ಬೆಂಗಳೂರು ಮೆಟ್ರೋ ವಿಸ್ತರಣೆ; 10 ನಿಮಿಷದಲ್ಲಿ ಅಂಜನಾಪುರದಿಂದ ಯಲಚೇನಹಳ್ಳಿ ಪ್ರಯಾಣ!

By Suvarna News  |  First Published Oct 22, 2020, 7:05 PM IST

ಕೊರೋನಾ ವೈರಸ್ ನಡುವೆ ಜನರ ಬದುಕು ಆರಂಭಗೊಂಡಿದೆ. ಇತ್ತ ಬೆಂಗಳೂರು ಮೆಟ್ರೋ ವಿಸ್ತರಣೆಯಾಗುತ್ತಿದೆ. ಇದೀಗ ಅಂಜನಾಪುರದಿಂ ಯಲಚೇನಹಳ್ಳಿ ಪ್ರಯಾಣ ಕೇವಲ 10 ನಿಮಿಷ ಮಾತ್ರ. ಈ ಕುರಿತ ವಿವರ ಇಲ್ಲಿದೆ.
 


ಬೆಂಗಳೂರು(ಅ.22): ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಇದೀಗ ನಮ್ಮ ಮೆಟ್ರೋ ಅಂಜಾನಪುರಕ್ಕೆ ವಿಸ್ತರಣೆಯಾಗಿದೆ. ಕನಕಪುರ ರಸ್ತೆ ವಲಯದಲ್ಲಿ ನಮ್ಮ ಮೆಟ್ರೋ 6.4 ಕಿಲೋಮೀಟರ್ ವಿಸ್ತರಣೆಯಾಗಿದೆ. ಇದರ ಪರಿಣಾಮವಾಗಿ ಇದೀಗ ಕೇವಲ 10 ನಿಮಿಷದಲ್ಲಿ ಅಂಜನಾಪುರದಿಂದ ಯಲಚೇನಹಳ್ಳಿ ತಲುಪಬಹುದು.

ಬೆಂಗಳೂರಲ್ಲಿ ಮೆಟ್ರೋ ಸಂಚಾರ ಶುರುವಾಗಿ 10 ವರ್ಷ

Latest Videos

undefined

ಮುಂದಿನ ತಿಂಗಳು ನೂತನ ಮೆಟ್ರೋ ರಸ್ತೆ ಪ್ರಯಾಣ ಆರಂಭಗೊಳ್ಳಲಿದೆ. ಅಂಜನಾಪುರದಿಂದ ಯಲಚೇನಹಳ್ಳಿ ಪ್ರಯಾಣಕ್ಕೆ 20 ರೂಪಾಯಿ ದರ ನಿಗದಿಪಡಿಸಲಾಗಿದೆ. 6.4 ಉದ್ದನೆಯ ಮೆಟ್ರೋ ವಿಸ್ತರಣೆ ಮಾರ್ಗದಲ್ಲಿ ಕೊಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ವಜ್ರಹಳ್ಳಿ ಹಾಗೂ ಅಂಜನಾಪರು ಸ್ಟೇಶನ್ ಹೊಂದಿದೆ.

ಪೂರ್ಣಾವಧಿ ಮೆಟ್ರೋ ರೈಲು ಸಂಚಾರ

ಈ ತಿಂಗಳ ಅಂತ್ಯದಲ್ಲಿ ನೂತನ ಮಾರ್ಗದ ಸುರಕ್ಷತಾ ಪರೀಕ್ಷೆ ನಡೆಯಲಿದೆ. ಕನ್ನಡ ರಾಜ್ಯೋತ್ಸವ(ನವೆಂಬರ್ 1)ಕ್ಕೆ ಉದ್ಘಾಟನೆಗೆ ಉದ್ದೇಶಿಸಿದ್ದ ನೂತನ ಮಾರ್ಗ ಕೊಂಚ ವಿಳಂಬವಾಗಲಿದೆ. ಅಂತಿಮ ಹಂತದ ಕೆಲಸಗಳು ನಡೆಯುತ್ತಿದೆ. ಆದರೆ ನವೆಂಬರ್ ತಿಂಗಳಲ್ಲೇ ಅಂಜನಾಪುರ-ಯಲಚೇನಹಳ್ಳಿ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಬಿಎಂಆರ್‌ಸಿಎಲ್ ನಿರ್ದೇಶಕ ಅಜಯ್ ಸೇಠ್ ಹೇಳಿದ್ದಾರೆ.

2018ರಿಂದ ನೂತನ ಮಾರ್ಗ ಸಂಚಾರ ಮುಕ್ತಕ್ಕೆ ಹಲವು ದಿನಾಂಕ ಫಿಕ್ಸ್ ಮಾಡಲಾಗಿತ್ತು. ಆದರೆ ಹಲವು ಕಾರಣಗಳಿಂದ ಕೆಲಸ ಕಾಮಾಗಾರಿ ಮುಕ್ತಾಯವಾಗದ ಕಾರಣ ಮುಂದೂಡಿಕೆಯಾಗುತ್ತಲೇ ಇತ್ತು. ಆಗಸ್ಟ್ 15 ರಂದು ಉದ್ಘಾಟನೆಗೆ ದಿನಾಂಕ ಮುಹೂರ್ತ ಫಿಕ್ಸ್ ಮಾಡಲಾಗಿತ್ತು. ಆದರೆ ಮಾರ್ಚ್ ತಿಂಗಳಿನಿಂದ ಕೊರೋನಾ ವೈರಸ್ ವಕ್ಕರಿಸಿದ ಕಾರಣ ಆಗಸ್ಟ್ ತಿಂಗಳ ದಿನಾಂಕ ಮುಂದೂಡಿ ನವೆಂಬರ್ 1 ರಂದು ಉದ್ಘಾಟನೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ ನವೆಂಬರ್ ಅಂತ್ಯದಲ್ಲಿ ಮೆಟ್ರೋ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ.

click me!