ನನ್ನ ವಿರುದ್ಧ ಇಂತಹ ಸುಳ್ಳು ಸುದ್ದಿ ಹಬ್ಬಿಸಬೇಡಿ : ಅನಿತಾ ಕುಮಾರಸ್ವಾಮಿ ಅಸಮಾಧಾನ

By Kannadaprabha News  |  First Published Nov 25, 2020, 1:35 PM IST

ನನ್ನ ವಿರುದ್ಧ ಇಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 


ರಾಮನಗರ (ನ.25):  ಶಾಸಕಿ ಅನಿತಾ ಕುಮಾರಸ್ವಾಮಿ ಮತ್ತೆ ಮಾಧ್ಯಮದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬುಧವಾರ ಸ್ವಕ್ಷೇತ್ರದ ಕಾರ್ಯಕ್ರಮದ ವೇಳೆ ಮಾಧ್ಯಮದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಬೇಡಿ, ನಾನು ಮಹಿಳೆ ನನಗೂ ಸಹಕಾರ ನೀಡಿ ಎಂದು ತಮ್ಮ ಅಸಹನೆಯನ್ನು ಹೊರಗೆ ಹಾಕಿದರು.

ನಾನು ರಾಜಕಾರಣ ಮಾಡಲು ಬಂದಿಲ್ಲ, ಸಮಾಜಸೇವೆ ಮಾಡಲು ಬಂದಿದ್ದೇನೆ. ರಾಜಕಾರಣದ ಸಮಯದಲ್ಲಿ ರಾಜಕೀಯ, ಆದರೆ ಬಡವರ ವಿಚಾರದಲ್ಲಿ ರಾಜಕೀಯ ಮಾಡಿಲ್ಲ. ಕೊರೋನಾ ಸಂದರ್ಭದಲ್ಲಿ ನಾನು, ಪತಿ ಕುಮಾರಸ್ವಾಮಿ, ಮಗ ನಿಖಿಲ್‌ ಜತೆಗೆ ಸೊಸೆಯೂ ಬಂದು ಆಹಾರದ ಕಿಟ್‌ ಮತ್ತು ಹೆಲ್ತ್‌ ಕಿಟ್‌ ನೀಡಿದ್ದೇವೆ.

Tap to resize

Latest Videos

ಶಾಸಕಿ ಅನಿತಾ ಕುಮಾರಸ್ವಾಮಿ ಬಾಯಿಂದ ಇದೆಂಥಾ ಮಾತು..!

 ರಾಮನಗರ ಮಾರುಕಟ್ಟೆಯಲ್ಲಿ ಸ್ಯಾನಿಟೈಜರ್‌ ಟವರ್‌ ಅಳವಡಿಸಿದೆವು. ಕೊರೋನಾ ಸಮಯದಲ್ಲಿ ಇಲ್ಲಿ ಆಗಿರುವಷ್ಟುಕೆಲಸ ಬೇರೆ ಎಲ್ಲಿ ನಡೆದಿದೆ ಹೇಳಿ ಎಂದು ಪ್ರಶ್ನಿಸಿದರು. ಕೆಲ ಜೆಡಿಎಸ್‌ ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರಿರುವ ಬಗ್ಗೆ ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅನಿತಾಕುಮಾರಸ್ವಾಮಿ, ಅವರೆಲ್ಲರೂ ನಮ್ಮ ಮನೆಯವರು, ಯಾರೂ ಕೂಡ ಪಕ್ಷ ಬಿಡುವುದಿಲ್ಲ. ಮತ್ತೆ ಅವರು ನಮ್ಮ ಮನೆಗೆ ಹಿಂದಿರುಗುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

click me!