ಉದ್ಯಮಶೀಲತೆ ಎನ್ನುವುದು ಉತ್ತರ ಕರ್ನಾಟಕದ ಕಡೆ ಕಣ್ಣಿಗೆ ಕಾಣದ ಮಾತು. ಅದರಲ್ಲೂ ಕಲಬುರಗಿ ಎಂಬಂತಹ ಪ್ರದೇಶದಲ್ಲಿ ಹಿಂದುಳಿದವರು ಎಂಬ ಹಣೆಪಟ್ಟಿಯೇ ಇದೆ. ಹೀಗಿರುವಾಗ ಆ ಹಣೆಪಟ್ಟಿಬದಲಿಸಲು ಸಕಾಲ ಬಂದೊದಗಿದೆ. ಕಾರಣ ಅಲ್ಲಿ ಈಗ ಆಸ್ಪತ್ರೆಗಳಲ್ಲಿ ಬಳಸುವ ಹತ್ತಿ ತಯಾರಿಕೆ ಫ್ಯಾಕ್ಟರಿ ಆರಂಭವಾಗಿದೆ. ಬರದ ನಾಡಲ್ಲಿ ಹತ್ತಿಯ ಉದ್ಯಮ ತಲೆ ಎತ್ತಿದೆ ಎಂದರೆ ಅದಕ್ಕೆ ಒಂದು ಹೆಣ್ಣು ಮಗಳು.
ಕಲಬುರಗಿ ಮೂಲಕ ಅಪೂರ್ವ ಬಜಾಜ್ ಹತ್ತಿ ಉದ್ದಿಮೆಯನ್ನು ಆರಂಭಿಸಿರುವ ಸಾಧಕಿ. ಇಂಜಿನಿಯರಿಂಗ್ ಮುಗಿದ ಮೇಲೆ ಕ್ಯಾಂಪಸ್ ಸೆಲೆಕ್ಷನ್, ದೊಡ್ಡ ಉದ್ಯೋಗಗಳನ್ನು ಅರಸದೆ ತನ್ನ ನೆಲದಲ್ಲಿ ಒಂದು ಉದ್ಯಮವನ್ನು ಆರಂಭಿಸಬೇಕು ಹಾಗೂ ಈ ಮೂಲಕ ಸ್ಥಳೀಯರಿಗೆ ಕೆಲಸ ಕೊಡಿಸಬೇಕು ಎನ್ನುವ ಮಹದಾಸೆ ಕಟ್ಟಿಕೊಂಡಿದ್ದರು.
ಅದಕ್ಕೆ ತಕ್ಕಂತೆ ಇಂಜಿನಿಯರಿಂಗ್ ನಂತರ ಮನೆಯವರೊಂದಿಗೆ ಚರ್ಚಿಸಿ, ಕಲಬುರಗಿಯ ಹಳೇ ಕೈಗಾರಿಕಾ ವಸಾಹತು ಪ್ರದೇಶ ಗಾಂಧಿ ನಗರ ಬಡಾವಣೆಯಲ್ಲಿ ಭವ್ಯವಾದ ‘ಮೆಡಿಕಾನ್ ಅಬ್ಸರ್ಬಂಟ್ ಕಾಟನ್ ಫ್ಯಾಕ್ಟರಿ’ಯನ್ನು ತಂದೆಯ ಸಹಕಾರದಿಂದ ತೆರೆದಿದ್ದಾರೆ.
ಬೇಕಾಬಿಟ್ಟಿ ನೆಟ್ಟ ಗಿಡದಿಂದ ವಾರಕ್ಕೆ 2000 ರು. ಆದಾಯ
ಅಪೂರ್ವ ಹಿನ್ನೆಲೆ
ಮೂಲತಃ ಕಲಬುರಗಿಯವರಾದ ಅಪೂರ್ವ ಬಜಾಜ್ ಬಿಇ ಪದವೀಧರೆ. ಬೆಂಗಳೂರಿನ ಪಿಇಎಸ್ ಕಾಲೇಜಿನಲ್ಲಿ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಹೊಂದಿದ್ದಾರೆ. ಅಪೂರ್ವ ಅಜ್ಜ ಎಂಎಸ್‌ಕೆ ಮಿಲ್ ನೌಕರರಾಗಿದ್ದರು. ಕಲಬುರಗಿಯಲ್ಲೊಂದು ವಿನೂತನ ಉದ್ದಿಮೆ ಸ್ಥಾಪಿಸಬೇಕೆನ್ನುವುದು ಅವರ ಆಸೆಯಾಗಿತ್ತು. ತಂದೆ ಉತ್ತಮ ಬಜಾಜ್ ಕಲಬುರಗಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದಾರೆ.
