Koppal News: ಅಂಜನಾದ್ರಿ ಅಭಿವೃದ್ಧಿ ಕಾರ್ಯ ಶೀಘ್ರ ಕೈಗೊಳ್ಳಿ: ಸಚಿವ ಆನಂದ್ ಸಿಂಗ್

By Kannadaprabha NewsFirst Published Dec 23, 2022, 10:14 AM IST
Highlights

ರಾಜ್ಯ ಸರ್ಕಾರದಿಂದ ಈಗಾಗಲೋ ಘೋಷಣೆಯಾಗಿರುವ .160 ಕೋಟಿಯಲ್ಲಿ ತುರ್ತಾಗಿ ಅಭಿವೃದ್ಧಿಯನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಆನಂದಸಿಂಗ್‌ ಅವರು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ಕೊಪ್ಪಳ (ಡಿ.23) : ರಾಜ್ಯ ಸರ್ಕಾರದಿಂದ ಈಗಾಗಲೋ ಘೋಷಣೆಯಾಗಿರುವ .160 ಕೋಟಿಯಲ್ಲಿ ತುರ್ತಾಗಿ ಅಭಿವೃದ್ಧಿಯನ್ನು ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಆನಂದಸಿಂಗ್‌ ಅವರು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ. ಬೆಳಗಾವಿ ವಿಧಾನಸೌಧದಲ್ಲಿ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಹಾಗೂ ಕೊಪ್ಪಳ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ಈ ಸೂಚನೆ ನೀಡಿದ್ದಾರೆ.

ಈ ಹಿಂದೆ ಘೋಷಣೆ ಮಾಡಿದ .20 ಕೋಟಿ, ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿರುವ .100 ಕೋಟಿ ಹಾಗೂ ಕೆಕೆಆರ್‌ಡಿಬಿಯಿಂದ ಭೂಸ್ವಾಧೀನಕ್ಕೆ ಘೋಷಣೆ ಮಾಡಲಾಗಿರುವ .40 ಕೋಟಿಯನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಲು ತುರ್ತಾಗಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿದರು.

ಅಂಜನಾದ್ರಿ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅಡಿಗಲ್ಲು?

ಸುಮಾರು 72 ಎಕರೆ ಭೂಮಿಯ ಅಗತ್ಯವಿದ್ದು, ಇದರಲ್ಲಿ 67 ಎಖರೆ ಖಾಸಗಿ ಜಮೀನು ಹಾಗೂ ಉಳಿದ ಸರ್ಕಾರಿ ಜಮೀನು ಅಗತ್ಯವಾಗಿದೆ. ಈಗಾಗಲೇ ರೈತರೊಂದಿಗೆ ನಡೆಸಿದ ಮಾತುಕತೆ ವಿಫಲವಾಗಿರುವುದರಿಂದ ಭೂಮಿ ಖರೀದಿಯನ್ನು ಭೂಸ್ವಾಧೀನ ಪ್ರಕ್ರಿಯೆ ಅನುಸಾರವೇ ಮಾಡುವ ಪ್ರಕ್ರಿಯೆ ಅಂಗವಾಗಿ ಮೊದಲ ನೋಟಿಸ್‌ ಸವ್‌ರ್‍ ಮಾಡಿ, ಆಕ್ಷೇಪಣೆಗಳನ್ನು ಅಹ್ವಾನ ಮಾಡಲಾಗಿದೆ. ಇದೆಲ್ಲವೂ ತುರ್ತಾಗಿ ಆದರೆ, ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ಅನುಕೂಲವಾಗುತ್ತದೆ ಎಂದರು.

Koppal: ಅಂಜನಾದ್ರಿ ಬೆಟ್ಟಕ್ಕೆ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್ ಭೇಟಿ: ವಿಶೇಷ ಪೂಜೆ

ಅಂಜನಾದ್ರಿಯಲ್ಲಿ ಅಭಿವೃದ್ಧಿ ಮಾಡುವ ಕುರಿತು ಈಗಾಗಲೇ ನೀಲನಕ್ಷೆಯನ್ನು ಸಿದ್ಧ ಮಾಡಲಾಗಿದ್ದು, ಶೇ. 90ರಷ್ಟುಸಮ್ಮತಿ ದೊರೆತಿದೆ. ಸಣ್ಣಪುಟ್ಟಬದಲಾವಣೆಗಳನ್ನು ಸೂಚಿಸಲಾಗಿದ್ದು, ಅದು ಆಗುತ್ತಿದ್ದಂತೆ ಅಭಿವೃದ್ಧಿ ಕೈಗೆತ್ತಿಕೊಳ್ಳಲು ಅನುಕೂಲವಾಗುತ್ತದೆ. ಹೀಗಾಗಿ ಭೂಸ್ವಾಧೀನ ವಿಳಂಬವಾಗದಂತೆ ನೋಡಿಕೊಳ್ಳಿ ಎಂದರು.\ ಜಿಲ್ಲಾಧಿಕಾರಿ ಸುಂದರೇಶ ಬಾಬು, ಪುರಾತತ್ವ ಇಲಾಖೆಯ ಆಯುಕ್ತರಾದ ದೇವರಾಜ್‌, ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲ್‌ಶೆಟ್ಟಿಮೊದಲಾದವರು ಇದ್ದರು.

click me!