ಪದ್ಮನಾಭರೆಡ್ಡಿ ನಾಮಪತ್ರ ವಾಪಸ್, ಕೊನೆ ಗಳಿಗೆಯಲ್ಲಿ ಬಿಜೆಪಿಯಲ್ಲಿ ಎಲ್ಲವೂ ಸುಸೂತ್ರ..!

Published : Oct 01, 2019, 11:38 AM IST
ಪದ್ಮನಾಭರೆಡ್ಡಿ ನಾಮಪತ್ರ ವಾಪಸ್, ಕೊನೆ ಗಳಿಗೆಯಲ್ಲಿ ಬಿಜೆಪಿಯಲ್ಲಿ ಎಲ್ಲವೂ ಸುಸೂತ್ರ..!

ಸಾರಾಂಶ

ನಾಮಪತ್ರ ವಾಪಸ್ ಖಚಿತಪಡಿಸಿದ ಆರ್. ಆಶೋಕ್| ಬಿಜೆಪಿ ಮೇಯರ್ ಆಯ್ಕೆ ಗೊಂದಲಕ್ಕೆ ತೆರೆ| ಕೊನೆ ಗಳಿಗೆಯಲ್ಲಿ ಬಿಜೆಪಿಯಲ್ಲಿ ಎಲ್ಲವೂ ಸುಸೂತ್ರ..!| ಪದ್ಮನಾಭರೆಡ್ಡಿ ನಾಮಪತ್ರ ವಾಪಸ್| ಬಿಜೆಪಿ ನಾಯಕರ ಸೂಚನೆ ಮೇರೆಗೆ ರೆಡ್ಡಿ ಕಣದಿಂದ ಹಿಂದಕ್ಕೆ| ಉಪಮೇಯರ್ ಸ್ಥಾನದಿಂದ ಮೋಹನ್ ರಾಜ್, ಮಹಾಲಕ್ಷ್ಮಿ ವಾಪಸ್

ಬೆಂಗಳೂರು[ಅ.01]: ಬಿಬಿಎಂಪಿ ಚುನಾವಣಾ ಕಣವೂ ತೀವ್ರ ಕುತೂಹಲ ಕೆರಳಿಸಿದ್ದು, ಬೆಂಗಳೂರಿನ ಮೇಯರ್ ಹಾಗೂ ಉಪ ಮೇಯರ್ ಯಾರಾಗ್ತಾರೆ ಎಂಬ ಪ್ರಶ್ನೆ ಎದುರಾಗಿತ್ತು. ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಉಂಟಾದ ಗೊಂದಲದಿಂದ ಪ್ರತಿಪಕ್ಷಗಳು ಲಾಭ ಪಡೆಯುವ ಸಾಧ್ಯತೆಗಳಿದ್ದವು. ಆದರೀಗ ಇದಕ್ಕೆ ಅವಕಾಶ ಮಾಡಿಕೊಡದ ಕಮಲ ಪಾಳಯ ಆಕಾಂಕ್ಷಿಗಳನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾಗಿದ್ದು, ಕೊನೆ ಗಳಿಗೆಯಲ್ಲಿ ಎಲ್ಲವನ್ನೂ ಸರಿಪಡಿಸಿದೆ.

ಹೌದು ಬಿಜೆಪಿಯಿಂದ ಮೋಹನ್ ರಾಜ್, ಮಹಾಲಕ್ಷ್ಮಿ, ಗುರುಮೂರ್ತಿ ರೆಡ್ಡಿ ಹಾಗೂ ಪದ್ಮನಾಭರೆಡ್ಡಿ ಉಪ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಇದರಿಂದಾಗಿ ಪಕ್ಷ ಸದಸ್ಯರ ಮತಗಳು ವಿಭಜನೆಯಾಗುವ ಸಾಧ್ಯತೆಗಳಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯ ಉಪ ಮೇಯರ್ ಅಭ್ಯರ್ಥಿಗೆ ಲಾಭವಾಗುತ್ತಿತ್ತು. 

ಆದರೀಗ ಬಿಜೆಪಿ ನಾಯಕರು ತಮ್ಮ ಪಕ್ಷದ ಆಕಾಂಕ್ಷಿಗಳ ಮನವೊಲಿಸಲು ಯಶಸ್ವಿಯಾಗಿದ್ದಾರೆ. ಮೋಹನ್ ರಾಜ್, ಮಹಾಲಕ್ಷ್ಮಿ ಹಾಗೂ ಪದ್ಮನಾಭರೆಡ್ಡಿ ನಾಮಪತ್ರ ಹಿಂಪಡೆದಿದ್ದು, ಉಪಮೇಯರ್ ಆಗಿ ಗುರುಮೂರ್ತಿ ರೆಡ್ಡಿ ಆಯ್ಕೆ ಖಚಿತವಾಗಿದೆ. 

ಇತ್ತ ಮೇಯರ್ ಆಗಿ ಬಿಜೆಪಿ ಗೌತಮ್ ಕುಮಾರ್ ರನ್ನು ಆಯ್ಕೆ ಮಾಡಿದ್ದಕ್ಕೆ ಕಾರ್ಪೋರೇಟರ್ ಉಮೇಶ್ ಶೆಟ್ಟಿ ಸಮಾಧಾನ ವ್ಯಕ್ತಪಡಿಸಿದ್ದರಾದರೂ, ಅವರನ್ನು ಓಲೈಸಲು ಹಿರಿಯ ನಾಯಕರು ಯಶಸ್ವಿಯಾಗಿದ್ದಾಋಎ. ಈ ಮೂಲಕ  ಗೌತಮ್ ಕುಮಾರ್ ಮೇಯರ್ ಆಗುವುದು ಖಚಿತವಾಗಿದೆ.

PREV
click me!

Recommended Stories

ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