ಕೋವಿಡ್‌ಗೆ ಪತಿ ಬಲಿ : ಮನನೊಂದು ಪತ್ನಿ, ಮಗ ಆತ್ಮಹತ್ಯೆ

Kannadaprabha News   | Asianet News
Published : Apr 19, 2021, 07:51 AM ISTUpdated : Apr 19, 2021, 08:45 AM IST
ಕೋವಿಡ್‌ಗೆ ಪತಿ ಬಲಿ :  ಮನನೊಂದು ಪತ್ನಿ, ಮಗ ಆತ್ಮಹತ್ಯೆ

ಸಾರಾಂಶ

ಕೊರೋನಾ ಮಹಾಮಾರಿ ಅಟ್ಟಹಾಸ ದಿನದಿಂದ ದಿನಕ್ಕೇ ಏರಿಕೆಯಾಗುತ್ತಲೇ ಇದೆ. ಇದರ ಬೆನ್ನಲ್ಲೇ ಸಾವುಗಳ ಸಂಖ್ಯೆಯೂ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದೇ ವೇಳೆ ಮಹಿಳೆಯೋರ್ವರು ಪತಿ ಕೋವಿಡ್‌ಗೆ ಬಲಿಯಾದ ಹಿನ್ನೆಲೆ ಮನನೊಂದು ಮಗನೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ದಾಬಸ್‌ಪೇಟೆ (ಏ.19): ಕೊರೋನಾ ಸೋಂಕಿಗೆ ಪತಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಮನನೊಂದ ಹೆಂಡತಿ ಮತ್ತು ಮಗ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಬೈರನಾಯ್ಕನಹಳ್ಳಿ ಗ್ರಾಮದ ಸಮೀಪ ಇತ್ತೀಚೆಗೆ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಹೆಸರಘಟ್ಟರಸ್ತೆಯಲ್ಲಿನ ಸೋಮಶೆಟ್ಟಿಹಳ್ಳಿ ನಿವಾಸಿ ರೇಖಾ(37) ಮತ್ತು ಇವರ ಮಗ ಮನೋಜ್‌ (21) ಆತ್ಮಹತ್ಯೆಗೆ ಶರಣಾದವರು. 

ರೇಖಾ ಗೃಹಿಣಿ ಆಗಿದ್ದು, ಮನೋಜ್‌ ಮೀನಾಕ್ಷಿ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಓದುತ್ತಿದ್ದ. ಸೋಮಶೆಟ್ಟಿಹಳ್ಳಿಯಲ್ಲಿ ವಾಸಿಯಾಗಿದ್ದ ಕಾಂಟ್ರಾಕ್ಟರ್‌ ಶಿವಣ್ಣ ಎಂಬುವರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೋವಿಡ್‌ ಸೋಂಕಿನಿಂದ ಸಾವನ್ನಪ್ಪಿದ್ದರು. ಶಿವಕುಮಾರ್‌ ಸಾವನ್ನಪ್ಪಿದ 9 ದಿನದ ನಂತರ ಆತನ ತಾಯಿ ಶಿವಾಂಬಿಕೆ ಸಹ ಕೋವಿಡ್‌ ಸೋಂಕಿಗೆ ಸಾವನ್ನಪ್ಪಿದ್ದರು ಎನ್ನಲಾಗಿದೆ.

ಕೊರೋನಾ ಕಾರಣ ಆಕ್ಸಿಜನ್‌ಗೆ ಹೆಚ್ಚಿದ ಬೇಡಿಕೆ; ಕೈಗಾರಿಕೆಗೆ ಆಮ್ಲಜನಕ ಪೂರೈಕೆ ನಿಷೇಧಿಸಿದ ಸರ್ಕಾರ! ..

ಶಿವಕುಮಾರ್‌ ಸಾವನ್ನಪ್ಪಿದ ಬೆನ್ನಲ್ಲೇ ಆತನ ಹೆಂಡತಿ ರೇಖಾ ಹಾಗೂ ಮಗ ಮನೋಜ್‌ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಏ.16ರಂದು ಬೈರನಾಯ್ಕನಹಳ್ಳಿ ಬಳಿ ಬೆಂಗಳೂರು - ಹುಬ್ಬಳ್ಳಿ ಮಾರ್ಗದ ರೈಲಿಗೆ ತಲೆ ಕೊಟ್ಟಿಸಾವನ್ನಪ್ಪಿದ್ದಾರೆ. ಘಟನೆ ಭಾನುವಾರ ಬೆಳಕಿಗೆ ಬಂದಿದ್ದು, ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

PREV
click me!

Recommended Stories

ಇಂದು 20,000 ರೈತರ ಜತೆ ಬಿಜೆಪಿ ಸುವರ್ಣಸೌಧ ಮುತ್ತಿಗೆ
ಡ್ರಗ್‌ ಪೆಡ್ಲರ್‌ಗಳಿಗೆ ಬೆಂಗಳೂರೇ ದೊಡ್ಡ ಟಾರ್ಗೆಟ್‌: ಚಾಕೋಲೆಟ್‌, ಕಾಫಿ ಪುಡಿ ಹೆಸರಲ್ಲಿ ಡ್ರಗ್ಸ್‌ ಸಾಗಾಟ