ಮೆಡಿಕಾನ್ ಸ್ಥಾಪನೆ ಹಿನ್ನೆಲೆ
ಅಪೂರ್ವ ಬಜಾಜ್ ಬಿಇ ನಂತರ ತಮ್ಮ ಬಂಧುಗಳಿರುವ ಮುಂಬೈಗೆ ಹೋಗಿದ್ದರು. ಅಲ್ಲಿ ತನ್ನ ಕರಿಯರ್ ಬಗ್ಗೆ ಚರ್ಚಿಸಿದ್ದು, ಆಗ ಹತ್ತಿ ಉದ್ಯಮದಲ್ಲಿನ ಉದ್ದಿಮೆ- ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿಯು ಉದ್ದಿಮೆದಾರಳÜನ್ನಾಗುವತ್ತ ಬಹಳ ಪ್ರಭಾವಗೊಳಿಸಿತಲ್ಲದೆ, ಬಹುದೊಡ್ಡ ಗುರಿಯಾಗಿ ಸಾಗಿತು. ಈ ನಿಟ್ಟಿನಲ್ಲಿ ಮುಂಬೈನಲ್ಲಿರುವ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಫಾರ್ ರಿಸಚ್‌ರ್ ಇನ್ ಕಾಟನ್ ಟೆಕ್ನಾಲಜಿ(ಸಿಐಆರ್‌ಸಿಟಿ) ಸಂಸ್ಥೆಗೆ ಭೇಟಿ ನೀಡಿ ಅಲ್ಲಿ ಹೊಸತೊಂದು ಕೋರ್ಸ್ ಮಾಡಿದರು.
ಹತ್ತಿ ಬಳಸಿ ಹೇಗೆ ಹೊಸ ಉತ್ಪನ್ನಗಳನ್ನು ಸೃಷ್ಟಿಸಬಹುದು ಎಂಬುದನ್ನೆಲ್ಲ ಕರಗತ ಮಾಡಿಕೊಂಡರು. ಅದರ ಫಲವೇ ಇವರ ಅರಳೆ ಉದ್ಯಮ ‘ಮೆಡಿಕಾನ್ ಕಾಟನ್ ಉದ್ಯಮ’ ಕಲಬರಗಿಯಲ್ಲಿ ಅರಳಿ ನಿಂತಿದೆ. ಈ ಮೂಲಕ ಅಜ್ಜನ ಕನಸ್ಸನ್ನೂ ಸಾಕಾರಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ಇಂದು ಎಲ್ಲರ ಮನೆಮಾತಾಗಿ ಸಾಧಿಸಿ ಮಾದರಿಯಾಗಿ ನಿಂತಿದ್ದಾರೆ.
ಶ್ರೀಗಂಧ ಬೀಜ ಮಾರಿದ್ರೆ ಎಕ್ರೆಗೆ ಎರಡು ಲಕ್ಷ ಆದಾಯ!
