ಇವರೂ ಕೂಡ ವರ್ಕ್ ಫ್ರಂ ಹೋಂ: ಮೊಬೈಲ್‌ನಲ್ಲಿಯೇ ಜ್ಯೋತಿಷ್ಯ ಸಲ​ಹೆ..!

Kannadaprabha News   | Asianet News
Published : Apr 29, 2020, 10:35 AM IST
ಇವರೂ ಕೂಡ ವರ್ಕ್ ಫ್ರಂ ಹೋಂ: ಮೊಬೈಲ್‌ನಲ್ಲಿಯೇ ಜ್ಯೋತಿಷ್ಯ ಸಲ​ಹೆ..!

ಸಾರಾಂಶ

ವಾಟ್ಸ್‌ಆ್ಯಪ್‌ ಮೂಲಕ ಹಾಗೂ ಮೊಬೈಲ್‌ನಲ್ಲಿಯೇ ಸಲಹೆ ನೀಡುತ್ತಿರುವ ಬಳ್ಳಾರಿ ನಗರದ ಜ್ಯೋತಿಷ್ಯ, ವಾಸ್ತು, ಹಸ್ತ ಸಾಮುದ್ರಿಕ ತಜ್ಞ ಮಠಂ ಗುರುಪ್ರಸಾದ್| ಲಾಕ್‌ಡೌನ್‌ ಮುಗಿಯುವ ವರೆಗೆ ಯಾರೂ ಮನೆಕಡೆ ಬರುವಂತಿಲ್ಲ ಎಂದು ಸೂಚನೆ ನೀಡಿದ್ದೇನೆ| ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದೇನೆ| 

ಬಳ್ಳಾರಿ(ಏ.29):  ಕಳೆದ ಹತ್ತಾರು ವರ್ಷಗಳಿಂದ ಜ್ಯೋತಿಷ್ಯ, ವಾಸ್ತು, ಹಸ್ತಸಾಮುದ್ರಿಕ ಶಾಸ್ತ್ರವನ್ನು ನನ್ನ ಮೂಲ ಕಾಯಕವನ್ನಾಗಿಸಿಕೊಂಡಿರುವೆ. ಲಾಕ್‌ಡೌನ್‌ ಬಳಿಕ ಮನೆಯಿಂದಲೇ ಅನೇಕ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿರುವೆ. ಕೆಲವರಿಗೆ ಆನ್‌ಲೈನ್‌ನಲ್ಲಿ, ಮತ್ತೆ ಕೆಲವರಿಗೆ ವಾಟ್ಸ್‌ಆ್ಯಪ್‌ ಮೂಲಕ ಹಾಗೂ ಮೊಬೈಲ್‌ನಲ್ಲಿಯೇ ಸಲಹೆಗಳನ್ನು ನೀಡುತ್ತಿದ್ದೇನೆ ಎಂದು ಜ್ಯೋತಿಷ್ಯ, ವಾಸ್ತು, ಹಸ್ತ ಸಾಮುದ್ರಿಕ ತಜ್ಞ ಮಠಂ ಗುರುಪ್ರಸಾದ್‌ ಅವರು ಹೇಳಿದ್ದಾರೆ. 

ಹೆರಿಗೆ ಸಮಯ, ಹೆಣ್ಣುಮಕ್ಕಳು ಋುತುಮತಿಯಾದ ಗಳಿಗೆ ನೋಡುವುದು, ಮನೆಕಟ್ಟಲು ಯಾವಾಗ ಶುರು ಮಾಡಬೇಕು. ಗ್ರಹಗತಿಗಳು ಹೇಗಿವೆ? ಎಂಬುದು ಸೇರಿದಂತೆ ಅನೇಕ ತರಹೇವಾರಿ ಕರೆಗಳು ಬರುತ್ತವೆ. ನಿರಂತರವಾಗಿ ನಮ್ಮ ಬಳಿ ಬರುವವರು ನೂರಾರು ಜನರಿದ್ದಾರೆ. ಅವರಿಗೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡೇ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಕ್ಲಿನಿಕ್‌ಗಳ ಮೇಲೆ ದಾಳಿ: ಕೊಟ್ಟೂರಿನಲ್ಲಿ ಇಬ್ಬರು ನಕಲಿ ವೈದ್ಯರು ವಶಕ್ಕೆ

ಹಸ್ತಸಾಮುದ್ರಿಕ ಹಾಗೂ ವಾಸ್ತು ನೋಡುತ್ತಿಲ್ಲ. ಉಳಿದಂತೆ ಜ್ಯೋತಿಷ್ಯ ಶಾಸ್ತ್ರದಿಂದ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡಲಾಗುತ್ತಿದೆ. ಕರ್ನಾಟಕ ಅಷ್ಟೇ ಅಲ್ಲ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಂದಲೂ ಅನೇಕರು ಕರೆ ಮಾಡಿ, ಮಾರ್ಗದರ್ಶನ ಪಡೆಯುತ್ತಾರೆ. ಲಾಕ್‌ಡೌನ್‌ ಮುಗಿಯುವ ವರೆಗೆ ಯಾರೂ ಮನೆಕಡೆ ಬರುವಂತಿಲ್ಲ ಎಂದು ಸೂಚನೆ ನೀಡಿದ್ದೇನೆ. ಇದರಿಂದ ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.
 

PREV
click me!

Recommended Stories

ಕೋಲಾರ ಬೀದರ್ ಡಿಸಿ ಕಚೇರಿಗೆ ಬಾಂಬ್ ಬೆದರಿಕೆ ಇಮೇಲ್, ಅಲರ್ಟ್ ಆದ ಪೊಲೀಸರು, ತೀವ್ರ ತಪಾಸಣೆ
ಮೈಸೂರು, ಮಂಡ್ಯದಲ್ಲಿ ಬಾಲ್ಯ ವಿವಾಹಕ್ಕೆ ಗಣನೀಯ ಇಳಿಕೆ, ಸರ್ಕಾರದಿಂದ ಸಿಕ್ಕಿತು ನೆಮ್ಮದಿಯ ಸುದ್ದಿ