ಆಗ ಪಬ್​ ಗಲಾಟೆ, ಈಗ ಪಕ್ಕದ್ಮನೆ ಜೊತೆ ಕಿರಿಕ್​ - ಯುಟ್ಯೂಬರ್​ 'ಅಮುಕು ಡುಮುಕು' ಮಂಜು ವಿರುದ್ಧ ಇನ್ನೊಂದು FIR

Published : Nov 24, 2026, 09:07 PM IST
Amukudu Damuku Manjunath

ಸಾರಾಂಶ

ಬಿಗ್‌ಬಾಸ್ ಅಗ್ನಿಪರೀಕ್ಷೆಯಲ್ಲಿ ವಿನಯ್ ಗೌಡರಿಂದ ಬೈಸಿಕೊಂಡಿದ್ದ ಯೂಟ್ಯೂಬರ್ ಅಮುಕು ಡಮುಕು ಮಂಜು ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ನೆರೆಹೊರೆಯವರ ಜೊತೆಗಿನ ಜಗಳದ ಹಿನ್ನೆಲೆಯಲ್ಲಿ ಅವರ ವಿರುದ್ಧ ಯಶವಂತಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಬೆಂಗಳೂರು: ಬಿಗ್​ಬಾಸ್​ ಅಗ್ನಿಪರೀಕ್ಷೆಗೆ ಹೋಗಿ ಜಡ್ಜ್​ ವಿನಯ್ ಗೌಡ ಅವರಿಂದ ಬೈಗುಳ ಹೇಳಿಸಿಕೊಂಡಿದ್ದ ಯುಟ್ಯೂಬರ್​ ಅಮುಕು ಡಮುಕು ಮಂಜುನಾಥ್​ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಇವರು ಪಬ್ ಗಲಾಟೆಯಲ್ಲಿ ಸಿಲುಕಿಕೊಂಡಿದ್ದರು. ಆಗಲೂ ಅವರ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಅವರ ವಿರುದ್ಧ ಮತ್ತೊಂದು ಎಫ್​ಐಆರ್​ ದಾಖಲಾಗಿದೆ. ಪಕ್ಕದ ಮನೆಯ ನಿವಾಸಿ ವಿಕ್ರಂ ಜೊತೆ ತಮ್ಮ ಸಿದ್ದನ ವಿಚಾರವಾಗಿ ಜಗಳ ನಡೆದು, ಕೈಕೈ ಮಿಲಾಯಿಸಿದ್ದಾರೆ ಎನ್ನಲಾಗಿದೆ. ಇಬ್ಬರೂ ಪರಸ್ಪರ ದೂರು ನೀಡಿದ್ದು, ಯಶವಂತಪುರ ಪೊಲೀಸರು ಮಂಜುನಾಥ್ ವಿರುದ್ಧ ಸೇರಿದಂತೆ ಎರಡೂ ಕಡೆಯವರ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಪಕ್ಕದ ಮನೆಯವರ ಜೊತೆ ಗಲಾಟೆ ಮಾಡಿದ್ದು ಈ ವಿಚಾರವಾಗಿ ವಿಕ್ರಂ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಅಮುಕು ಡುಮುಕು ಮಂಜುನಾಥ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಬಿಗ್​ಬಾಸ್​ನಲ್ಲಿ ಆಗಿದ್ದೇನು?

ಇನ್ನು ಬಿಗ್​ಬಾಸ್ ಅಗ್ನಿಪರೀಕ್ಷೆಯ ಕುರಿತು ಹೇಳುವುದಾದರೆ, ʻಅಮುಕು ಡುಮುಕುʼ ಮಂಜು ಕೂಡ ಲಕ್ಷಾಂತರ ಸ್ಪರ್ಧಿಗಳ ಪೈಕಿ ಸೆಲೆಕ್ಟ್​ ಆಗಿದ್ದ 60 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಬಿಗ್​ಬಾಸ್​​ ಮನೆಯೊಳಕ್ಕೆ ಕಾಮನ್​ ಮ್ಯಾನ್​ ಕಳುಹಿಸುವುದಕ್ಕಾಗಿ ಈ ಬಾರಿ ಅಗ್ನಿ ಪರೀಕ್ಷೆ ಎನ್ನುವ ಥೀಮ್​ ಮಾಡಿತ್ತು ವಾಹಿನಿ. ಇದರ ಸ್ಪರ್ಧೆಯ ವೇಳೆ, ನಿರೂಪಕ ನಿರಂಜನ್‌ ಅವರು, ʻಸಂಗೀತಾ ಅವರು ನಿಮ್ಮನ್ನ ಕಂಡರೆ ಇಷ್ಟ ಅಂತ ಹೇಳ್ಬೇಕು..ʼ ಎಂದಿದ್ದರು. ಆಗ ಮಂಜು, “ಇಲ್ಲಿ ನಾನು ಯಾರನ್ನೂ ಇಂಪ್ರೆಸ್‌ ಮಾಡೋಕೆ ಬಂದಿಲ್ಲ. ನಾನು ಹೀಗೆ ಇರೋದು, ಹೀಗೆ ಹೋಗೋದು” ಎಂದು ಏರು ಧ್ವನಿಯಲ್ಲಿ ಮಾತನಾಡಿದ್ದರು.

ಇದಕ್ಕೆ ಕೋಪಗೊಂಡ ವಿನಯ್‌ ಗೌಡ, “ಆಗಲ್ಲ ಅಂದರೆ, ಹೋಗ್ತಾ ಇರು” ಎಂದಿದ್ದರ. ಆ ಕ್ಷಣದಲ್ಲೇ ಸ್ಟೇಜ್‌ನಿಂದ ಹೊರನಡೆದಿದ್ದಾರೆ ಅಮುಕು ಡುಮುಕು ಮಂಜು. ಇದಾದ ಬಳಿಕ ಇದೀಗ ಎರಡು ಬಾರಿ ವಿವಾದದಲ್ಲಿ ಸಿಲುಕಿ ಎಫ್​ಐಆರ್​ ದಾಖಲು ಮಾಡಿಕೊಂಡಿದ್ದಾರೆ.

PREV
Read more Articles on
click me!

Recommended Stories

ಭತ್ತ ಕೊಯ್ಯುವ ಯಂತ್ರದ ಸಮೇತ ಕಾಲುವೆಗೆ ಬಿದ್ದ ಲಾರಿ; ಅದನ್ನ ನೋಡಲು ಬಂದ ವ್ಯಕ್ತಿಯೂ ಬಿದ್ದು ನೀರು ಪಾಲು!
ಆಶಾ ಕಾರ್ಯಕರ್ತೆಯರು ಕೇಳಿದಾಗೆಲ್ಲಾ ಕಂಠಿಹಾರ ಕೊಡೋಕಾಯ್ತದಾ? ಸಚಿವ ನರೇಂದ್ರ ಸ್ವಾಮಿ ಹಗುರ ಹೇಳಿಕೆ