ಪ್ರೀತಿಸಿ ಮದುವೆ ಮತಾಂತರ... ಸ್ಪಂದಿಸದ ಗಂಡ... ಇನ್ಮುಂದೆ ನೊಂದವರ ಪರ ನನ್ನ ಹೋರಾಟ!

By Suvarna News  |  First Published Oct 22, 2021, 8:20 PM IST

* ನನ್ನ ಹೋರಾಟಕ್ಕೆ ಇಲ್ಲಿಯವರೆಗೆ ಸ್ಪಂದನೆ ಸಿಕ್ಕಿಲ್ಲ
* ಹೋರಾಟದಿಂದ ಹಿಂದೆ ಸರಿದು ನನ್ನಿಷ್ಟದಂತೆ ಜೀವಿಸಲು ತೀರ್ಮಾನಿಸಿದ್ದೇನೆ
* ಮಂಗಳೂರಿನಲ್ಲಿ ಆಸಿಯಾ ಇಬ್ರಾಹಿಂ ಖಲೀಲ್ ಕಟ್ಟೆಮಾರ್ ಸುದ್ದಿಗೋಷ್ಠಿ
* ಹಿಂದು ಯುವತಿ ಮುಸ್ಲಿಂ ಯುವಕನ ಮದುವೆಯಾಗಿದ್ದರು


ಮಂಗಳೂರು(ಅ. 22) ‘ನನ್ನನ್ನು ನನ್ನ ಪತಿ (Husband) ಸ್ವೀಕರಿಸಿಕೊಂಡು ಪತಿಯ ಮನೆಗೆ ಸೇರಿಸಿಕೊಳ್ಳಬೇಕು ಎಂದು ಕಳೆದ ಎರಡು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದೇನೆ. ಇದೀಗ ಯಾವುದೇ ಸ್ಪಂದನೆ ಸಿಗದ ಕಾರಣ ಹೋರಾಟದಿಂದ ಹಿಂದೆ ಸರಿದು ನನ್ನಿಷ್ಟದಂತೆ ಜೀವಿಸಲು ತೀರ್ಮಾನಿಸಿದ್ದೇನೆ ಎಂದು ಆಸಿಯಾ ಇಬ್ರಾಹಿಂ ಖಲೀಲ್ ಕಟ್ಟೆಮಾರ್ ಮಂಗಳೂರಲ್ಲಿ ಹೇಳಿದ್ದಾರೆ.

ಮುಸ್ಲಿಂ (Muslim)ಯುವಕನನ್ನು ಪ್ರೀತಿಸಿ ಮತಾಂತರವಾಗಿ (Religious Conversion) ಇದೀಗ ಪತಿಯಿಂದ ನಿರಾಕರಿಸಲ್ಪಟ್ಟ ಆಸಿಯಾ ಇಬ್ರಾಹಿಂ ಖಲೀಲ್ ಕಟ್ಟೆಮಾರ್ ಮಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

Tap to resize

Latest Videos

ಮುಂದಿನ ದಿನಗಳಲ್ಲಿ ಯಾವುದೇ ರಾಜಕೀಯ ಪಕ್ಷವಾಗಲಿ(Political Party), ಧರ್ಮದ ಪ್ರತಿನಿಧಿ ಅಥವಾ ಯಾವುದೇ ಜಾತಿಯ ಸಂಘ ಸಂಸ್ಥೆಗಳು ತನ್ನ ಪರವಾಗಿ ಅಥವಾ ವಿರುದ್ಧವಾಗಿ ಯಾವುದೇ ಹೇಳಿಕೆಯನ್ನು ನೀಡಿ ಸಮಾಜದಲ್ಲಿ ಗೊಂದಲ ಉಂಟು ಮಾಡಬಾರದು ಎಂದು ಅವರು ಮನವಿ ಮಾಡಿಕೊಂಡರು.

