ಹುಬ್ಬಳ್ಳಿ: ಕೊರೋನಾ ಸೋಂಕಿತ ವೃದ್ಧೆ ರಕ್ಷಿಸಿದ ಪೊಲೀಸರಿಗೂ ಆತಂಕ

Kannadaprabha News   | Asianet News
Published : Jun 15, 2020, 07:26 AM IST
ಹುಬ್ಬಳ್ಳಿ: ಕೊರೋನಾ ಸೋಂಕಿತ ವೃದ್ಧೆ ರಕ್ಷಿಸಿದ ಪೊಲೀಸರಿಗೂ ಆತಂಕ

ಸಾರಾಂಶ

ವೃದ್ಧೆಗೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮಹಿಳಾ ಪಿಎಸ್‌ಐ, ಎಎಸ್‌ಐಗೆ ಹೋಂ ಕ್ವಾರಂಟೈನ್‌| ಮೇ 28ರಂದು ವೀರಾಪುರ ಓಣಿಯಲ್ಲಿ ಓಡಾ​ಡು​ತ್ತಿದ್ದ ದಾವ​ಣ​ಗೆರೆ ಮೂಲದ ವೃದ್ಧೆಯನ್ನು ಪೊಲೀ​ಸರು ರಕ್ಷಿಸಿ ಆಟೋರಿಕ್ಷಾ ಮೂಲಕ ಸ್ಥಳೀಯ ಬಿಸಿಎಂ ಹಾಸ್ಟೆಲ್‌ನಲ್ಲಿ ಆಶ್ರಯ ಕಲ್ಪಿಸಿದ್ದರು|

ಹುಬ್ಬಳ್ಳಿ(ಜೂ.15): ರಸ್ತೆಯಲ್ಲಿ ಅನಾಥೆಯಂತೆ ಓಡಾಡುತ್ತಿದ್ದ ವೃದ್ಧೆಯೊಬ್ಬರನ್ನು ಕರೆತಂದು ಬಿಸಿಎಂ ಹಾಸ್ಟೆಲ್‌ನಲ್ಲಿ ರಕ್ಷಣೆ ಒದಗಿಸಿದ್ದ ಹಾವೇರಿಯ ಪೊಲೀಸರಿಗೆ ಇದೀಗ ಆತಂಕ ಶುರುವಾಗಿದೆ. ಈ ವೃದ್ಧೆಗೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮಹಿಳಾ ಪಿಎಸ್‌ಐ, ಎಎಸ್‌ಐ ಅನ್ನು ಹೋಂ ಕ್ವಾರಂಟೈನ್‌ಗೊಳಪಡಿಸಲಾಗಿದೆ. ಮೇ 28ರಂದು ವೀರಾಪುರ ಓಣಿಯಲ್ಲಿ ಓಡಾ​ಡು​ತ್ತಿದ್ದ ದಾವ​ಣ​ಗೆರೆ ಮೂಲದ ವೃದ್ಧೆಯನ್ನು ಪೊಲೀ​ಸರು ರಕ್ಷಿಸಿ ಆಟೋರಿಕ್ಷಾ ಮೂಲಕ ಸ್ಥಳೀಯ ಬಿಸಿಎಂ ಹಾಸ್ಟೆಲ್‌ನಲ್ಲಿ ಆಶ್ರಯ ಕಲ್ಪಿಸಿದ್ದರು.

ಈಕೆಗೆ ಮೊದಲ ಬಾರಿ ಪರೀಕ್ಷೆ ಮಾಡಿದಾಗ ನೆಗೆಟಿವ್‌ ವರದಿ ಬಂದಿತ್ತು. ಆದರೆ, ಜೂ.10ರಂದು 2ನೇ ಬಾರಿ ಪರೀಕ್ಷೆ ಮಾಡಿಸಿದಾಗ ಕೋವಿಡ್‌-19 ದೃಢಪಟ್ಟಿದೆ.

ಧಾರವಾಡ: ಒಂದೇ ದಿನ 20 ಕೇಸ್‌, ಗ್ರಾಮಾಂತರ ಪ್ರದೇಶಕ್ಕೂ ವ್ಯಾಪಕವಾಗಿ ಹಬ್ಬುತ್ತಿದೆ ಕೊರೋನಾ

ವೃದ್ಧೆಗೆ ಸೋಂಕು ಖಚಿತವಾಗುತ್ತಿದ್ದಂತೆ ಬೆಂಡಿಗೇರಿ ಠಾಣೆಯನ್ನು ಸಂಪೂರ್ಣ ಸ್ಯಾನಿಟೈಸ್‌ ಮಾಡಲಾಗಿದೆ. ಅಲ್ಲದೆ ಸ್ವ್ಯಾಬ್‌ ಟೆಸ್ಟ್‌, ಮೊಬೈಲ್‌ ವೆಹಿಕಲ್‌ ತರಿಸಿ ಶನಿವಾರ 33 ಹಾಗೂ ಭಾನುವಾರ 2 ಸಿಬ್ಬಂದಿಯನ್ನು ತಪಾಸಣೆಗೆ ಒಳಪಡಿಸಿದ್ದಾರೆ. ವರದಿ ಬರುವವರೆಗೆ ಮಹಿಳಾ ಪಿಎಸ್‌ಐ ಮತ್ತು ಎಎಸ್‌ಐ ಅವರನ್ನು ಹೋಂ ಕ್ವಾರಂಟೈನ್‌ ಆಗುವಂತೆ ತಿಳಿಸಿದ್ದಾರೆ.
 

PREV
click me!

Recommended Stories

ದೂರವಾದ ಪ್ರೇಮಿಗೆ ಪ್ರೇಯಸಿಯ ಭಯಾನಕ ಗಿಫ್ಟ್! ಜಿಮ್ ಟ್ರೈನರ್‌ಗೆ ಚಾಕು ಇರಿತ!
ಯೋಗೇಶ್ ಗೌಡ ಹತ್ಯೆ ಪ್ರಕರಣ, ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಜಾಮೀನು, 2 ತಿಂಗಳಲ್ಲಿ ಟ್ರಯಲ್ ಮುಗಿಸುವಂತೆ ಸುಪ್ರೀಂ ಸೂಚನೆ