24ರಂದು ತೆಂಗಿನಕಾಯಿಗೆ ಗುಂಡು ಹೊಡೆಯುವ ರಾಜ್ಯಮಟ್ಟದ ಸ್ಪರ್ಧೆ

By Kannadaprabha News  |  First Published Oct 20, 2022, 8:46 AM IST
  • 24ರಂದು ತೆಂಗಿನಕಾಯಿಗೆ ಗುಂಡು ಹೊಡೆಯುವ ರಾಜ್ಯಮಟ್ಟದ ಸ್ಪರ್ಧೆ
  • ನಾಪೋಕ್ಲು ನಾಲ್‌ನಾಡ್‌ ರಿಕ್ರಿಯೇಷನ್‌ ಅಸೋಸಿಯನ್‌ನಿಂದ ಸ್ಪರ್ಧೆ ಆಯೋಜನೆ: ಲವ ಚಿಣ್ಣಪ್ಪ

ನಾಪೋಕ್ಲು (ಅ.20) : ನಾಪೋಕ್ಲುವಿನ ನಾಲ್‌ನಾಡ್‌ ಪ್ಲಾಂಟ​ರ್‍ಸ್ ರಿಕ್ರಿಯೇಷನ್‌ ಅಸೋಸಿಯೇಷನ್‌ ವತಿಯಿಂದ ದ್ವಿತೀಯ ವರ್ಷದ ರಾಜ್ಯಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯು ಅ.24ರಂದು ನಾಪೋಕ್ಲುವಿನ ಜನರಲ್‌ ಕೆ.ಎಸ್‌. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಅಸೋಸಿಯೇಷನ್‌ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ ತಿಳಿಸಿದ್ದಾರೆ.

ಮಾಯಮುಡಿಯಲ್ಲಿ ರಾಜ್ಯಮಟ್ಟದ ಶೂಟಿಂಗ್‌ ಸ್ಪರ್ಧೆ-2022

Latest Videos

undefined

ನಾಪೋಕ್ಲುವಿನ ನಾಲ್‌ನಾಡ್‌ ಪ್ಲಾಂಟ​ರ್‍ಸ್ ರಿಕ್ರಿಯೇಷನ್‌ ಅಸೋಸಿಯೇಷನ್‌ ಸಭಾಂಗಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, 0.22 ರೈಫಲ್‌ 50 ಮೀಟರ್‌ ರೇಂಜ್‌, 2ನೇ ವಿಭಾಗ 12 ಬೋರ್‌ 30 ಮೀಟರ್‌ ರೇಂಜ್‌ ಮತ್ತು ಏರ್‌ಗನ್‌ ಎಗ್‌ ಶೂಟಿಂಗ್‌ ಸೇರಿದಂತೆ ಮೂರು ವಿಭಾಗಗಳಲ್ಲಿ ಸ್ಫರ್ಧೆ ನಡೆಯಲಿದೆ.

