ಅಪ್ಪಶೆಟ್ಟಳ್ಳಿ ಗ್ರಾಮದಲ್ಲಿ ಮಿತಿ ಮೀರಿದ ಕಾಡಾನೆ ಹಾವಳಿ: ಅಪಾರ ಬೆಳೆ ಹಾನಿ

By Kannadaprabha News  |  First Published Oct 20, 2022, 9:42 AM IST
  • ಅಪ್ಪಶೆಟ್ಟಳ್ಳಿ ಗ್ರಾಮದಲ್ಲಿ ಮಿತಿ ಮೀರಿದ ಕಾಡಾನೆ ಹಾವಳಿ: ಅಪಾರ ಬೆಳೆ ಹಾನಿ
  • ಫಸಲಿಗೆ ಬಂದ ಭತ್ತ, ಬಾಳೆ, ತೆಂಗು, ಅಡಕೆ ಗಿಡಗಳನ್ನು ಮುರಿದು ಧ್ವಂಸಗೊಳಿಸುತ್ತಿರುವ ಕಾಡಾನೆಗಳು

ಶನಿವಾರಸಂತೆ (ಅ.20) : ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು ಕಳೆದ ವಾರವಷ್ಟೇ ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಮಾದರೆ ಗ್ರಾಮದಲ್ಲಿ ಬೀಡುಬಿಟ್ಟಿದ್ದ 3 ಕಾಡಾನೆಗಳ ಹಿಂಡು ರಾತ್ರಿ ವೇಳೆ ರೈತರ ಗದ್ದೆ, ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿದ್ದವು. ಗ್ರಾಮದ ರೈತರೊಬ್ಬರಿಗೆ ಸೇರಿದ 3 ಎಕರೆ ಭತ್ತದ ಗದ್ದೆಗೆ ನುಗಿದ್ದ ಕಾಡಾನೆಗಳು ಅಪಾರ ಪ್ರಮಾಣದಲ್ಲಿ ಭತ್ತದ ಬೆಳೆಯನ್ನು ತುಳಿದು ಧ್ವಂಸಗೊಳಿಸಿದ ಬೆನ್ನಲ್ಲೆ ಇದೇ 3 ಕಾಡಾನೆಗಳ ಹಿಂಡು ಸಮೀಪದ ಅಪ್ಪಶೆಟ್ಟಳ್ಳಿ ಗ್ರಾಮದ ಅರಣ್ಯದಲ್ಲಿ ಬೀಡುಬಿಟ್ಟಿವೆ.

ಒಂಟಿ ಸಲಗ ಸೆರೆ ಹಿಡಿ​ಯು​ವಂತೆ ಗ್ರಾಮ​ಸ್ಥರ ಒತ್ತಾ​ಯ

Latest Videos

undefined

ಕಳೆದ 3 ದಿನಗಳಿಂದ ಅಪ್ಪಶೆಟ್ಟಳ್ಳಿ ಗ್ರಾಮದ ಅರಣ್ಯದಲ್ಲಿ ಬೀಡುಬಿಟ್ಟಿರುವ ಈ 3 ಕಾಡಾನೆಗಳು ರಾತ್ರಿ ವೇಳೆಯಲ್ಲಿ ಪಕ್ಕದ ರೈತರ ಜಮೀನುಗಳಿಗೆ ನುಸುಳುತ್ತಿದ್ದು ಫಸಲಿಗೆ ಬಂದಿರುವ ಭತ್ತದ ಬೆಳೆ ಸೇರಿದಂತೆ ತೋಟಗಳಲ್ಲಿರುವ ಬಾಳೆ, ತೆಂಗು, ಅಡಕೆ ಗಿಡಗಳನ್ನು ತುಳಿದು ಧ್ವಂಸಗೊಳಿಸುತ್ತವೆ. ಕಾಡಾನೆಗಳ ಹಾವಳಿಯಿಂದ ಅಪಾರ ಪ್ರಮಾಣದಲ್ಲಿ ನಷ್ಟವಾಗುತ್ತಿದೆ, ರೈತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ನಿರಂತರ 3 ದಿನಗಳಿಂದ ಅಪ್ಪಶೆಟ್ಟಳ್ಳಿ ಗ್ರಾಮದ ರೈತರಾದ ವಿಜಯ್‌ ಕುಮಾರ್‌, ರಕ್ಷಿತ್‌, ಚಂದ್ರಕಾಂತ್‌, ಹೇಮಂತ್‌ ಕುಮಾರ್‌, ಶಿವು, ಕಿರಣ್‌ಕುಮಾರ್‌, ವಿಶ್ವನಾಥ್‌, ಸುಧಾಕರ್‌, ಆದರ್ಶ, ರಾಜು, ಉಮೇಶ್‌ ಮತ್ತಿತರರ ಗದ್ದೆ ಮತ್ತು ತೋಟಗಳಿಗೆ ನುಸುಳುತ್ತಿರುವ ಕಾಡಾನೆಗಳ ಹಿಂಡು ಬಾಳೆ, ಅಡಕೆ, ತೆಂಗಿನ ಗಿಡಗಳನ್ನು ತುಳಿದು ಮರಿದು ಹಾಕಿವೆ. ಜೊತೆಗೆ ತೋಟಗಳಲ್ಲಿ ನೀರಾವರಿ ಕೃಷಿಗೆ ಬಳಸುವ ಪೈಪ್‌, ಡ್ರಮ್‌ ಇನ್ನೂ ಮುಂತಾದ ಕೃಷಿ ಪರಿಕರಗಳನ್ನು ತುಳಿದು ಹಾನಿ ಮಾಡಿರುವುದರಿಂದ ನಮಗೆ ಕಾಡಾನೆಗಳಿಂದ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದ್ದು ಅರಣ್ಯ ಇಲಾಖೆ ಕಾಡಾನೆಗಳನ್ನು ಕಾಡಿಗೆ ಓಡಿಸುವಂತೆ ಗ್ರಾಮದ ರೈತರು ಆಗ್ರಹಿಸಿದ್ದಾರೆ.

