ಲಾಕ್‌ಡೌನ್‌ ನೆಪ: ಗಗನಕ್ಕೇರಿದ ಗುಟ್ಕಾ ಬೆಲೆ..!

By Kannadaprabha NewsFirst Published Apr 19, 2021, 7:53 AM IST
Highlights

ಮಧ್ಯವರ್ತಿಗಳ ಆಟ, ಗುಟ್ಕಾ ಪ್ರಿಯರಿಗೆ ಪ್ರಾಣಸಂಕಟ| 1 ಪ್ಯಾಕೆಟ್‌ ವಿಮಲ್‌ಗೆ 180 , ಆರ್‌ಎಂಡಿ 1200| ಕಟ್ಟು ಬೀಡಿ 18 ರಿಂದ 25| ಕಿಸಾನ್‌ ತಂಬಾಕು ಪ್ಯಾಕೆಟ್‌ 150 ರಿಂದ 600 ಗೆ ಬೆಲೆ ದಿಢೀರ್‌ ಏರಿಕೆ| 4 ಗುಟ್ಕಾ ಕೊಳ್ಳುವವರು 2ಕ್ಕೆ ಸೀಮಿತ| 

ನಾಗರಾಜ್‌ ನ್ಯಾಮತಿ

ಸುರಪುರ(ಏ.19): ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ನೆಪವೊಡ್ಡಿ ಕಳೆದೆರಡು ದಿನಗಳಿಂದ ಮಾರುಕಟ್ಟೆಯಲ್ಲಿ ಗುಟ್ಕಾ ಬೆಲೆ ದಿಢೀರ್‌ ಹೆಚ್ಚಳ ಕಂಡಿದ್ದು ಗುಟ್ಕಾ ಪ್ರಿಯರ ಜೇಬಿಗೆ ಕನ್ನಹಾಕಿದೆ. ಅದರಲ್ಲೂ ತಂಬಾಕು ಮಿಶ್ರಿತ ಗುಟ್ಕಾ ತಿನ್ನುವವರು ದುಪ್ಪಟ್ಟು ದರ ತೆರಬೇಕಾಗಿದೆ.

ಹಾಗೆಂದು ಯಾವುದೇ ಕಂಪನಿ ಗುಟ್ಕಾ ಬೆಲೆ ಹೆಚ್ಚಿಸಿಲ್ಲ. ಆದರೆ, ಮಧ್ಯವರ್ತಿಗಳು ಮಾತ್ರ ಇನ್ನೊಂದು ವಾರವಾದರೆ ಎಷ್ಟೇ ದುಡ್ಡು ಕೊಟ್ಟರೂ ಗುಟ್ಕಾ ಸಿಗೊಲ್ಲ ಎಂಬ ಭೀತಿ ಹುಟ್ಟಿಸಿ ಮಾರಾಟ ಮಾಡುತ್ತಿದ್ದಾರೆ. ಪರಿಣಾಮ ಎರಡ್ಮೂರು ದಿನಗಳಿಂದ ಗುಟ್ಕಾ ದರಗಳ ಬೆಲೆಯೂ 5 ರು. ಇದ್ದದ್ದು 10 ರು. ಆಗಿದೆ. 5 ರು. ಇದ್ದ ತಂಬಾಕು ಚೀಟು 10 ರು.ಗಳಾಗಿದೆ.

ಕೊರೋನಾ ಎಫೆಕ್ಟ್‌: ಅಕ್ಕಿ, ಬೇಳೆಗಿಂತ ಗುಟ್ಕಾ ಸಿಗ‘ರೇಟ್’ ಬೆಲೆ ಜಾಸ್ತಿ !

ಅದೇ ರೀತಿಯಲ್ಲಿ ವಿಮಲ್‌ ಒಂದು ಪ್ಯಾಕೆಟ್‌ಗೆ 125 ರಿಂದ 180, ಸ್ಟಾರ್‌ ಪ್ಯಾಕೆಟ್‌ 110 ರಿಂದ 170, ಮಧು ಪ್ಯಾಕೆಟ್‌ 56 ರಿಂದ 100, ಸಣ್ಣ ಆರ್‌ಎಂಡಿ ಪ್ಯಾಕೆಟ್‌ಗೆ 520 ರಿಂದ 950, ದೊಡ್ಡ ಆರ್‌ಎಂಡಿ 740 ರಿಂದ 1200, ಕಟ್ಟು ಬೀಡಿ 18 ರಿಂದ 25, ಕಿಸಾನ್‌ ತಂಬಾಕು ಪ್ಯಾಕೆಟ್‌ 150 ರಿಂದ 600 ಗೆ ಬೆಲೆ ದಿಢೀರ್‌ ಏರಿಕೆಯಾಗಿದೆ. ಪರಿಣಾಮ 4 ಗುಟ್ಕಾ ಕೊಳ್ಳುವವರು 2ಕ್ಕೆ ಸೀಮಿತವಾಗುತ್ತಿದ್ದಾರೆ.

ಸಾರಿಗೆ ಬಸ್‌ ನಿಂತಿರುವುದರಿಂದ ಮೊದಲೇ ವ್ಯಾಪಾರವಿಲ್ಲ. ಈಗ ಗುಟ್ಕಾ ಬೆಲೆ ಹೆಚ್ಚಳವಾಗಿರುವುದರಿಂದ ವ್ಯಾಪಾರ ಕುಸಿದಿದೆ. ಸಂಬಂ​ಧಿಸಿದವರು ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸುರಪುರದ ವ್ಯಾಪಾರಿ ಗೋವಿಂದ ಕರಡಿಗುಡ್ಡ ತಿಳಿಸಿದ್ದಾರೆ.
 

click me!