ಮೊದಲನೇ ವಿಭಾಗದಲ್ಲಿ ವಿಜೇತರಾದವರಿಗೆ ನಬಾರ್ಡ್‌ನ ನಿವೃತ್ತ ಡಿಡಿಎಂ ಮುಂಡಂಡ ಸಿ. ನಾಣಯ್ಯ ಅವರು ತಮ್ಮ ತಂದೆ ಚಿಣ್ಣಪ್ಪ ಮತ್ತು ತಾಯಿ ಗೋಪಿ ಪೂವವ್ವ ಅವರ ಜ್ಞಾಪಕಾರ್ಥವಾಗಿ ನೀಡುವ ಪ್ರಥಮ ಬಹುಮಾನ 50 ಸಾವಿರ ರು. ನಗದು ಮತ್ತು ಆಕರ್ಷಕ ಟ್ರೋಫಿ, ಮಾಜಿ ಅಡಿಷನಲ್‌ ಅಡ್ವೋಕೇಟ್‌ ಜನರಲ್‌ ಅಜ್ಜಿಕುಟ್ಟೀರ ಎಸ್‌. ಪೊನ್ನಣ್ಣ ಅವರು ತಮ್ಮ ತಂದೆ ಎ.ಕೆ. ಸುಬ್ಬಯ್ಯ ಮತ್ತು ತಾಯಿ ಪೊನ್ನಮ್ಮ ಅವರ ಜ್ಞಾಪಕಾರ್ಥವಾಗಿ ನೀಡಿರುವ ದ್ವಿತೀಯ ಬಹುಮಾನ 30 ಸಾವಿರ ರು. ನಗದು ಮತ್ತು ಆಕರ್ಷಕ ಟ್ರೋಫಿ, ಯವಕಪಾಡಿಯ ಕಾಫಿ ಬೆಳೆಗಾರರಾದ ಪಾಂಡಂಡ ಕಿಶನ್‌ ಪೂಣಚ್ಚ ಅವರು ನೀಡಿರುವ ತೃತೀಯ ಬಹುಮಾನ 20 ಸಾವಿರ ರು. ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು. 2ನೇ ವಿಭಾಗದಲ್ಲಿ ವಿಜೇತರಾದವರಿಗೆ ನೆಲಜಿಯ ಜಯ ಕಾಫಿಯ ಮಂಡೀರ ಜಯ ದೇವಯ್ಯ ಅವರು ನೀಡಿರುವ ಪ್ರಥಮ ಬಹುಮಾನ 20 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, ಯವಕಪಾಡಿಯ ಅಂಜಪರವಂಡ ಕುಶಾಲಪ್ಪ ಅವರು ತಮ್ಮ ತಂದೆ ಸದಾ ಅಯ್ಯಪ್ಪ ಅವರ ಜ್ಞಾಪಕಾರ್ಥವಾಗಿ ನೀಡಿರುವ ದ್ವಿತೀಯ ಬಹುಮಾನ 15 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, ನೆಲಜಿಯ ಕಾಫಿ ಬೆಳೆಗಾರರಾದ ಚೀಯಕ್‌ಪೂವಂಡ ಕಂಬು ನಂಜಪ್ಪ ಅವರು ತಮ್ಮ ಪತ್ನಿ ಮೀನಾಕ್ಷಿ ಅವರ ಜ್ಞಾಪಕಾರ್ಥವಾಗಿ ನೀಡಿರುವ ತೃತೀಯ ಬಹುಮಾನ 10 ಸಾವಿರ ರು. ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು ಎಂದು ತಿಳಿಸಿದರು.

3ನೇ ವಿಭಾಗ ಕೋಳಿ ಮೊಟ್ಟೆಗೆ ಗುರಿ ಇಟ್ಟು ಹೊಡೆಯುವ ಸ್ಪರ್ಧಯಲ್ಲಿ ಪ್ರಥಮ ಬಹುಮಾನ 5 ಸಾವಿರ ರು. ನಗದು ಮತ್ತು ಟ್ರೋಫಿ, ದ್ವಿತೀಯ ಬಹುಮಾನ 3 ಸಾವಿರ ನಗದು ಮತ್ತು ಟ್ರೋಫಿ, ತೃತೀಯ ಬಹುಮಾನ 2 ಸಾವಿರ ನಗದು ಮತ್ತು ಟ್ರೋಫಿಯನ್ನು ದಾನಿಗಳಾದ ಕಾಫಿ ಬೆಳೆಗಾರರಾದ ಅರೆಯಡ ಎಂ. ರತ್ನ ಪೆಮ್ಮಯ್ಯ ಇವರು ತಮ್ಮ ತಂದೆ ಎ.ಬಿ. ಮೇದಪ್ಪ ಅವರ ಆಜ್ಞಾಪಕಾರ್ಥವಾಗಿ ನೀಡಿದ್ದಾರೆ ಹಾಗೂ ಮುಳಿಯ ಜ್ಯುವೆಲ್ಲ​ರ್‍ಸ್ ಅವರಿಂದ ಬೆಳ್ಳಿ ನಾಣ್ಯಗಳ ಉಡುಗೊರೆ ಇರುತ್ತದೆ ಎಂದು ಮಾಹಿತಿ ನೀಡಿದರು. ಬೆಂಗಳೂರಿನ ಕಾಟನ್‌ ವಲ್ಡ್‌ರ್‍ನ ಬಾಚಂಗಡ ಜಯಮೊಣ್ಣಪ್ಪ, ಹಾಗೂ ಕಕ್ಕಬ್ಬೆಯ ದಿ ತಾಮರ ಕೂಗ್‌ರ್‍ ಇವರುಗಳು ಟೈಟಲ್‌ ದಾನಿಗಳಾಗಿದ್ದಾರೆ.

ಉದ್ಘಾಟನಾ ಸಮಾರಂಭ: ಬೆಳಗ್ಗೆ 9 ಗಂಟೆಗೆ ನಡೆಯಲಿರುವ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ದಿ ತಾಮರ ಕೂಗ್‌ರ್‍ ರೆಸಾರ್ಚ್‌ನ ಕಕ್ಕಬ್ಬೆಯ ಸಲಹೆಗಾರರಾದ ಪಾಲಚಂಡ ಶಾಹಿ ಕರುಂಬಯ್ಯ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲಚ್ಚೀರ ಎ. ಅಯ್ಯಪ್ಪ, ಕೊಡವ ನ್ಯಾಷನಲ್‌ ಕೌನ್ಸಿಲ್‌ನ ಸಂಚಾಲಕರಾದ ನಂದಿನೆರವಂಡ ಯು. ನಾಚಪ್ಪ, ನಾಪೋಕ್ಲುವಿನ ಕಾಫಿ ಬೆಳೆಗಾರರಾದ ಬಿದ್ದಾಟಂಡ ಜೀವನ್‌ ಕರಿಯಪ್ಪ, ಬೆಂಗಳೂರಿನ ಈಗಲ್‌ ಡಿಟೆಕ್ಟಿವ್‌ ಏಜೆನ್ಸಿಯ ಚೇರ್‌ಮೆನ್‌ ಮುಕ್ಕಾಟೀರ ಅಣ್ಣಯ್ಯ ಆಗಮಿಸಲಿರುವರು. ಸಂಜೆ 4 ಗಂಟೆಗೆ ಅಸೋಸಿಯೇಷನ್‌ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಅಡಿಷನಲ್‌ ಅಡ್ವೋಕೇಟ್‌ ಜನರಲ್‌ ಅಜ್ಜಿಕುಟ್ಟೀರ ಎಸ್‌. ಪೊನ್ನಣ್ಣ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲಚ್ಚೀರ ಎ. ಅಯ್ಯಪ್ಪ, ನಬಾರ್ಡ್‌ನ ನಿವೃತ್ತ ಡಿಡಿಎಂ ಮುಂಡಂಡ ಸಿ. ನಾಣಯ್ಯ, ಬೆಂಗಳೂರಿನ ಕಾಟನ್‌ ವಲ್ಡ್‌ರ್‍ ಗಾರ್ಮೆಂಟ್ಸ್‌ನ ಬಾಚಂಗಡ ಜಯ ಮೊಣ್ಣಪ್ಪ, ಯವಕಪಾಡಿಯ ಕಾಫಿ ಬೆಳೆಗಾರರಾದ ಪಾಂಡಂಡ ಕಿಶನ್‌ ಪೂಣಚ್ಚ, ನೆಲಜಿಯ ಜಯ ಕಾಫಿಯ ಮಂಡೀರ ಜಯ ದೇವಯ್ಯ, ಯವಕಪಾಡಿಯ ಕಾಫಿ ಬೆಳೆಗಾರರಾದ ಅಂಜಪರವಂಡ ಕುಶಾಲಪ್ಪ, ನೆಲಜಿಯ ಕಾಫಿ ಬೆಳೆಗಾರರಾದ ಚೀಯಕ್‌ಪೂವಂಡ ಕುಂಬು ನಂಜಪ್ಪ, ನಾಪೋಕ್ಲುವಿನ ಕಾಫಿ ಬೆಳೆಗಾರರಾದ ಅರೆಯಡ ಎಂ. ರತ್ನ ಪೆಮ್ಮಯ್ಯ ಆಗಮಿಸಲಿದ್ದಾರೆಂದು ಬಾಚಮಂಡ ಲವ ಚಿಣ್ಣಪ್ಪ ತಿಳಿಸಿದರು.

ನಾಳೆಯಿಂದ 10 ದಿನ ಮಂಗ್ಳೂರು KSRTC ದೀಪಾವಳಿ ಪ್ಯಾಕೆಜ್‌ ಟೂರ್‌!

ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್‌ ಉಪಾಧ್ಯಕ್ಷ ಅರೆಯಡ ರತ್ನಾ ಪೆಮ್ಮಯ್ಯ, ಕಾರ್ಯದರ್ಶಿ ಚೀಯಕ್‌ಪೂವಂಡ ಅಪ್ಪಚ್ಚು, ಜಂಟಿ ಕಾರ್ಯದರ್ಶಿ ಕೇಟೋಳಿರ ಹರೀಶ್‌ ಪೂವಯ್ಯ, ಖಜಾಂಚಿ ಕರವಂಡ ಬೆಲ್ಲು ಬೆಳ್ಯಪ್ಪ, ನಿರ್ದೇಶಕರುಗಳಾದ ಬೊಳ್ಳಜೆಟ್ಟೀರ ಎಂ. ಸುರೇಶ್‌, ಅರೆಯಡ ಅಶೋಕ್‌, ಚೇನಂಡ ಸುರೇಶ್‌ ನಾಣಯ್ಯ, ಮತ್ತು ವ್ಯವಸ್ಥಾಪಕ ಮಣಿ ಇದ್ದರು.

click me!