ಸ್ವಚ್ಛತಾ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ

ಕೊಡಗು ಗೌಡ ಫೆಡರೇಶನ್‌, ಕೊಡಗು ಗೌಡ ಸಮಾಜ, ಕೊಡಗು ಗೌಡ ಯುವ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಕೊಡಗು- ಮೈಸೂರು ಜಿಲ್ಲೆ ಗಡಿ ಭಾಗ ಕುಶಾಲನಗರ ಗೇಟ್‌ ನಿಂದ ತಲ ಕಾವೇರಿ ದೇವಸ್ಥಾನ ಗೇಟ್‌ ವರೆಗೆ ಹಮ್ಮಿಕೊಂಡಿರುವ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮಕ್ಕೆ ಬುಧವಾರ ಬೆಳಗ್ಗೆ ಕುಶಾಲನಗರದಲ್ಲಿ ಚಾಲನೆ ನೀಡಲಾಯಿತು.

ಚಿಕ್ಕಮಗಳೂರು: ವಿಪರೀತ ಕಾಡಾನೆ ಕಾಟ,  ಓಡಿಸಲು ಹರಸಾಹಸ  ಪಡುತ್ತಿರುವ ಅರಣ್ಯ ಇಲಾಖೆ

ಈ ಸ್ವಚ್ಛತಾ ಶ್ರಮದಾನ ಕಾರ್ಯದಲ್ಲಿ ಕೊಡಗಿನಲ್ಲಿರುವ ಎಲ್ಲ ಅರೆಭಾಷೆ ಗೌಡ ಸಮಾಜಗಳು ಭಾಗವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬುಧವಾರ ಆಲೂರುಸಿದ್ದಾಪುರ ಅರೆಭಾಷೆ ಗೌಡ ಸಮಾಜದ ಸದಸ್ಯರು ಸ್ವಚ್ಛತಾ ಶ್ರಮದಾನ ಕಾರ್ಯದಲ್ಲಿ ಪಾಲ್ಗೊಂಡರು. ಬುಧವಾರ ಬೆಳಗ್ಗೆ ಕುಶಾಲನಗರ ಗೇಟ್‌ನಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಸಂದರ್ಭ ಪಾಲ್ಗೊಂಡ ಆಲೂರುಸಿದ್ಧಾಪುರ ಅರೆಭಾಷೆ ಗೌಡ ಸಮಾಜದ ಅಧ್ಯಕ್ಷೆ ದೇವಾಯಿರ ಗಿರೀಶ್‌ ಮತ್ತು ಕಾರ್ಯದರ್ಶಿ ಕುಯುಮುಡಿ ಜಯಕುಮಾರ್‌, ಆಲೂರುಸಿದ್ದಾಪುರ ಅರೆಭಾಷೆ ಗೌಡ ಸಮಾಜದ ಸದಸ್ಯರು ಸ್ವಚ್ಛತಾ ಶ್ರಮದಾನ ಕಾರ್ಯಕ್ಕೆ ಸಾಥ್‌ ನೀಡುತ್ತಿದ್ದು ನಾವು ಮಡಿಕೇರಿ ವರೆಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದೇವೆ ಎಂದರು.

click me!