ಇತ್ತೀಚೆಗೆ ಅಸ್ಸಾಂ ಕಾರ್ಮಿಕರು ಸ್ಥಳೀಯ ಕಾಫಿ ತೋಟದ ಕಾರ್ಮಿಕರ ಮೇಲೆ ನಡೆಸಿದ ಮಾರಣಾಂತಿಕ ಹಲ್ಲೆ ಘಟನೆಯನ್ನು ಖಂಡಿಸಿ ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಗ್ರಾಮಸ್ಥರು ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸಿದರು.
ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಫೆ.24): ಇತ್ತೀಚೆಗೆ ಅಸ್ಸಾಂ ಕಾರ್ಮಿಕರು ಸ್ಥಳೀಯ ಕಾಫಿ ತೋಟದ ಕಾರ್ಮಿಕರ ಮೇಲೆ ನಡೆಸಿದ ಮಾರಣಾಂತಿಕ ಹಲ್ಲೆ ಘಟನೆಯನ್ನು ಖಂಡಿಸಿ ಇಂದು ವಿವಿಧ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಗ್ರಾಮಸ್ಥರು ಚಿಕ್ಕಮಗಳೂರು ತಾಲ್ಲೂಕಿನ ಜಾಗರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು. ಮೇಲಿನ ಹುಲುವತ್ತಿ ಗ್ರಾ.ಪಂ. ವ್ಯಾಪ್ತಿಯ ಕೊಳಗಾವೆ, ಜಾಗರ, ಮಲಗಾರು ಗ್ರಾಮಗಳು ಸೇರಿದಂತೆ ಜಿಲ್ಲೆಯಾದ್ಯಂತ ಕಾಫಿ ತೋಟಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದು, ಬಹಳ ಕ್ರೂರಿಗಳಂತೆ ವರ್ತಿಉತ್ತಿದ್ದಾರೆ. ಸುತ್ತಲ ತೋಟಗಳಲ್ಲಿ ಆಗಾಗ ಗಲಾಟೆ, ದೊಂಬಿಗಳನ್ನು ನಡೆಸಿ ಶಾಂತಿ ಭಂಗ ಉಂಟುಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಅಸ್ಸಾಂ ಕಾರ್ಮಿಕರ ಹೆಸರಿನಲ್ಲಿ ಬಂದಿರುವ ಬಾಂಗ್ಲಾ ವಲಸಿಗರು:
ಫೆಬ್ರವರಿ 14ರಂದು ರಾತ್ರಿ ಸಿಪ್ಪಾಣಿ ಎಸ್ಟೇಟ್ನಲ್ಲಿ ಅಕ್ರಮ ಬಾಂಗ್ಲಾ ವಲಸಿಗ ಕಾರ್ಮಿಕರು ದೊಡ್ಡ ಮಟ್ಟದಲ್ಲಿ ಗಲಾಟೆ ನಡೆಸಿ ತೋಟದ ರೈಟರ್ ಹಾಗೂ ಇತರೆ ಸಿಬ್ಬಂದಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ರಕ್ಷಣೆಗೆ ಮುಂದಾಗ ಗ್ರಾಮಸ್ಥರ ಮೇಲೂ ತೀವ್ರ ತರಹದ ಹಲ್ಲೆ ಮಾಡಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಿಸಿದ್ದಾರೆ ಎಂದು ದೂರಿದರು. ಅಲ್ಲದೆ ಅಸ್ಸಾಂ ಕಾರ್ಮಿಕರ ಹೆಸರಿನಲ್ಲಿ ಅಕ್ರಮವಾಗಿ ಬಾಂಗ್ಲಾ ವಲಸಿಗರು ಜಿಲ್ಲೆಗೆ ಆಗಮಿಸಿದ್ದು ಅವರನ್ನು ಪತ್ತೆ ಹಚ್ಚುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬೇಕೆಂದು ಪ್ರತಿಭಟನಾನಿತರು ಒತ್ತಾಯಿಸಿದರು.
