DK ಸುರೇಶ್ ಆಪರೇಷನ್ ‘ಹಸ್ತ’: ಜೆಡಿಎಸ್, ಬಿಜೆಪಿ ನಾಯಕರು 'ಕೈ' ತೆಕ್ಕೆಗೆ

Published : May 12, 2019, 07:18 PM IST
DK ಸುರೇಶ್ ಆಪರೇಷನ್ ‘ಹಸ್ತ’: ಜೆಡಿಎಸ್, ಬಿಜೆಪಿ ನಾಯಕರು 'ಕೈ' ತೆಕ್ಕೆಗೆ

ಸಾರಾಂಶ

ಆಪರೇಷನ್ ಕಮಲ ಮಾಡ್ತೀವಿ ಅಂತೆಲ್ಲ ಹೇಳಿಕೆ ನೀಡುವುದರಲ್ಲಿಯೇ ಬ್ಯುಸಿಯಾಗಿರುವ ಬಿಜೆಪಿಗೆ ತಿರುಗೇಟು ಕೊಟ್ಟಿರುವ ಕಾಂಗ್ರೆಸ್ ಸಂಸದ ಡಿಕೆ ಸುರೇಶ್, ಜೆಡಿಎಸ್, ಬಿಜೆಪಿ ನಾಯಕರನ್ನು ಆಪರೇಷನ್ ಹಸ್ತದ ಮೂಲಕ ಕಾಂಗ್ರೆಸ್ಸಿಗೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು, [ಮೇ.12]: ಆನೇಕಲ್ ಪುರಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರು ಆಪರೇಷನ್ ಹಸ್ತ ಮಾಡಿದ್ದಾರೆ.

ಆನೇಕಲ್ ಪುರಸಭೆ ಸದಸ್ಯ, ಜೆಡಿಎಸ್ ಮುಖಂಡ ಪದ್ಮನಾಭ್  ಹಾಗೂ ಆನೇಕಲ್ ಬಿಜೆಪಿ ಘಟಕದ ಉಪಾಧ್ಯಕ್ಷ ಶಿವರಾಂ ಅವರನ್ನು ಆಪರೇಷನ್ ಹಸ್ತದ ಮೂಲಕ ಕಾಂಗ್ರೆಸ್ ಗೆ ಸೇರಿಸಿಕೊಂಡರು. 

ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ. ಸುರೇಶ್, ಬಾಯಿಚಪಲಕ್ಕೆ ಮಾತನಾಡುವುದೆಲ್ಲ ನಿಜವಾಗುವುದಿಲ್ಲ. 20 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪನರು ಹೇಳುತ್ತಾರೆ. ಆದರೆ ನಮ್ಮ ಬಳಿ ಬಿಜೆಪಿಯ 40 ಶಾಸಕರು ಸಂಪರ್ಕದಲ್ಲಿದ್ದಾರೆ ಎಂದು ತಿರುಗೇಟು ನೀಡಿದರು.

ಲೋಕಸಭಾ ಚುನಾವಣೆ ಫಲಿತಾಂಶ ಮೇ 23ರಂದು ಹೊರಬೀಳಲಿದೆ. ಫಲಿತಾಂಶದ ನಂತರ ರಾಜ್ಯ ಬಿಜೆಪಿಯಲ್ಲಿ ಬದಲಾವಣೆ ಆಗಲಿದೆಯೇ ಹೊರತು ಮೈತ್ರಿ ಸರ್ಕಾರದಲ್ಲಿ ಆಗುವುದಿಲ್ಲ ಎಂದು ಹೇಳಿದರು.

PREV
click me!

Recommended Stories

ಗಂಭೀರತೆ ಪಡೆದ ಕಲ್ಲಿದ್ದಲು ಕಳ್ಳತನ ಪ್ರಕರಣ, ಪವರ್ ಮೇಕ್ ಸಂಸ್ಥೆಯ ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲು
ಕಾರವಾರದಲ್ಲಿ ಸಿಕ್ಕಿದ ಸೀಗಲ್ ಹಕ್ಕಿಯಲ್ಲಿ ಚೈನಾದ ಜಿಪಿಎಸ್ ಟ್ರ್ಯಾಕರ್ ಪತ್ತೆ! ಪೊಲೀಸರಿಂದ ತನಿಖೆ