
ಮಂಗಳೂರು (ಏ.19) : ಕೊರೋನಾ ಸೋಂಕು ಕಾಣಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕವಿ, ನಾಟಕಕಾರ, ಚಲನಚಿತ್ರ ನಟ, ಸಾಹಿತ್ಯ ಪ್ರೋತ್ಸಾಹಕ ಕಾಸರಗೋಡು ಅಶೋಕ್ ಕುಮಾರ್ (68) ಭಾನುವಾರ ನಿಧನರಾಗಿದ್ದಾರೆ.
1953ರ ಡಿ.1ರಂದು ಕಾಸರಗೋಡಿನಲ್ಲಿ ಜನಿಸಿದ ಅಶೋಕ್ ಕುಮಾರ್ ಅವರು ವಿದ್ಯಾರ್ಥಿ ಜೀವನದಲ್ಲಿಯೇ ಕನ್ನಡದ ಪರ ಹೋರಾಟಗಾರರಾಗಿದ್ದರು.
ಗಿಣಿರಾಮ’ ಧಾರಾವಾಹಿ ನಟಿ ನಯನಾಗೆ ಕೊರೋನಾ ..
ತುಳು ಹಾಗೂ ಕನ್ನಡ ಸಿನಿಮಾ, ಧಾರಾವಾಹಿ, ಕಿರುಚಿತ್ರಗಳಲ್ಲಿ ನಟಿಸಿದ್ದ ಅಶೋಕ್ ಕುಮಾರ್ ಅವರ ಹಲವಾರು ಕನ್ನಡ ಹಾಗೂ ಕೊಂಕಣಿ ಕವನಗಳು ಮಂಗಳೂರು ಆಕಾಶವಾಣಿಯಲ್ಲೂ ಪ್ರಸಾರವಾಗಿತ್ತು.
ಬೆಂಗಳೂರಿನ ಇಂಡಿಯನ್ ವರ್ಚುವಲ್ ಅಕಾಡೆಮಿ ಫಾರ್ ಪೀಸ್ ಅಂಡ್ ಎಜುಕೇಶನ್ ಸಂಸ್ಥೆ ಅಶೋಕ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.