ಅಸ್ಸಾಂ ವಲಸಿಗರ ಹೆಸರಿನಲ್ಲಿ ಬಂದಿರುವ ಬಾಂಗ್ಲಾ ಕಾರ್ಮಿಕರು ಭಯ ವಾತಾವರಣವನ್ನು ಸೃಷ್ಠಿ ಮಾಡಿದ್ದು ಇದರಿಂದ ಸಾರ್ವಜನಿಕರು ಮತ್ತು ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ತೀವ್ರ ಆತಂಕಕ್ಕೊಳಗಾಗಿರುವ ಹಿನ್ನೆಲೆಯಲ್ಲಿ ಕೂಡಲೇ ಬಾಂಗ್ಲಾ ವಲಸಿಗರು ಗುರುತಿಸಿ ಎಸ್ಟೇಟ್ಗಳಿಂದ ಕಡ್ಡಾಯವಾಗಿ ಹೊರಕ್ಕೆ ಕಳಿಸಬೇಕು ಎಂದು ಆಗ್ರಹಿಸಿದರು.
ಮದ್ಯ ಸೇವಿಸಿ ಬಂದ ಗಂಡ ಪತ್ನಿಯ ಕೆನ್ನೆಗೆ ಹೊಡೆದ, ಮುಂದಾಗಿದ್ದೇ ಬೇರೆ!
ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ ಕಾರ್ಯಕರ್ತರು:
ಈ ಸಂಬಂಧ ಮೇಲುಹುಲುವತ್ತಿ ಗ್ರಾಮ ಪಂಚಾಯ್ತಿ ಮತ್ತು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಜಾಗರ ಜಾಗೃತಿ ಸಮಿತಿ ಪದಾಧಿಕಾರಿಗಳು ಮತ್ತು ಸ್ಥಳೀಯ ಸಾರ್ವಜನಿಕರು ಭಾಗವಹಿಸಿದ್ದರು. ಅವರಿಗೆ ಬಜರಂಗದಳ, ಶ್ರೀರಾಮ ಸೇನೆ, ವಂದೇ ಮಾತರಂ ಟ್ರಸ್ಟ್ ಹಾಗೂ ಕಾಮಧೇನು ಗೋಶಾಲೆ ಸಂಘಟನೆಗಳು ಬೆಂಬಲ ಸೂಚಿಸಿದವು. ಈ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ನಗರದಿಂದ ಬೈಕ್ಗಳಲ್ಲಿ ತೆರಳಿ ಪ್ರತಿಭಟನೆಯಲ್ಲಿ ಭಾಗವಹಿಸಿ ಬಾಂಗ್ಲಾ ವಲಸಿಗರನ್ನು ಹೊರಕ್ಕೆ ಹಾಕುವಂತೆ ಆಗ್ರಹಿಸಿದರು.
ಅಸ್ಸಾಂನ ಗುವಾಹಟಿಯಲ್ಲಿ ಭಾರೀ ಬೆಂಕಿ, 150 ಮನೆಗಳು ಸುಟ್ಟು ಭಸ್ಮ!
ಎಲ್ಲಾ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ವಿಶ್ವಹಿಂದೂ ಪರಿಷತ್ ನಗರಾರ್ಧಯಕ್ಷ ಆಟೋ ಶಿವಣ್ಣ, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ, ಬಜರಂಗದಳದ ನಗರ ಸಂಯೋಜಕ ಶ್ಯಾಂ ವಿ.ಗೌಡ, ವಂದೇ ಮಾತರಂ ಟ್ರಸ್ಟ್ ಅಧ್ಯಕ್ಷ ಪ್ರೀತೇಶ್, ಗ್ರಾಮ ಪಂಚಾಯ್ತಿ ಸದಸ್ಯ ಜಾನಕೀರಾಮ್ ಇತರರು ಭಾಗವಹಿಸಿದ್ದರು.