ಭಾರೀ ಏರಿಕೆಯಾಗಿದ್ದ ಅಡಕೆ ದರ ದಿಢೀರ್ ಕುಸಿತ

By Kannadaprabha NewsFirst Published Oct 23, 2020, 7:28 AM IST
Highlights

ಭಾರೀ ಏರಿಕೆಯತ್ತ ಸಾಗಿದ್ದ ಅಡಕೆ ದರವು ಇದೀಗ ದಿನದಿನಕ್ಕೂ ಇಳಿಮುಖವಾಗುತ್ತಲೇ ಸಾಗಿದೆ. ಅತೀ ಹೆಚ್ಚು ದಾಖಲೆ ಬರೆದಿದ್ದ ದರ ಇದೀಗ ಬೆಳೆಗಾರರಿಗೆ ಆತಂಕ ಒಡ್ಡಿದೆ

ಶಿರಸಿ (ಅ.23): ಅಡಕೆ ಮಾರುಕಟ್ಟೆಯಲ್ಲಿ ದರ ಏರಿಕೆಯ ಪರ್ವ ಮುಗಿದಂತೆ ಕಾಣಿಸುತ್ತಿದೆ. ಕಣ್ಣು ಕುಕ್ಕುವ ರೀತಿಯಲ್ಲಿ ಏರಿಕೆ ಆದ ಚಾಲಿ ಅಡಕೆ ದರ ಈಗ ಒಮ್ಮಿಂದೊಮ್ಮೆಲೆ ಪ್ರಪಾತಕ್ಕೆ ಬೀಳುತ್ತಿದೆ. 

ಚಾಲಿ ಅಡಕೆ ದರ ಕಳೆದ 15 ದಿನಗಳ ಈಚೆ ಒಮ್ಮೆಲೇ ಏರಿಕೆಯಾಗತೊಡಗಿತ್ತು. ಪ್ರತಿ ಕ್ವಿಂಟಲ್‌ ಚಾಲಿ ಅಡಕೆಗೆ ಸರಾಸರಿ 30 ಸಾವಿರ ದರವಿದ್ದುದು ಏರಿಕೆಯಾಗಿದೆ.

 ಪ್ರತಿದಿನ 500-600ರಷ್ಟುಏರಿಕೆ ಆಗಿ, ಅಡಕೆ ಮಾರಾಟ ಮಾಡಿಕೊಂಡವರು ಪಶ್ಚಾತ್ತಾಪ ಪಡುತ್ತಿದ್ದರೆ, ಅಡಕೆ ಇಟ್ಟುಕೊಂಡವರು ದರ ಏರಿಕೆಯ ರೋಚಕತೆ ಅನುಭವಿಸುತ್ತಿದ್ದರು.

ರೈತರಿಗೆ ಬಂಪರ್ : ಅಡಕೆಗೆ ಬೆಲೆ ಭಾರೀ ಏರಿಕೆ ...

 ಅ.17ರಂದು ಚಾಲಿ ಅಡಕೆ ಪ್ರತಿ ಕ್ವಿಂಟಲ್‌ಗೆ 40 ಸಾವಿರ ರು. ದಾಟಿತ್ತು. ಈಗ ಏರಿಕೆಯ ಪರ್ವ ಮುಗಿದಿದೆ. ದರ ಇಳಿಕೆ ಪ್ರಾರಂಭವಾಗಿದೆ. ಪ್ರತಿ ದಿನವೂ ಸಾವಿರ ರು. ನಷ್ಟುಇಳಿಕೆಯಾಗತೊಡಗಿದೆ. ಅ.20ರ ಮಾರುಕಟ್ಟೆಯಲ್ಲಿ ಚಾಲಿ ಅಡಕೆ 34,299 ರು.ನಿಂದ  39,691 ರು. ದರವಾಗಿದ್ದರೆ, ಅ.21ರಂದು ಮಾರುಕಟ್ಟೆಯಲ್ಲಿ 33,899 ರು. ರಿಂದ 39,111 ರು.ಗೆ ಇಳಿದಿದೆ.

click me!