ರೋಣದಲ್ಲಿ ದೃಢಪಟ್ಟ ಮಹಾಮಾರಿ ಕೊರೋನಾ: ಹುಬ್ಬಳ್ಳಿಯಲ್ಲಿ ಆತಂಕ

By Kannadaprabha News  |  First Published May 4, 2020, 7:06 AM IST

ರೋಣದಲ್ಲಿ ಕೊರೋನಾ ಪ್ರಕರಣ ದೃಢಪಟ್ಟಿರುವುದರಿಂದ ಹುಬ್ಬಳ್ಳಿಯಲ್ಲಿ ಹೆಚ್ಚಿದ ಆತಂಕ| ಗದಗ ಜಿಲ್ಲೆಯ ರೋಣ ತಾಲೂಕಿನ ಕೃಷ್ಣಾಪುರ ಗ್ರಾಮದ ಗರ್ಭಿಣಿಯೊಬ್ಬರಿಗೆ ಕೊರೋನಾ ದೃಢ| ಎಸ್‌ಡಿಎಂ ಹಾಗೂ ಕಿಮ್ಸ್‌ನಲ್ಲಿ ಈ ಮಹಿಳೆಗೆ ಸಂಪರ್ಕ ಬಂದವರು ಯಾರು ಎಂಬ ಹುಡುಕಾಟದಲ್ಲಿ ತೊಡಗಿದ ಜಿಲ್ಲಾಡಳಿತ|
 


ಹುಬ್ಬಳ್ಳಿ(ಮೇ.04): ಈಗಾಗಲೇ ಮುಲ್ಲಾನ ಓಣಿ, ಆಜಾದಕಾಲನಿ, ಶಾಂತಿನಗರಗಳಲ್ಲಿ ಕೊರೋನಾ ದೃಢಪಟ್ಟು ಕಂಗೆಟ್ಟಿರುವ ಹುಬ್ಬಳ್ಳಿಯಲ್ಲೀಗ, ರೋಣದಲ್ಲಿ ಕೊರೋನಾ ಪ್ರಕರಣ ದೃಢಪಟ್ಟಿರುವುದು ಆತಂಕವನ್ನುಂಟು ಮಾಡಿದೆ. 

ಗದಗ ಜಿಲ್ಲೆಯ ರೋಣ ತಾಲೂಕಿನ ಕೃಷ್ಣಾಪುರ ಗ್ರಾಮದ ಗರ್ಭಿಣಿಯೊಬ್ಬರಿಗೆ ಕೊರೋನಾ ದೃಢಪಟ್ಟಿದೆ. ಗರ್ಭಿಣಿಗೆ ಆರೋಗ್ಯದಲ್ಲಿ ಏರು ಪೇರು ಆಗಿದ್ದರಿಂದ ಮೊದಲಿಗೆ ಇಲ್ಲಿನ ಎಸ್‌ಡಿಎಂಗೆ ಕರೆತರಲಾಗಿತ್ತು. ಅಲ್ಲಿಂದ ಕಿಮ್ಸ್‌ಗೆ ಕರೆದುಕೊಂಡು ಪರೀಕ್ಷೆಗೊಳಪಡಿಸಿದಾಗ ಕೊರೋನಾ ದೃಢಪಟ್ಟಿದೆ. 

Tap to resize

Latest Videos

ರಂಜಾನ್‌ ಮಾರುಕಟ್ಟೆಗೆ ಕೊರೋನಾ ಗುನ್ನ: ಬಿಕೋ ಎನ್ನುತ್ತಿದೆ ಮಾರ್ಕೆಟ್‌..!

ಹೀಗಾಗಿ ಎಸ್‌ಡಿಎಂ ಆಸ್ಪತ್ರೆಯಲ್ಲಿ ಈಕೆಗೆ ಚಿಕಿತ್ಸೆ ನೀಡಿದ ವೈದ್ಯರಿಗೆ, ದಾದಿಯರಲ್ಲಿ ಆತಂಕವನ್ನುಂಟು ಮಾಡಿದೆ ಎಂದು ಹೇಳಲಾಗಿದೆ. ಈ ನಿಟ್ಟಿನಲ್ಲಿ ಎಸ್‌ಡಿಎಂ ಹಾಗೂ ಕಿಮ್ಸ್‌ನಲ್ಲಿ ಈ ಮಹಿಳೆಗೆ ಸಂಪರ್ಕ ಬಂದವರು ಯಾರು ಎಂಬ ಹುಡುಕಾಟದಲ್ಲಿ ತೊಡಗಿದೆ.
 

click me!