ಮೆಡಿಕಾನ್ ಕೆಲಸ
ಕಳೆದ ಫೆಬ್ರವರಿ ತಿಂಗಳಲ್ಲಿ ಆರಂಭವಾದ ‘ಮೆಡಿಕಾನ್ ಅಬ್ಸರ್ಬಂಟ್’ ಹತ್ತಿ ಫ್ಯಾಕ್ಟರಿಯು ಆಸ್ಪತ್ರೆ, ವೈದ್ಯಕೀಯ ಕೆಲಸಗಳಿಗೆ ಅಗತ್ಯವಿರುವ ಹೀರುವ ಅರಳೆ(ಕಾಳು ತೆಗೆದ ಹತ್ತಿ) ಅಬ್ಸರ್ಬಂಟ್ ಕಾಟನ್ ಆರಂಭಿಸಿದರು. ಅಬ್ಸರ್ಬಂಟ್ ಕಾಟನ್ ಹೀರುವ ಅರಳೆಗೆ ಆಸ್ಪತ್ರೆಗಳಲ್ಲಿದೆ ಬೇಡಿಕೆ ಹೆಚ್ಚುತ್ತಿದೆ. ಆಪರೇಷನ್ ಮಾಡುವಾಗ, ಬ್ಯಾಂಡೇಜ್, ಇತರೆ ಎಲ್ಲಾ ಆಸ್ಪತ್ರೆ ಕೆಲಸಗಳಿಗೆ ಬೇಕಾಗುವುದು ಈ ಅರಳೆ ಉಂಡೆ. ಹೀಗಾಗಿ ಈ ರೀತಿ ಬೇಡಿಕೆಯ ಕಾಟನ್ ಉತ್ಪಾದನೆಯನ್ನು ನಾನ್ಯಾಕೆ ಕಲಬುರಗಿಯಿದಂಲೇ ಆರಂಭಿಸಬಾರದು ಎಂದು ಅಪೂರ್ವ ಅವರಿಗೆ ಆಲೋಚನೆ ಹೊಳೆಯಿತು. ಈ ಬಗ್ಗೆ ತಂದೆ ಉತ್ತಮ್ ಬಜಾಜ್ ಬಳಿ ಹೇಳಿಕೊಂಡಿದ್ದು ಅವರ ಬೆಂಬಲದಿಂದಾಗಿ 1 ಕೋಟಿ ಬಂಡವಾಳದಲ್ಲಿ ಮೆಡಿಕಾನ್ ಕಾಟನ್ ಫ್ಯಾಕ್ಟರಿ ತಲೆ ಎತ್ತಿತು.
ನಾನೊಬ್ಬಳೇ ದೊಡ್ಡ ಕಂಪನಿಗೆ ಸೇರಿ ಕೈ ತುಂಬಾ ವೇತನ ಪಡೆದು ಸುಖ ಜೀವನ ನಡೆಸಬಹುದಿತ್ತು. ಇದರಿಂದ ನನ್ನ ಊರಿಗೆ ಏನೂ ಲಭ್ಯವಾಗುತ್ತಿರಲಿಲ್ಲ. ನನ್ನ ಅಜ್ಜನ ಕನಸು, ಉದ್ದಿಮೆದಾರಳಾಗುವ ನನ್ನ ಹಂಬಲ ಎರಡಕ್ಕೂ ನನ್ನ ಕುಟುಂಬದವರು ನೀರೆರೆದು ಪ್ರೋತ್ಸಾಹಿಸಿದರು. ಅದೇ ಬಲ ನನ್ನನ್ನು ಈವರೆಗೆ ಕರೆದುಕೊಂಡು ಬಂದಿದೆ. ಇದೀಗ ಉತ್ಪಾದನೆಗೆ ಬೇಡಿಕೆಯೂ ಹೆಚ್ಚುತ್ತಿದೆ. ಕಲಬುರಗಿ, ಬಾಗಲಕೋಟೆ, ವಿಜಯಪುರ, ಬೀದರ್, ಯಾದಗಿರಿಯ ಆಸ್ಪತ್ರೆಗಳಿಗೆ ನಮ್ಮ ಫ್ಯಾಕ್ಟರಿಯಿಂದ ಅರಳೆ ಉಂಡೆ ಹೋಗುತ್ತಿದೆ. ಬರುವ ದಿನಗಳಲ್ಲಿ ಇನ್ನಷ್ಟುಗುರಿಗಳಿದ್ದು ಅದಕ್ಕೆ ಎಲ್ಲರ ಸಹಕಾರ ಬೇಕಿದೆ. - ಅಪೂರ್ವ ಬಜಾಜ್ ,ಮೆಡಿಕಾನ್ ಕಾಟನ್ ಇಂಡಸ್ಟ್ರಿ, ಕಲಬುರಗಿ
ಮಧ್ಯಪ್ರದೇಶದ ಚಿಂದ್ವಾರಾ ಹಾಗೂ ಮಹಾರಾಷ್ಟದ ಅಹ್ಮದ್ ನಗರದಿಂದ ಕಚ್ಚಾ ಹತ್ತಿಯನ್ನು ಆಮದು ಮಾಡಿಕೊಳ್ಳಲಾಗುತ್ತೆ. ಹೀಗೆ ಬರುವ ಹತ್ತಿಯನ್ನು ಸಂಸ್ಕರಿಸಿ ಹೀರುವ ಅರಳೆ ತಯರಿಸಲಾಗುತ್ತೆ. ಕೊಯಮತ್ತೂರಿನಿಂದ ಉದ್ಯಮಕ್ಕೆ ಬೇಕಾಗುವ ಎಲ್ಲಾ ಯಂತ್ರೋಪಕರಣ ತರಿಸಿ ಸ್ಥಳೀಯ ಕೆಲಸಗಾರರಿಗೇ ತರಬೇತಿ ಕೊಡಿಸಿ ಇದೀಗ ದಿನದಲ್ಲಿ 2 ಶಿಫ್ಟ್‌ನಂತೆ ಅರಳೆ ಉಂಡೆ ಉತ್ಪಾದನೆ ಆರಂಭಿಸಿ ಯಶಸ್ಸು ಕಂಡಿದ್ದಾರೆ.
ಪ್ರತೀ ದಿನ 300 ಕೆಜಿಯಷ್ಟುಅರಳೆ ಇಲ್ಲಿ ಸಂಸ್ಕರಣೆಗೊಳ್ಳುತ್ತಿದೆ. ಕಳೆದ ಆರು ತಿಂಗಳಲ್ಲಿ ಮೆಡಿಕಾನ್ 20 ಲಕ್ಷದಷ್ಟುವಹಿವಾಟು ನಡೆಸಿ ಅಲ್ಪಾವಧಿಯಲ್ಲೇ ಯಶಸ್ಸು ಕಾಣುತ್ತಿರುವ ಸ್ಟಾರ್ಟ್‌ಅಪ್ ಉದ್ಯಮಗಳಲ್ಲಿ ಒಂದು ಹೆಗ್ಗಳಿಗೆ ಇದರದ್ದು. ಸಂಸ್ಕರಣೆ, ಪ್ಯಾಕೇಜ್, ಉಸ್ತುವಾರಿ ಎಲ್ಲಾ ಸೇರಿ 6 ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಪ್ರತೀ ದಿನ ಪೈಪೋಟಿ ಹೆಚ್ಚಾಗಿರುತ್ತೆ, ಏಳುಬೀಳುಗಳು ಇದ್ದೇ ಇರುತ್ತೆ. ಅದಕ್ಕಾಗಿ ಅಪೂರ್ವ ಅವರು ಈ ಕ್ಷೇತ್ರದಲ್ಲಿನ ಪರಿಣಿತರು, ಸಂಶೋಧಕರು, ಕೇಂದ್ರದ ಸಂಸ್ಥೆ ಸರ್ಕಾಟ್ ಜೊತೆಗೆ ಸಂಪರ್ಕ ಹೊಂದಿದ್ದಾರೆ...