ಶಾಸಕ ಗೂಳಿಹಟ್ಟಿ ಶೇಖರ್ ನೇತೃತ್ವದಲ್ಲಿ ಘರ್ ವಾಪ್ಸಿ ಕಾರ್ಯಕ್ರಮ

ಮುಂದಿನ ದಿನಗಳಲ್ಲಿ ನನ್ನ ಯಾವುದೇ ವಿಷಯಕ್ಕೆ ಇಬ್ರಾಾಹಿಂ ಮತ್ತು ಅವರ ಕುಟುಂಬಕ್ಕೆ ಯಾವುದೇ ಸಂಬಂಧ ಇರುವುದಿಲ್ಲ. ಅವರ ಪರವಾಗಿ ಅಥವಾ ವಿರುದ್ಧವಾಗಿ ನಾನು ಯಾವುದೇ ಹೇಳಿಕೆಯನ್ನು ಸಾಮಾಜಿಕ ಜಾಲತಾಣ, ಮಾಧ್ಯಮದಲ್ಲಿ ನೀಡುವುದಿಲ್ಲ. ನಮ್ಮ ನಡುವೆ ಈ ಮೊದಲು ಪೊಲೀಸ್ ಠಾಣೆಯಲ್ಲಿ ಮತ್ತು ನ್ಯಾಯಾಲಯದಲ್ಲಿ
ದಾಖಲಾಗಿರುವ ಪ್ರಕರಣವನ್ನು ನನ್ನ ಇಚ್ಛೆಯಂತೆ ಹಿಂಪಡೆಯುತ್ತಿದ್ದೇನೆ ಎಂದು ತಿಳಿಸಿದರು.

ನೊಂದ ಮಹಿಳೆಯರಿಗೆ ನೆರವು: ಷರೀಯತ್ ಕಾನೂನಿನ ಪ್ರಕಾರ ನಾನು (Marriage)ವಿವಾಹವಾಗಿದ್ದು, ಮುಂದೆ ನನ್ನಂತಹ ನೊಂದ ಮಹಿಳೆಯರಿಗೆ ನೆರವು ನೀಡಲು ಮುಂದಾಗುತ್ತೇನೆ. ಸುದ್ದಿಗೋಷ್ಠಿ ಸಂಸರ್ಭ ಸುಳ್ಯ ನಗರ ಪಂಚಾಯತ್ ಸದಸ್ಯ ಉಮ್ಮರ್, ಇಬ್ರಾಹಿಂ ಕತ್ತಾರ್, ಅಬ್ದುಲ್ ಲತೀಫ್ ಇದ್ದರು.

ಏನಿದು ಪ್ರಕರಣ ?: ಸುಳ್ಯದ ಪ್ರತಿಷ್ಠಿತ ಕಟ್ಟೆಕ್ಕಾರ್ಸ್ ಕುಟುಂಬದ ಇಬ್ರಾಹಿಂ ಖಲೀಲ್ ಎಂಬವರು ಕೇರಳದ ಕಣ್ಣೂರಿನ ಹಿಂದೂ ಧರ್ಮಕ್ಕೆ ಸೇರಿದ ಶಾಂತಿ ಜೂಬಿ ಎಂಬ ಯುವತಿಯನ್ನು ಮದುವೆಯಾಗಿದ್ದರು. ಯುವತಿ ಮತಾಂತರವಾದ ಬಳಿಕ ಹೆಸರನ್ನು ಬದಲಿಸಿ ಆಸಿಯಾ ಎಂದು ಇಟ್ಟುಕೊಂಡಿದ್ದರು. ಮದುವೆಯಾಗಿ ಕೆಲ ವರ್ಷಗಳ ಬಳಿಕ ದಾಂಪತ್ಯದಲ್ಲಿ ಬಿರುಕು ಮೂಡಿ ಇಬ್ಬರು ಪರಸ್ಪರ ಬೇರೆಯಾಗಿದ್ದರು.   ಕಾನೂನು ಹೋರಾಟವೂ ಆರಂಭವಾಗಿತ್ತು.  ಸುಳ್ಯದ ಪ್ರತಿಷ್ಠಿತ ಕಟ್ಟೆಕ್ಕಾರ್ಸ್ ಕುಟುಂಬದ ಇಬ್ರಾಹಿಂ ಖಲೀಲ್ ಎಂಬವರು ಕೇರಳದ ಕಣ್ಣೂರಿನ ಹಿಂದೂ ಧರ್ಮಕ್ಕೆ ಸೇರಿದ ಶಾಂತಿ ಜೂಬಿ ಎಂಬ ಯುವತಿಯನ್ನು ಮದುವೆಯಾಗಿದ್ದರು. ಯುವತಿ ಮತಾಂತರವಾದ ಬಳಿಕ ಹೆಸರನ್ನು ಬದಲಿಸಿ ಆಸಿಯಾ ಎಂದು ಇಟ್ಟುಕೊಂಡಿದ್ದರು. ಮದುವೆಯಾಗಿ ಕೆಲ ವರ್ಷಗಳ ಬಳಿಕ ದಾಂಪತ್ಯದಲ್ಲಿ ಬಿರುಕು ಮೂಡಿ ಇಬ್ಬರು ಪರಸ್ಪರ ಬೇರೆಯಾಗಿದ್ದರು.   ಕಾನೂನು ಹೋರಾಟವೂ ಆರಂಭವಾಗಿತ್ತು. 

 

click me!