1 ಮಿಲಿಯನ್ ಮರಗಳನ್ನು ನೆಡುವ ಪ್ರಯತ್ನಕ್ಕೆ ಮುಂದಾಗಿದ್ದೇವೆ ಎಂದು ಆರನೇ ತರಗತಿ ಓದುತ್ತಿರುವ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಅನಿರುದ್ಧ ತಿಳಿಸಿದ್ದಾರೆ. ಅನಿರುದ್ಧ್ ಅವರ ಅಪ್ಪ ಅಮ್ಮ ಕರ್ನಾಟಕದಲ್ಲಿ 100 ಗಿಡಗಳನ್ನು ನೆಡುವ ಅಭಿಯಾನವನ್ನು ಪ್ರಾರಂಭಿಸಿದ್ದೇ ಅವರಿಗೆ ಸ್ಫೂರ್ಥಿಯಾಗಿದೆ.
ಮೈಸೂರು(ಅ.05): ನನ್ನ ಅಪ್ಪ ಅಮ್ಮ ಕರ್ನಾಟಕದಲ್ಲಿ 100 ಗಿಡಗಳನ್ನು ನೆಡುವ ಅಭಿಯಾನವನ್ನು ಪ್ರಾರಂಭಿಸಿದಾಗ ನಾನು ಸಹ ಅವರೊಂದಿಗೆ ಕೈ ಜೋಡಿಸಿ ಇಂದು 1 ಮಿಲಿಯನ್ ಮರಗಳನ್ನು ನೆಡುವ ಪ್ರಯತ್ನಕ್ಕೆ ಮುಂದಾಗಿದ್ದೇವೆ ಎಂದು ಆರನೇ ತರಗತಿ ಓದುತ್ತಿರುವ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದ ಅನಿರುದ್ಧ ತಿಳಿಸಿದ್ದಾರೆ.
ನಮ್ಮ ಈ ಒಂದು ಅಭಿಯಾನಕ್ಕೆ ಚಿತ್ರದುರ್ಗದಲ್ಲಿ ಸ್ಪಂದನೆ ಸಿಕ್ಕಿದೆ. ಇದನ್ನು ಇನ್ನಷ್ಟು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಬೇಕು ಎಂಬುದು ನನ್ನ ಆಸೆ. ಈ ಪರಿಸರ ರಕ್ಷಣೆ ಮಾಡಬೇಕು ಹೆಚ್ಚು ಹೆಚ್ಚು ಗಿಡಗಳನ್ನು ನೆಡಬೇಕು. ಆಗ ಹವಾಮಾನ ಮತ್ತು ಪ್ರಕೃತಿಯಲ್ಲಿ ಆಗುವ ಏರುಪೇರುಗಳನ್ನು ತಡೆಯಬಹುದು ಅಲ್ಲದೆ ಭೂಕಂಪ, ಪ್ರವಾಹ, ಪ್ರಳಯಗಳಂತ ಪ್ರಾಕೃತಿಕ ವಿಕೋಪಗಳನ್ನು ತಡೆಯಬಹುದು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೈಸೂರು: ಬೆಂಕಿ ಇಲ್ಲದೆ ರುಚಿಕರ ಅಡುಗೆ ಮಾಡಿದ ಅತ್ತೆ, ಸೊಸೆ..!
ಗ್ರೀನ್ ಫೆಡರೇಶನ್‌ನ ಸಿಇಒ ನಂದನ್ ಪೂಜಾರಿ ಮಾತನಾಡಿ, ಗಾಂಧೀಜಿಯವರ ಸ್ವರಾಜ್ಯ ಗ್ರಾಮಗಳ ಕಲ್ಪನೆ ನನಸು ಮಾಡುವ ನಿಟ್ಟಿನಲ್ಲಿ ಈ ಕೆಲಸ ಮಾಡುತ್ತಿದ್ದೇವೆ. ಈಗಾಗಲೇ 300 ಎಕರೆಯಲ್ಲಿ ಗಿಡಗಳನ್ನು ನೆಟ್ಟು ಪ್ಲಾಂಟೇಶನ್ ನಿರ್ಮಾಣ ಮಾಡಿದ್ದೇವೆ. ಇದಕ್ಕೆ ಹಳ್ಳಿಯ ಜನರ ಸ್ಪಂದನೆ ಸಿಕ್ಕಿದೆ ಇನ್ನು ಮುಂದೆಯೂ ರಾಜ್ಯಾದ್ಯಂತ ಇದನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ.
ಮೈಸೂರು: ಜಂಬೂ ಸವಾರಿಯಲ್ಲಿ 39 ಆಕರ್ಷಕ ಸ್ತಬ್ಧಚಿತ್ರಗಳು