ಕೈಗೆಟಕುವ ಬೆಲೆ, ಗುಣಮಟ್ಟಕ್ಕೆ ರಾಜಿ ಇಲ್ಲ
ಹೀರುವ ಅರಳೆ ಸಿದ್ಧಪಡಿಸುವ ಉದ್ಯಮದಲ್ಲಿ ಈವೆರಗೂ ದೇಶಿಯ ಉದ್ದಿಮೆಗಳಿಗಿಂತ ಬಹುರಾಷ್ಟ್ರೀಯ ಉದ್ದಿಮೆಗಳದ್ದೇ ಮೇಲುಗೈ. ಶೇ.80 ರಷ್ಟುಮಾರುಕಟ್ಟೆಇದೇ ರೀತಿಯ ಉದ್ದಿಮೆಗಳು ಆವರಿಸಿವೆ. ಈ ಸ್ಪರ್ಧಾ ಪ್ರಪಂಚದಲ್ಲೇ ಅಪೂರ್ವ ಅವರು ದೇಶಿಯವಾಗಿ ಮೆಡಿಕಾನ್ ಹೆಸರಲ್ಲಿ ಹೀರುವ ಅರಳೆ ಉಂಡೆ ಸಿದ್ಧಪಡಿಸುವ ಸವಾಲು ಸ್ವೀಕರಿಸಿ ಗಟ್ಟಿಯಾಗಿ ಹೆಜ್ಜೆ ಹಾಕುತ್ತಿದ್ದಾರೆ. ತಮ್ಮ ಉದ್ದಿಮೆಯಲ್ಲಿ ಕಚ್ಚಾ ಹತ್ತಿಯನ್ನು 5 ಪ್ರಮುಖ ಹಂತಗಳಲ್ಲಿ ಸಂಸ್ಕರಿಸಿ ಶುದ್ಧ ಕಾಟನ್ ಸಿದ್ಧಪಡಿಸುತ್ತಿದ್ದಾರೆ. ಕೈಗೆಟಕುವ ಬೆಲೆ, ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲದಂತಹ ಉತ್ಪಾದನೆ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ನಿಧಾನಗತಿಯಲ್ಲಿ ತಮ್ಮ ಉತ್ಪಾದನೆಗೆ ಬೇಡಿಕೆ ಕಂಡುಕೊಳ್ಳುತ್ತಿದ್ದಾರೆ.
ಬಳ್ಳಾರಿಯ ಬಿಸಿಲು ನಿರೋಧಕ ಬ್ರಿಟಿಷ್ ಕಟ್ಟಡಗಳು ಈಗ ಪ್ರೇಕ್ಷಣೀಯ ತಾಣಗಳು!
ಫಾರ್ಮಸಿ ಪರಿಣಿತೆ ಆರತಿ ಮಾಲಪಾಣಿ, ಪ್ರತಿಭಾ ಮಂತ್ರಿ ಸೇರಿ ಪರಿಣಿತರ ತಂಡ ಅಪೂರ್ವ ಅವರಿಗೆ ಸಲಹೆ- ಸೂಚನೆ ನೀಡುತ್ತಾ ಬಂದಿದ್ದಾರೆ. ಹೀಗಾಗಿ ಕಳೆದ 7 ತಿಂಗಳಲ್ಲೇ ಮೆಡಿಕಾನ್ ಹೀರುವ ಅರಳೆ ಉಂಡೆಗಳು ಉತ್ತರ ಕರ್ನಾಟಕದ ಆಸ್ಪತ್ರೆಗಳ ಗಮನ ಸೆಳೆದಿವೆ. ಪರಿಸರ ಸ್ನೇಹಿ ಹತ್ತಿ ಸಂಸ್ಕರಣೆ ತಂತ್ರಜ್ಞಾನ ಅಳವಡಿಸಿ ಹೆಚ್ಚಿನ ಉತ್ಪಾದನೆ ಮಾಡುವ ಆಲೋಚನೆಯ ಜೊತೆಗೆ ಬರುವ ದಿನಗಳಲ್ಲಿ ನ್ಯಾಪ್‌ಕಿನ್‌ಗೂ ವಿಸ್ತರಿಸುವ ಗುರಿ ಹೊಂದಿದ್ದಾರೆ. ಇವರಿಗೊಮ್ಮೆ ನಿಮ್ಮ ಮೆಚ್ಚುಗೆಯ, ಪ್ರೋತ್ಸಾಹದ ಮಾತುಗಳನ್ನು ಹೇಳಲು ಅಪೂರ್ವ ಬಜಾಜ್- 09731537323, (08472)223344 ಕರೆ ಮಾಡಿ ಶುಭಕೋರಿ.