ಬುಲ್ಲೋಜರ್ ಬಾಬಾ ಆಗಲು ಬಿಳಿ ಬಟ್ಟೆ ಆಗದು, ಬಟ್ಟೆ ಬದಲಿಸಿರಿ, ಕೇಸರಿ ಪಂಚೆ, ಸಾಲು, ಜಪಮಾಲೆ ಹಾಕಿರಿ, ಆಗ ಬುಲ್ಡೋಜರ್ ಬಾಬಾ ಆಗಲು ನಿಮಗೆ ಧೈರ್ಯ ಬರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಮಾತಿಗೆ ತಿರುಗೇಟು ನೀಡಿದ ಆಂದೋಲಾ ಸಿದ್ದಲಿಂಗ ಸ್ವಾಮೀಜಿ
ಕಲಬುರಗಿ(ಜ.02): ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಹಾಗೂ ಜಿಲ್ಲಾ ಸಚಿವ ಪ್ರಿಯಾಂಕ್ ಖರ್ಗೆ ಮಧ್ಯೆ ವಾಕ್ಸಮರ ಮುಂದುವರಿದಿದೆ.
ಇಲ್ಲಿನ ರಿಂಗ್ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿರುವ ಆಂದೋಲಾ ಸ್ವಾಮೀಜಿ ಯವರಿಗೆ ಸೇರಿದ್ದ ಮಠದ ಕಟ್ಟಡಕ್ಕೆ ಸೆಟ್ ಬ್ಯಾಕ್ ಇಲ್ಲವೆಂಬ ಕಾರಣಕ್ಕೆ ಪಾಲಿಕೆಯಿಂದ ನೋಟಿಸ್ ಕೊಡಲಾಗಿತ್ತು. ಇದೇ ವಿಚಾರದಲ್ಲಿ ಪ್ರತಿಕ್ರಿಯಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಕ್ರಮ ತೆರವಿಗೆ ಮುಂದಾಗ್ತಿವಿ, ಬುಲ್ಡೋಜರ್ ಬಾಬಾ ಆಗಬೇಕಾಗ್ತದೆ ಎಂದಿದ್ದರು.
ಸಚಿನ್ ಆತ್ಮಹತ್ಯೆ ಕೇಸ್: ಸಚಿವ ಖರ್ಗೆ, ಆಂದೋಲಾ ಶ್ರೀ ಟ್ವೀಟ್ ಸಮರ!
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಂದೋಲಾ ಸಿದ್ದಲಿಂಗ ಸ್ವಾಮೀಜಿಯವರು, ಬುಲ್ಲೋಜರ್ ಬಾಬಾ ಆಗಲು ಬಿಳಿ ಬಟ್ಟೆ ಆಗದು, ಬಟ್ಟೆ ಬದಲಿಸಿರಿ, ಕೇಸರಿ ಪಂಚೆ, ಸಾಲು, ಜಪಮಾಲೆ ಹಾಕಿರಿ, ಆಗ ಬುಲ್ಡೋಜರ್ ಬಾಬಾ ಆಗಲು ನಿಮಗೆ ಧೈರ್ಯ ಬರುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಮಾತಿಗೆ ತಿರುಗೇಟು ನೀಡಿದ್ದಾರೆ.
ಪಾಲಿಕೆಯವರು ನೀಡಿರೋ ನೊಟೀಸ್ ಗೆ ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದೇವೆ. ಆದರೆ ಇದೇ ವಿಚಾರದಲ್ಲಿ ಜೋಶ್‌ನಲ್ಲಿರೋ ಸಚಿವರು ಬುಲ್ಡೋಜರ್ ಬಾಬಾ ಆಗಲು ಹೊರಟಿದ್ದಾರೆ. ಅವರ ಮನೆಗೆ ಪಂಚೆ, ಶಾಲು, ಮಾಲೆ ಕಳುಹಿಸೋದಾಗಿ ಹೇಳಿದರು.
ಕೇಸರಿ ಬಟ್ಟೆ ಹಾಕಿದ್ರೆ ಧೈರ್ಯ ಬರುತ್ತೇ, ಕೇಸರಿ ಬಟ್ಟೆ ನಾವೇ ಕೊಡುತ್ತೇವೆ, ಕೇಸರಿ ಪಂಚೆ, ಶರ್ಟ್ ಪೀಸ್, ಶಾಲು ಮತ್ತು ಜಪಾ ಮಣಿ ಕೊಡುತ್ತೇವೆ. ಕೇಸರಿ ಬಟ್ಟೆಯನ್ನ ನಾವು ಇವತ್ತೇ ಪ್ರಿಯಾಂಕ್ ಖರ್ಗೆ ಅವರಿಗೆ ಕೊರಿಯರ್ ಮೂಲಕ ಕಳಿಸುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲೇ ಕೇಸರಿ ಶಾಲು, ಪಂಚೆ, ಮಾಲೆಗಳನ್ನ ಪ್ರದರ್ಶಿಸಿದರು.
