ಅಣ್ಣಾಮಲೈ ಮರೆಯದ ಮಲೆನಾಡು ನಂಟು!

By Web Desk  |  First Published May 29, 2019, 12:08 PM IST

ಅಣ್ಣಾಮಲೈ ಮರೆಯದ ಮಲೆನಾಡು ನಂಟು| ಕರ್ತವ್ಯದಿಂದಲೇ ಜನಪ್ರಿಯತೆ ಗಳಿಸಿ ಡಿಸಿಪಿ ಹುದ್ದೆಗೇರಿದ್ದರು| ಡಿಸಿಪಿ ಹುದ್ದೆಗೆ ರಾಜಿನಾಮೆ ನೀಡಿದ್ದಕ್ಕೆ ಮಲೆನಾಡಿಗರಲ್ಲಿ ಬೇಸರ


ಚಿಕ್ಕಮಗಳೂರು[ಮೇ.29]: ಕರ್ನಾಟಕದ ಸಿಂಗಂ, ಖಡಕ್‌ ಪೊಲೀಸ್‌ ಅಧಿಕಾರಿ ಕೆ.ಅಣ್ಣಾಮಲೈ ಅವರು ಡಿಸಿಪಿ ಹುದ್ದೆಗೆ ಮಂಗಳವಾರ ರಾಜಿನಾಮೆ ನೀಡಿದ್ದಾರೆ.

ಅಣ್ಣಾಮಲೈ ಅವರು ಉಡುಪಿಯಿಂದ ಚಿಕ್ಕಮಗಳೂರಿಗೆ ಎಸ್ಪಿ ಆಗಿ ಬಂದಾಗ ಇಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿತ್ತು. ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್‌ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು, ಅಂದಿನ ಎಸ್ಪಿ ಸಂತೋಷ್‌ ಬಾಬು ಅವರ ಕೊರಳಿಗೆ ಸುತ್ತಿಕೊಂಡಿತ್ತು. ಕ್ರಿಕೆಟ್‌ ಬೆಟ್ಟಿಂಗ್‌, ಇಸ್ಪೀಟ್‌ ಆಟ ರಾಜಾರೋಷವಾಗಿ ನಡೆಯುತ್ತಿತ್ತು.

Tap to resize

Latest Videos

ಖಡಕ್ ಖಾಕಿಗೆ ಅಣ್ಣಾಮಲೈ ಭಾವಪೂರ್ಣ ವಿದಾಯ

ಇಂತಹ ಸಂದರ್ಭದಲ್ಲಿ ಜಿಲ್ಲೆಗೆ ಎಸ್ಪಿ ಆಗಿ ಅಣ್ಣಾಮಲೈ ಎಂಟ್ರಿ ಕೊಡುತ್ತಿದ್ದಂತೆ ಇಸ್ಪೀಟ್‌ ಅಡ್ಡೆಯ ಮೇಲೆ ದಾಳಿ ಮಾಡಿದರು. ಹಫ್ತಾ ವಸೂಲಿ ಮಾಡುತ್ತಿದ್ದ ಪೊಲೀಸರಿಗೆ ಗಡುವು ನೀಡಿದ್ದರು. ಮರಳು ಮಾಫಿಯಾದಲ್ಲಿ ತೊಡಗಿದ್ದವರನ್ನು ಮಲೆನಾಡಿಗೆ ವರ್ಗಾವಣೆ ಮಾಡಿದ್ದರು. ಪೊಲೀಸ್‌ ಠಾಣೆಗೆ ದಿಢೀರನೆ ಭೇಟಿ ನೀಡುವ ಸಂಪ್ರದಾಯ ಇಟ್ಟುಕೊಂಡಿದ್ದರು. ಹೀಗೆ ಅವರ ಕೆಲಸದಿಂದಾಗಿ ಜನರಿಗೆ ತುಂಬಾ ಹತ್ತಿರವಾಗಿ ಸ್ಟಾರ್‌ಗಳಂತೆ ಜನರು ಅವರು ಎಲ್ಲೆ ಹೋದರೂ ಮುಗಿ ಬೀಳುತ್ತಿದ್ದರು, ಸೆಲ್ಪಿ ತೆಗೆಸಿಕೊಳ್ಳುತ್ತಿದ್ದರು.

ಅಣ್ಣಾಮಲೈ ಯಾವುದೇ ಪಕ್ಷ ಸೇರಲ್ಲ, ಎಲೆಕ್ಷನ್‌ಗೆ ನಿಲ್ಲಲ್ಲ, ರಾಜೀನಾಮೆಗೆ ಅಸಲಿ ಕಾರಣವೇನು..?

ಹೀಗೆ ಜನಪ್ರಿಯತೆ ಗಳಿಸಿದ್ದ ಅಣ್ಣಾಮಲೈ ಅವರ ಸೇವಾವಧಿಯಲ್ಲಿ ಬಹುದೊಡ್ಡ ಸವಾಲುಗಳು ಎದುರಾಗಿದ್ದವು. ಬಿಜೆಪಿ ಚಿಕ್ಕಮಗಳೂರು ನಗರ ಘಟಕದ ಪ್ರಧಾನ ಕಾರ್ಯದರ್ಶಿ ಅನ್ವರ್‌ ಕೊಲೆ, ದತ್ತಮಾಲೆಯ ಸಂದರ್ಭದಲ್ಲಿ ಚಿಕ್ಕಮಗಳೂರು ನಗರದಲ್ಲಿ ವಾತಾವರಣ ಬಿಗುವಿನಿಂದ ಕೂಡಿದ್ದಾಗ ಡೇ ಅಂಡ್‌ ನೈಟ್‌ ಅಂದರೆ 24 ಗಂಟೆ ಕಾಲ ಕರ್ತವ್ಯ ನಿರ್ವಹಿಸಿ, ಪೆಟ್ರೋಲ್‌ ಬಾಂಬ್‌ ತಯಾರಿಸಿದ್ದ ಯುವಕರನ್ನು ಪತ್ತೆ ಹಚ್ಚಿದ್ದರು. ಹೀಗೆ ಕರ್ತವ್ಯದ ಮೂಲಕ ಜನಪ್ರಿಯತೆ ಗಳಿಸಿದ್ದ ಅಣ್ಣಾಮಲೈ ಅವರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿರುವುದಕ್ಕೆ ಮಲೆನಾಡಿನಲ್ಲಿ ಜನರ ಬೇಸರ ವ್ಯಕ್ತಪಡಿಸಿದ್ದಾರೆ.

click me!