ಆಶಾ ಕಾರ್ಯಕರ್ತೆಯರು ಕೇಳಿದಾಗೆಲ್ಲಾ ಕಂಠಿಹಾರ ಕೊಡೋಕಾಯ್ತದಾ? ಸಚಿವ ನರೇಂದ್ರ ಸ್ವಾಮಿ ಹಗುರ ಹೇಳಿಕೆ

Published : Nov 24, 2026, 07:31 PM IST
Minister Narendra swamy on Asha Workers protest

ಸಾರಾಂಶ

ಮೈಸೂರಿನಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಕುರಿತು ಕೃಷಿ ಸಚಿವ ನರೇಂದ್ರ ಸ್ವಾಮಿ ನೀಡಿದ ಹಗುರವಾದ ಹೇಳಿಕೆ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಸಚಿವ ನರೇಂದ್ರ ಸ್ವಾಮಿ ಹೇಳಿದ್ದೇನು ಅನ್ನೋ ವಿವರ ಸ್ಟೋರಿಯಲ್ಲಿದೆ.

ಮೈಸೂರು: ಆಶಾ ಕಾರ್ಯಕರ್ತೆಯರು ಕೇಳಿದಾಗಲೆಲ್ಲ 'ಕಂಠಿ ಹಾರ ಕೊಡಲು ಸಾಧ್ಯನಾ' ಎಂದು ಕೃಷಿ ಸಚಿವ ನರೇಂದ್ರ ಸ್ವಾಮಿ ಹಗುರವಾಗಿ ಮಾತನ್ನಾಡಿದ್ದಾರೆ. ಹಗಲು ರಾತ್ರಿ ಎನ್ನದೇ ಚಳಿ, ಗಾಳಿಯನ್ನೂ ಲೆಕ್ಕಿಸದೇ ತಮ್ಮ ಬೇಡಿಕೆ ಈಡೇಸುವಂತೆ ರಾಜ್ಯದ ಆರೋಗ್ಯ ಸೇವಕಿಯರು ಪ್ರತಿಭಟಿಸುತ್ತಿದ್ದಾರೆ. ಕಳೆದ ಎರಡು ವಾರಗಳಿಂದ ಮನೆ, ಕುಟುಂಬವನ್ನ ಮರೆತು ಪ್ರತಿಭಟಿಸುತ್ತಿರುವ ಆಶಾ ಕಾರ್ಯಕರ್ತೆಯರ ಬಗ್ಗೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರೊಬ್ಬರು ಆಡಿರುವ ಮಾತುಗಳು ತೀವ್ರ ವಿರೋಧಕ್ಕೆ ಕಾರಣವಾಗಿದೆ.

ಆಶಾ ಕಾರ್ಯಕರ್ತೆಯರ ಪ್ರತಿಭಟನೆ ವಿಚಾರವಾಗಿ ಮೈಸೂರಿನಲ್ಲಿ ಮಾತನ್ನಾಡಿದ ನರೇಂದ್ರ ಸ್ವಾಮಿ.. ಅವರು (ಆಶಾ ಕಾರ್ಯಕರ್ತೆಯರು) ಕೇಳಿದಾಗಲೆಲ್ಲ ಕೊಡಲು ಸಾಧ್ಯವಿಲ್ಲ. ಕೇಳ್ ಕೇಳಿದಾಗೆಲ್ಲ ಕಂಠಿ ಹಾರ ತೆಗೆದು ಕೊಡುವಷ್ಟು ಸದೃಢವಾಗಿ ಯಾರೂ ಇರಲ್ಲ ಎಂದಿದ್ದಾರೆ. ಆಶಾ ಕಾರ್ಯಕರ್ತೆಯರು ಕಳೆದ ಎರಡು ವಾರಗಳಿಂದ ಪ್ರತಿಭಟನೆ ನಡೆಸ್ತಿದ್ದಾರೆ. ಸರ್ಕಾರದಿಂದ ಈ ವರ್ಷವಾದರೂ ತಮ್ಮ ಬೇಡಿಕೆ ಈಡೇರುತ್ತಾ ಎಂಬ ಆಸೆಯಲ್ಲಿ ಆಶಾ ಕಾರ್ಯಕರ್ತೆಯರು ಇದ್ದಾರೆ. ಹೀಗಿದ್ದಾಗ ಸರ್ಕಾರದ ಸಚಿವರೊಬ್ಬರು ಆಡಿರುವ ಮಾತುಗಳು ಭಾರೀ ಚರ್ಚೆಗೆ ಕಾರಣವಾಗಿದೆ.

