಮಪ್ಪ ಗೌಡ, ಈಶ್ವರ ಗೌಡ, ಆನಂದ ಕುಂಬಾರ, ಯಶೋದಾ ಶೆಟ್ಟಿ, ಚಂದ್ರಿಕಾ ಭಟ್, ಸುಪ್ರೀತ್, ಗ್ರಾಮಸ್ಥರಾದ ರೊನಾಲ್ಡ್ ಪಿಂಟೋ, ಅಬುಬಕ್ಕರ್ ಪೆದಮಲೆ, ಕಂದಾಯ ನಿರೀಕ್ಷಕರಾದ ಪ್ರತೀಕ್ಷಾ, ಗ್ರಾಮಕರಣಿಕರಾದ ಕುಮಾರಸ್ವಾಮಿ ಹಾಗೂ ತಾಲೂಕು ಕಚೇರಿಯ ಗುಮಾಸ್ತ ಹರೀಶ್ ಉಪಸ್ಥಿತರಿದ್ದರು.
ಎಲ್ಲರಿಗೂ ಮುನ್ನ ದಂಡಾಧಿಕಾರಿಗಳು ಬಂದಿದ್ದರು:
ಇಳಂತಿಲ ಗ್ರಾಮ ಪಂಚಾಯಿತಿಯಲ್ಲಿ 94ಸಿ ಗಾಗಿ ಕಂದಾಯ ಅದಾಲತ್ ನಿಗದಿಪಡಿಸಿದ್ದು, ಸರ್ಕಾರದ ನಿಯಮ ಪ್ರಕಾರ ಬೆಳಗ್ಗೆ ಗಂಟೆ 10 ರಿಂದ ಅದಾಲತ್ ಪ್ರಾರಂಭವಾಗಬೇಕಾಗಿತ್ತು. ಆದರೆ ಗ್ರಾಮದ ಜನತೆಯ ಸಮಸ್ಯೆಗಳ ಬಗ್ಗೆ ಖುದ್ದು ತಿಳಿಯಲು ತಾಲೂಕು ದಂಡಾಧಿಕಾರಿಯವರು ಬೆಳಗ್ಗೆ 9 ಗಂಟೆಯೇ ಗ್ರಾಮಕ್ಕೆ ಆಗಮಿಸಿ ಪರಿಶೀಲನಾ ಪ್ರಕ್ರಿಯೆ ನಡೆಸಿ ಜನರನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ.
ಕನ್ನಡ ಕಲಿಸದ CBSE ಶಾಲೆಗಳಿಗೆ ಡಿಸಿ ಸಿಂಧು ರೂಪೇಶ್ ಕೊಟ್ರು ಶಾಕ್..!
ಜನರಿಗೆ ಉತ್ತಮ ಸೇವೆ ನೀಡಬೇಕೆಂಬ ತುಡಿತದ ತಾಲೂಕು ದಂಡಾಧಿಕಾರಿಯವರ ಕಾರ್ಯವೈಖರಿ, ದಾಖಲೆಗಳು ಸಮರ್ಪಕವಾಗಿದ್ದರೆ ವಿಳಂಬ ಮಾಡದೆ ಮಂಜೂರಾತಿ ನೀಡುವ ಅವರ ಕಾರ್ಯದಕ್ಷತೆ ಶ್ಲಾಘನೀಯವಾಗಿದೆ ಎಂದು ಪಂಚಾಯಿತಿ ಇಸುಬು ಪೆದಮಲೆ ಹೇಳಿದ್ದಾರೆ.