ಚಿಕ್ಕಮಗಳೂರು: ರಸ್ತೆಗೆ ಬಂದ 25ಕ್ಕೂ ಹೆಚ್ಚು ಆನೆಗಳ ಹಿಂಡು, ಜನರಲ್ಲಿ ಆತಂಕ

Published : Oct 28, 2023, 11:52 AM IST
ಚಿಕ್ಕಮಗಳೂರು: ರಸ್ತೆಗೆ ಬಂದ 25ಕ್ಕೂ ಹೆಚ್ಚು ಆನೆಗಳ ಹಿಂಡು, ಜನರಲ್ಲಿ ಆತಂಕ

ಸಾರಾಂಶ

ಬೆಳಗೊಡು ಭಾಗದಲ್ಲಿ ಇತ್ತೀಚೆಗೆ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದೆ. ಗುಂಪು ಗುಂಪಾಗಿ ತೆರಳಿ ತೋಟಗಳಿಗೆ ಹಾವಳಿಯಿಡುತ್ತಿದ್ದು, ಅರಣ್ಯ ಇಲಾಖೆ ರೈತರ ಸಮಸ್ಯೆಗಳ ಬಗ್ಗೆ ಕಿವಿಗೊಡುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೇಲೂರು(ಅ.28):  ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಬೆಳಗೊಡು ಮಾರ್ಗದ ಮುಖ್ಯರಸ್ತೆಯಲ್ಲಿ ಗುರುವಾರ ಸಂಜೆ 25ಕ್ಕೂ ಹೆಚ್ಚು ಕಾಡಾನೆಗಳು ಮುಖ್ಯರಸ್ತೆಯಲ್ಲೇ ಸಾಗಿದವು. ಇದನ್ನು ಕಂಡ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ಬೆಳಗೊಡು ಭಾಗದಲ್ಲಿ ಇತ್ತೀಚೆಗೆ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದೆ. ಗುಂಪು ಗುಂಪಾಗಿ ತೆರಳಿ ತೋಟಗಳಿಗೆ ಹಾವಳಿಯಿಡುತ್ತಿದ್ದು, ಅರಣ್ಯ ಇಲಾಖೆ ರೈತರ ಸಮಸ್ಯೆಗಳ ಬಗ್ಗೆ ಕಿವಿಗೊಡುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಐಟಿ ದಾಳಿ ಚರ್ಚೆ ತಪ್ಪಿಸಲು ಹುಲಿಯುಗುರು ಸದಾರಮೆ ನಾಟಕ: ಸಿ.ಟಿ.ರವಿ

ಈ ಆನೆಗಳನ್ನು ಚಿಕ್ಕಮಗಳೂರು ಭಾಗದ ಮುತ್ತೋಡಿ ಫಾರೆಸ್ಟ್ ಭಾಗಕ್ಕೆ ಓಡಿಸಿದರೆ ರೈತರು ಅಲ್ಪ ನಿಟ್ಟುಸಿರುಬಿಡಬಹುದು. ನಿತ್ಯ ಕಾಡಾನೆಗಳ ಭಯದಿಂದ ಇತ್ತ ಕಾಫಿ ತೋಟಗಳ ಕೆಲಸಕ್ಕೆ ಕೂಲಿ ಕಾರ್ಮಿಕರು ಬಾರದೆ ತೋಟಗಳು ಸಂಪೂರ್ಣ ಹಾಳಾಗುತ್ತಿವೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಇದೇ ರೀತಿ ಮುಂದುವರಿದರೆ ಬಿಕ್ಕೋಡು ಬೆಳಗೋಡು, ಲಕ್ಕುಂದ ಅರೇಹಳ್ಳಿ ಭಾಗದ ಸುತ್ತಮುತ್ತಲಿನ ರೈತರು ಇಲಾಖೆ ವಿರುದ್ಧ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

PREV
Read more Articles on
click me!

Recommended Stories

ಇಂದು 20,000 ರೈತರ ಜತೆ ಬಿಜೆಪಿ ಸುವರ್ಣಸೌಧ ಮುತ್ತಿಗೆ
ಡ್ರಗ್‌ ಪೆಡ್ಲರ್‌ಗಳಿಗೆ ಬೆಂಗಳೂರೇ ದೊಡ್ಡ ಟಾರ್ಗೆಟ್‌: ಚಾಕೋಲೆಟ್‌, ಕಾಫಿ ಪುಡಿ ಹೆಸರಲ್ಲಿ ಡ್ರಗ್ಸ್‌ ಸಾಗಾಟ