ನರೇಂದ್ರ ಸ್ವಾಮಿ ಹೇಳಿಕೆಗೆ ಭಾರೀ ವಿರೋಧ

ಜವಾಬ್ದಾರಿಯುತ ಸ್ಥಾನದಲ್ಲಿದ್ದ ಸರ್ಕಾರದ ಸಚಿವರೊಬ್ಬರ ಉದ್ದಟತನದ ಹೇಳಿಕೆ ಭಾರೀ ವಿರೋಧಕ್ಕೆ ಚರ್ಚೆ ಆಗ್ತಿದೆ. ಆಶಾ ಕಾರ್ಯಕರ್ತೆಯರ ನೋವುಗಳನ್ನ ಆಲಿಸಿ ಅವರ ಸಮಸ್ಯೆಗೆ ಪರಿಹಾರ ನೀಡಬೇಕಾಗಿದ್ದ ಸಚಿವರೇ ಇಂಥ ಹೇಳಿಕೆ ನೀಡಿರೋದು ಎಷ್ಟು ಸರಿ? ಸಚಿವರುಗಳು ಜಾವಾಬ್ದಾರಿಯಿಂದ ಮಾತನ್ನಾಡಬೇಕಲ್ವವೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಯಾಕೆ?

ಬೆಂಗಳೂರಿನ ಫ್ರಿಡಂ ಪಾರ್ಕ್‌ನಲ್ಲಿ ಆಶಾ ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಧರಣಿ ನಡೆಸ್ತಿದ್ದಾರೆ. ಅವರ ಪ್ರತಿಭಟನೆಯು 2ನೇ ವಾರಕ್ಕೆ ಕಾಲಿಟ್ಟಿದೆ. ಹಗಲು-ರಾತ್ರಿ, ಚಳಿ-ಗಾಳಿ, ಮಳೆ ಯಾವುದನ್ನೂ ಲೆಕ್ಕಿಸದೇ ಪ್ರತಿಭಟನೆ ಮಾಡುತ್ತಿದ್ದಾರೆ. ಸರ್ಕಾರ ನಮಗೆ ನೀಡುತ್ತಿರುವ ಮಾಸಿಕ ಗೌರವಧನ ಸಾಕಾಗುತ್ತಿಲ್ಲ. ಕನಿಷ್ಟ ₹15,000ಕ್ಕೆ ಹೆಚ್ಚಿಸಬೇಕು ಅನ್ನೋದು ಆಶಾ ಕಾರ್ಯಕರ್ತೆಯರ ಆಗ್ರಹ ಆಗಿದೆ. ಕಳೆದ ಎರಡು ವಾರಗಳಿಂದ ನಿರಂತರ ಪ್ರತಿಭಟನೆ ಹಿನ್ನೆಲೆಯಲ್ಲಿ 20ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಅಸ್ವಸ್ಥಗೊಂಡಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ರಮ್ಯಾ ಭೇಟಿ

ಇನ್ನು ಇವತ್ತು ಆಶಾ ಕಾರ್ಯಕರ್ತೆಯರ ಪ್ರತಿಭಟನಾ ಸ್ಥಳಕ್ಕೆ ನಟಿ ರಮ್ಯಾ ಅವರು ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಆಶಾ ಕಾರ್ಯಕರ್ತೆಯರು ತಮ್ಮ ನೋವುಗಳನ್ನ ತೋಡಿಕೊಂಡರು. ಇನ್ನು ರಮ್ಯಾ ಸ್ಥಳಕ್ಕೆ ಬರುತ್ತಿದ್ದಂತೆಯೇ ಪ್ರತಿಭಟನೆಯ ಕಾವು ಜೋರಾಗಿತ್ತು. ಕೇವಲ ರಮ್ಯಾ ಮಾತ್ರವಲ್ಲ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ. ಇತ್ತೀಚೆಗೆ ನಟಿ ಕಾರುಣ್ಯ ರಾಮ್ ಕೂಡ ಭೇಟಿ ನೀಡಿದ್ದರು. ಇದೀಗ ರಮ್ಯಾ ಅವರು ಭೇಟಿ ನೀಡಿದ್ದಾರೆ.

PREV
Read more Articles on
click me!

Recommended Stories

ಏಷ್ಯಾನೆಟ್ ಸುವರ್ಣನ್ಯೂಸ್ ಡಿಜಿಟಲ್‌ನ ರೋಜಾಗೆ ಪ್ರತಿಷ್ಠಿತ ಕರ್ನಾಟಕ ರಾಜ್ಯ ಎಕ್ಸಲೆನ್ಸ್ 2026 ಪ್ರಶಸ್ತಿ
ಚಳಿ, ಗಾಳಿ, ಮಳೆಗೂ ಜಗ್ಗದ ಆಶಾ ಕಾರ್ಯಕರ್ತೆಯರಿಗೆ ಆಸರೆಯಾಗಲು ಬಂದ ಋತುತಾರೆ ನಟಿ ರಮ್ಯಾ!