ಶಾಕಿಂಗ್: ದಾವಣಗೆರೆ ಜಿಲ್ಲೆಯಲ್ಲಿ ಭಾನುವಾರ ಒಂದೇ ದಿನ 21 ಕೊರೋನಾ ಪತ್ತೆ

By Suvarna News  |  First Published May 3, 2020, 7:01 PM IST

ಮಾಹಾಮಾರಿ ಕೊರೋನಾ ವೈರಸ್ ದಾಣಗೆರೆಯನ್ನು ಅಟ್ಟಾಡಿಸುತ್ತಿದೆ. ಗ್ರೀನ್ ಝೋನ್‌ನಲ್ಲಿ ಬೆಣ್ಣೆ ನಗರಿಯಲ್ಲಿ ಡೆಡ್ಲಿ ವೈರಸ್ ವಕ್ಕರಿಸಿಕೊಂಡಿದ್ದು, ಸಿಕ್ಕ-ಸಿಕ್ಕವರನ್ನು ಆವರಿಸುತ್ತಿದೆ.


ದಾವಣೆಗೆರೆ, (ಮೇ.03): ವಾರದ ಹಿಂದಷ್ಟೇ ಹಸಿರು ವಲಯದಲ್ಲಿದ್ದ ದಾವಣಗೆರೆ ಜಿಲ್ಲೆಯಲ್ಲಿ ಇಂದು (ಭಾನುವಾರ) ಒಂದೇ ದಿನ ಬರೊಬ್ಬರಿ 21 ಕೊರೋನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ.

ಶುಕ್ರವಾರ 94, ಶನಿವಾರ 72, ಭಾನುವಾರ 164 ಒಟ್ಟಾರೇ 330 ಜನರ ಮಾದರಿಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಈ ಪೈಕಿ  37 ಜನರ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, 21 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಕಂಡುಬಂದಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದರು.

Tap to resize

Latest Videos

ಕಾರ್ಮಿಕರನ್ನು ಬಿಟ್ಟು ವಾಪಸ್‌ ಆಗುತ್ತಿದ್ದ ಬಸ್ ಅಪಘಾತ: ಮಾನವೀಯತೆ ಮೆರೆದ ಡಿಸಿಎಂ

ನಿನ್ನೆ (ಶನಿವಾರ) 10 ಪ್ರಕರಣಗಳು ಕಂಡುಬಂದಿದ್ದು, ಭಾನುವಾರ  21 ಪ್ರಕರಣಗಳು ಪತ್ತೆಯಾಗುವುದರೊಂದಿಗೆ ಜಿಲ್ಲೆಯಲ್ಲಿ ಒಟ್ಟಾರೇ ಸೋಂಕಿತರ ಸಂಖ್ಯೆ 31ಕ್ಕೆ ಏರಿಕೆ ಆಗಿದೆ. 

ಕಳೆದ ವಾರವಷ್ಟೇ ಗ್ರೀನ್‌ ಝೋನ್‌ನಲ್ಲಿ ಬೆಣ್ಣೆ ನಗರಿ, ಇದೀಗ ಕೆಂಪು ವಲಯದತ್ತ ಸಾಗುತ್ತಿದೆ.

click me!