ಕಲಬುರಗಿ ನಗರದಲ್ಲಿ ಮೈ ಬಾಸ್ ಮಸೀದಿಗೆ ಸೆಟ್ ಬ್ಯಾಕ್ ಇಲ್ಲ, ಅಲ್ಲಿ ಸಣ್ಣ ಸಣ್ಣ ಕಾಂಪ್ಲೆಕ್ಸ್ ಗಳು ಅಕ್ರಮವಾಗಿ ತಲೆ ಎತ್ತಿವೆ. ಶಾಸಕ ಅಲ್ಲಮಪ್ರಭು ಪಾಟೀಲ್ ಮನೆ, ಇಲಿಯಾಸ್ ಬಾಗವಾನ್ ಮನೆಗೆ ಸೆಟ್ ಬ್ಯಾಕ್ ಇಲ್ಲ ಖಾಜಾ ಬಂದೇನವಾಜ ಆಸ್ಪತ್ರೆ, ಪಾಲಿಕೆ ವಲಯ ಆಯುಕ್ತ ರಮೇಶ್ ಪಟ್ಟೆದಾರ್, ಪ್ರಿಯಾಂಕ್ ಬೆಂಬಲಿಗಪಾಲಿಕೆ ಸದಸ್ಯ ರಾಜು ಜಾನೆ ಅವರ ಮನೆಗಳು ಪಾಲಿಕೆಯ ಕಟ್ಟಡ ನಿಯಮ ಪಾಲಿಸಿಲ್ಲ. ಇವುಗಳನ್ನ ಒಡೆಯಲು ಮುಂದಾಗ್ತಿರಾ ಎಂದು ಸಚಿವರನ್ನು ಪ್ರಶ್ನಿಸಿದರು. ತಾಕತ್, ಧಮ್ ಬಗ್ಗೆ ಮಾತಾಡ್ತಿರಲ್ಲ, ಧಮ್,ತಾಕತ್ ಇದ್ರೆ ಈ ಎಲ್ಲಾ ಕಟ್ಟಡಗಳಿಗೆ ಬುಲ್ಲೋಜರ್‌ಹಚ್ಚಿ, ನಾವೇ ಬೇಕಾದ್ರೆ ಹಿಟಾಚಿ ಕೊಡುತ್ತೇವೆ. ಕೆಬಿಎನ್ ಆಸ್ಪತ್ರೆ ಯವರು ಪಾಲಿಕೆಗೆ ಬಹುಕೋಟಿ ತೆರಿಗೆ ಕಟ್ಟಿಲ್ಲ. ಇದನ್ನೆಲ್ಲ ಕೇಳಿ ವಸೂಲಿ ಮಾಡಿರಿ. ಪಾಲಿಕೆ ಸಿಬ್ಬಂದಿಗೆ ವೇತನವಾದರೂ ಕೊಡಲಾಗುತ್ತದೆ. ಇದನ್ನೆಲ್ಲ ಬಿಟ್ಟು ಧಮ್. ತಾಕತ್ ಮಾತಾಡಿದರೆ ಸುಮ್ಮನಿರೋದಿಲ್ಲ ವೆಂದು ಪ್ರಿಯಾಂಕ್ ಖರ್ಗೆಗೆ ಆಂದೋಲಾ ಸ್ವಾಮೀಜಿ ಸವಾಲು ಹಾಕಿದರು. ಸಂವಿಧಾನ ಪಾಲಕ, ಸಂವಿಧಾನವೇ ಉಸಿರು ಅಂತಿರೋ ಸಚಿವರು ಸಂವಿಧಾನದ ಪ್ರಕಾರವೇ ಬುಲ್ಲೋಜರ್ ಹಚ್ಚಿ ಎಂದು ಸ್ವಾಮೀಜಿ ಸವಾಲು ಎಸೆದರು.
ಕಲಬುರಗಿಗೆ ಬರೋವಾಗ ಹೋಮ್‌ವರ್ಕ್ ಮಾಡ್ಕೊಂಡು ಬನ್ನಿ: ಸಚಿವ ಪ್ರಿಯಾಂಕ್ ಖರ್ಗೆ
ತಾವು ಸಚಿವರ ಬಗ್ಗೆ ವೈಯಕ್ತಿಕವಾಗಿ ಎಂದಿಗೂ ಟೀಕೆ ಮಾಡಿಲ್ಲ, ಮಾಡೋದೂ ಇಲ್ಲ ಎಂದ ಸ್ವಾಮೀಜಿ, ಅಭಿವೃದ್ಧಿ ವಿಚಾರ, ಅನುದಾನ ದುರ್ಬಳಕೆ ಸೇರಿದಂತೆ ಹಲವಾರು ಅಕ್ರಮಗಳ ಕುರಿತಂತೆ ಮಾತನಾಡುತ್ತ ಸಚಿವರಿಗೆ ಟೀಕಿಸಿದ್ದಿದೆ. ಇಂತಹ ಸಂಗತಿಗಳು ಕಂಡುಬಂದಾಗಟೀಕೆ ಹಾಗೇ ಮುಂದುವರಿಯಲಿದೆ ಎಂದರು.
ತಾವು ಬಿಜೆಪಿ ಬೆಂಬಲಿಗರು ಎಂಬ ಕಾರ ಣಕ್ಕೆ ಯಾರಿಗೋ ಮನಬಂದಂತೆ ವೈಯಕ್ತಿಕ ಟೀಕೆ ಮಾಡೋದಿಲ್ಲವೆಂದು ಸ್ವಾಮೀಜಿ ಸ್ಪಷ್ಟಪಡಿಸಿದರು. ಬಿಜೆಪಿ, ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷ ಯಾವುದಾದರೂ ಅಕ್ರಮ, ಹಗರಣ, ಅನ್ಯಾಯ, ಮೋಸದ ವಿಷಯಗಳು ಬಂದಾಗ ಎಲ್ಲರಿಗೂ ಟೀಕಿಸೋದಾಗಿ ಸ್ವಾಮೀಜಿ ಸ್ಪಷ್ಟಪಡಿಸಿದರು.