ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸುಮಾರು 14 ಲಕ್ಷ ರು. ಹಾಗೂ ವಿದ್ಯುತ್ ದೀಪಗಳ ಅಲಂಕಾರಕ್ಕೆ 12.70 ಲಕ್ಷ ರು. ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದ ಬಿಬಿಎಂಪಿ ಅಧಿಕಾರಿಗಳು
ಬೆಂಗಳೂರು(ಜ.02): ಹೊಸ ವರ್ಷಾಚರಣೆಗೆ ರಾಜಧಾನಿ ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಹಾಗೂ ಬ್ಯಾರಿಕೇಡ್ ಅಳವಡಿಕೆ ಸೇರಿದಂತೆ ಮೊದಲಾದ ಸಿದ್ದತೆಗೆ ಬಿಬಿಎಂಪಿ ವತಿಯಿಂದ ಬರೋಬ್ಬರಿ 25 ಲಕ್ಷ ರು.ಗೂ ಅಧಿಕ ಮೊತ್ತ ವೆಚ್ಚ ಮಾಡಲಾಗಿದೆ.
ಹೊಸ ವರ್ಷದ ಆಚರಣೆಗೆ ವಿದ್ಯುತ್ ದೀಪದ ವ್ಯವಸ್ಥೆ, ಬ್ಯಾರಿಕೇಡ್ ವ್ಯವಸ್ಥೆ, ಕಸ ವಿಲೇವಾರಿ, ಸಾರ್ವಜನಿಕರಿಗೆ ಆರೋಗ್ಯ ಸಮಸ್ಯೆ ಉಂಟಾದರೆ ತಕ್ಷಣ ಚಿಕಿತ್ಸೆ ನೀಡುವುದಕ್ಕೆ ವೈದ್ಯರ ನಿಯೋಜನೆ, ಆರೋಗ್ಯ ಕಿಯೋಸ್ಟ್ ಸ್ಥಾಪನೆಯ ಜವಾಬ್ದಾರಿಯನ್ನು ಬಿಬಿಎಂಪಿ ಮಾಡಿತ್ತು. ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸುಮಾರು 14 ಲಕ್ಷ ರು. ಹಾಗೂ ವಿದ್ಯುತ್ ದೀಪಗಳ ಅಲಂಕಾರಕ್ಕೆ 12.70 ಲಕ್ಷ ರು. ವೆಚ್ಚ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎಲ್ಲರನ್ನು ಮೀರಿಸಿದ ಕರ್ನಾಟಕ, ಹೊಸ ವರ್ಷ ಸಂಭ್ರಮಾಚರಣೆಗೆ 308 ಕೋಟಿ ರೂ ಮದ್ಯ ಮಾರಾಟ
ಪ್ಲಾಸ್ಟಿಕ್ ಕವರ್, ಇತರೆ ಪ್ಲಾಸ್ಟಿಕ್ ತ್ಯಾಜ್ಯ, ಚಪ್ಪಲಿ, ಮದ್ಯದ ಬಾಟಲಿ ಸೇರಿದಂತೆ ಇನ್ನಿತರೆ ಅನುಪಯುಕ್ತ ವಸ್ತುಗಳನ್ನು ಬೇರ್ಪಡಿಸಿ ಸಂಗ್ರಸಲಾಗಿದೆ. ಪುನರ್ ಬಳಕೆಯ ಸುಮಾರು 3 ಟನ್ ತ್ಯಾಜ್ಯವನ್ನು ಒಣ ತ್ಯಾಜ್ಯ ಸಂಗ್ರಹಣಾ ಘಟಕಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ವಚ್ಚತಾ ಕಾರ್ಯದ ವೇಳೆ ಸಹಾಯಕ ಪ್ರಧಾನ ವ್ಯವಸ್ಥಾಪಕ ರವಿಕುಮಾರ್, ಚೀಫ್ ಮಾರ್ಷಲ್ ರಾಜ್‌ಬಿರ್ ಸಿಂಗ್ ಸಹಾಯಕ ಕಾರ್ಯಪಾಲಕ ಅಭಿಯತರ ಅಪುರಾಜ್, ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.
