ಹುಬ್ಬಳ್ಳಿ (ನ.13) : ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿ ಸೋಮವಾರ ಚಿಣ್ಣರ ಕುಂಚದಿಂದ ಬಣ್ಣ ಬಣ್ಣದ ಚಿತ್ತಾರ ಮೂಡಲಿವೆ..! ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರತಿವರ್ಷ ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸುವ ರಾಜ್ಯದ ಪ್ರತಿಷ್ಠಿತ ‘ಚಿತ್ರಕಲಾ ಸ್ಪರ್ಧೆ-2022’ ನಡೆಯಲಿದೆ. ರಾಜ್ಯದಲ್ಲಿ ಹೈಸ್ಕೂಲು ವಿದ್ಯಾರ್ಥಿಗಳಿಗಾಗಿ ಆಯೋಜನೆಯಾಗುವ ಅತಿ ದೊಡ್ಡ ಸ್ಪರ್ಧೆ ಇದು.
ಈ ಚಿತ್ರಕಲಾ ಸ್ಪರ್ಧೆಗೆ ಇಂದಿರಾ ಗಾಜಿನ ಮನೆ ಸಜ್ಜುಗೊಂಡಿದೆ. 2018 ಮತ್ತು 2019ರಲ್ಲೂ ಬೃಹತ್ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ಎರಡು ವರ್ಷವೂ ಕಾರ್ಯಕ್ರಮ ಅಭೂತಪೂರ್ವ ಯಶಸ್ವಿಯಾಗಿತ್ತು. ಕೊರೋನಾದಿಂದಾಗಿ 2020ರಲ್ಲಿ ಸಾಧ್ಯವಾಗಿರಲಿಲ್ಲ. ಆದರೆ, ಕಳೆದ ವರ್ಷ (2021) ಕೊರೋನಾ ಕಾಟ ಕಳೆದಿದ್ದರಿಂದ ಸ್ಪರ್ಧೆ ಆಯೋಜಿಸಲಾಗಿತ್ತು. ಕೊರೋನಾ ಕಟ್ಟುನಿಟ್ಟು ತೆಗೆದುಹಾಕಿದ್ದರಿಂದ ನಿರೀಕ್ಷೆಗೂ ಮೀರಿ 2500 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಬಾರಿ 3000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಹುಬ್ಬಳ್ಳಿಯಲ್ಲಿ ಹೊತ್ತಿ ಉರಿದ ಖಾಸಗಿ ಬಸ್, ತಪ್ಪಿದ ಭಾರಿ ದುರಂತ!
ಭಾರೀ ಬಹುಮಾನ:
ಈ ಚಿತ್ರಕಲಾ ಸ್ಪರ್ಧೆಯಲ್ಲಿ 8, 9 ಹಾಗೂ 10ನೆಯ ತರಗತಿ ಓದುವ ಮಕ್ಕಳು ಭಾಗವಹಿಸಬಹುದಾಗಿದೆ. ಪ್ರತಿ ವರ್ಗಕ್ಕೂ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನ ನೀಡಲಾಗುತ್ತಿದೆ. ಪ್ರಥಮ ಸ್ಥಾನ ಪಡೆದ ಮೂವರಿಗೆ ಸೈಕಲ್, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ನಗದು ಬಹುಮಾನ ಇವೆ. ಜತೆಗೆ ಪ್ರಮಾಣ ಪತ್ರ, ಫಲಕ, ಗಿಪ್‌್ಟಹ್ಯಾಂಪರ್ ಸೇರಿದಂತೆ ಹಲವು ಆಕರ್ಷಕ ಬಹುಮಾನ ನೀಡಲಾಗುತ್ತಿದೆ.
ಕೆಎಂಎಫ್, ಅವ್ವ ಸೇವಾ ಟ್ರಸ್ಟ್, ಮಜೇಥಿಯಾ ¶ೌಂಡೇಶನ್, ಸ್ವರ್ಣ ಗ್ರೂಪ್ ಆಫ್ ಕಂಪನಿಸ್ ಸಹಭಾಗಿತ್ವದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಉದ್ಘಾಟಿಸುವರು.
ವಿಧಾನಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿಪ್ರಶಸ್ತಿ ಪ್ರದಾನ ಮಾಡುವರು. ಕನ್ನಡಪ್ರಭ, ಏಷ್ಯಾನೆಟ್ ನ್ಯೂಸ್‌ನ ಪ್ರಧಾನ ಸಂಪಾಕರಾದ ರವಿ ಹೆಗಡೆ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ, ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರಪ್ಪ ವಿ. ಮುಗದ, ಸ್ವರ್ಣಾ ಗ್ರೂಪ್ ಆಫ್ ಕಂಪೆನೀಸ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ವಿಎಸ್‌ವಿ ಪ್ರಸಾದ, ಮಜೇಥಿಯಾ ¶ೌಂಡೇಶನ್ ಅಧ್ಯಕ್ಷರಾದ ನಂದಿನಿ ಕಶ್ಯರ ಮಜೇಥಿಯಾ, ವಿಶೇಷ ಅತಿಥಿಗಳಾಗಿ ಖ್ಯಾತ ಸಿನಿತಾರೆ ಆರೋಹಿ ನಾರಾಯಣ ಭಾಗವಹಿಸುವರು.
ಹಾಲಿನ ಬಗೆಗೆ ಜಾಗೃತಿ:
2018ರಿಂದಲೂ ಸ್ಪರ್ಧೆಗೆ ಕೈ ಜೋಡಿಸಿರುವ ಕೆಎಂಎಫ್ ಕಳಪೆ ಗುಣಮಟ್ಟದ ಹಾಲು ಬಳಕೆಯಿಂದಾಗುವ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತನ್ನ ಉತ್ಪನ್ನಗಳ ಪ್ರದರ್ಶನ, ಅದರಿಂದಾಗುವ ಪ್ರಯೋಜನ, ಹೊಸ ಉತ್ಪನ್ನಗಳ ಬಿಡುಗಡೆ ಮಾಡುತ್ತಿದೆ. ಕಾರ್ಯಕ್ರಮದಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳ ಕುರಿತು ಮಕ್ಕಳು, ಪಾಲಕರು ಮತ್ತು ಶಿಕ್ಷಕರಿಗೆ ಜಾಗೃತಿ ಮೂಡಿಸುತ್ತಿದೆ.
Hubballi| ಕನ್ನಡಪ್ರಭ ಚಿತ್ರಕಲಾ ಸ್ಪರ್ಧೆಗೆ ಭರ್ಜರಿ ಸ್ಪಂದನೆ
ಖ್ಯಾತ ಸಿನಿತಾರೆ ಆರೋಹಿ ನಾರಾಯಣ ಮಕ್ಕಳೊಂದಿಗೆ ಬೆರೆತು, ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಚಿತ್ರಕಲೆ ಬಿಡಿಸಲು ಅಗತ್ಯವಿರುವ ಎಲ್ಲ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗುತ್ತದೆ. ಜತೆಗೆ ತಿನ್ನಲು ಚಾಕಲೇಟ್, ಬಿಸ್ಕತ್, ಸಿಹಿ ತಿಂಡಿ, ಬಿಸಿಬಿಸಿ ತಿಂಡಿ ನೀಡಿ ಮಕ್ಕಳ ಸಂಭ್ರಮ ಇಮ್ಮಡಿಗೊಳಿಸಲಾಗುತ್ತದೆ. ಹಾಗಾಗಿ ಇದೊಂದು ಮಕ್ಕಳ ಹಬ್ಬವಾಗಿ ಜನಮಾನಸದಲ್ಲಿ ಬೇರೂರಿದೆ.