ಹೊಸ ವರ್ಷಾಚರಣೆ ವೇಳೆ 15 ಟನ್ ಕಸದ ರಾಶಿ
ಹೊಸ ವರ್ಷಾಚರಣೆಯ ವೇಳೆ ನಗರದ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಪೀಟ್, ರೆಸಿಡೆನ್ಸಿ ರಸ್ತೆ, ರಿಚ್ ಮಂಡ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಕಸ್ತೂರ್‌ಬಾ ರಸ್ತೆ ಸೇರಿದಂತೆ ಮುಂತಾದ ರಸ್ತೆಗಳಲ್ಲಿ 15 ಟನ್ ತ್ಯಾಜ್ಯ ಉತ್ಪತ್ತಿಯಾಗಿದೆ. ಬುಧವಾರ ಬೆಳಗಿನ ಜಾವ 3 ಗಂಟೆಯಿಂದ 7 ಗಂಟೆ ಒಳಗೆ ಸ್ವಚ್ಛತಾ ಕಾರ್ಯ ನಡೆಸಿ ತ್ಯಾಜ್ಯ ಗುಡಿಸಿ ಸ್ವಚ್ಛಗೊಳಿಸಲಾಗಿದೆ. ಸ್ವಚ್ಛತಾ ಕಾರ್ಯಕ್ಕೆ 70ಕ್ಕೂ ಹೆಚ್ಚು ಪೌರಕಾರ್ಮಿಕರು ಬಳಕೆ ಮಾಡಿಕೊಳ್ಳಲಾಗಿದೆ. ಕಸ ಸಾಗಾಣಿಕೆಗೆ 25 ಆಟೋ ಟಿಪ್ಪರ್, 3 ಕಾಂಪ್ಯಾಕ್ಟರ್‌ಬಳಕೆ ಮಾಡಲಾಗಿದೆ.
31ರ ರಾತ್ರಿ 11ರವರೆಗೆ 8.59 ಲಕ್ಷ ಜನರಿಂದ ಮೆಟ್ರೋದಲ್ಲಿ ಸಂಚಾರ
ಬೆಂಗಳೂರು: ಹೊಸ ವರ್ಷಾಚರಣೆ ಪ್ರಯುಕ್ತ ಡಿ.31ರಿಂದ ಬುಧವಾರ ನಸುಕಿನವರೆಗೆ ನಮ್ಮ ಮೆಟ್ರೋ ಸೇವೆಯನ್ನು ವಿಸ್ತರಿಸಲಾಗಿ ದರೂ ಕೇವಲ 8.59 ಲಕ್ಷ ಪ್ರಯಾಣಿಕರು ರೈಲುಗಳಲ್ಲಿ ಸಂಚರಿಸಿದ್ದಾರೆ.
New Year 2025: ಸುವರ್ಣ ಪಾರ್ಟಿಯಲ್ಲಿ ಜಸ್ಕರನ್ ಸಿಂಗ್ ಹಾಡಿನ ಮೋಡಿ
ಇಂಟರ್‌ಚೆಂಜ್ ಸೇರಿ 4 ಟರ್ಮಿನಲ್ ಗಳಿಂದ ಪ್ರತಿದಿನ ರಾತ್ರಿ 11 ಗಂಟೆಗೆ ಕೊನೆಯ ಮೆಟ್ರೋ ರೈಲು ಸಂಚರಿಸುತ್ತದೆ. ಹೊಸ ವರ್ಷಾಚರಣೆ ಪ್ರಯುಕ್ತ ನಸುಕಿನ 2 ಗಂಟೆವರೆಗೆ ಮೆಟ್ರೋ ರೈಲಿನ ಸಂಚಾರವನ್ನು ವಿಸ್ತರಿಸಲಾಗಿತ್ತು. ಆದರೆ, ದೈನಂದಿನ ಸಂಖ್ಯೆಗಿಂತ ತುಸು ಹೆಚ್ಚಿನ ಸಂಖ್ಯೆಯಷ್ಟೇ ಪ್ರಯಾಣಿಕರು ಸಂಚರಿಸಿದ್ದಾರೆ. ಬುಧವಾರ ಮುಂಜಾನೆ 2 ಗಂಟೆಗೆ ಎಲ್ಲ ಟರ್ಮಿನಲ್ ನಿಲ್ದಾಣಗಳಿಂದ ರೈಲು ಹೊರಟಿದ್ದು, ಮೆಜೆಸ್ಟಿಕ್‌ನಿಂದ ಕೊನೆಯ ರೈಲು ಎಲ್ಲಾ 4 ದಿಕ್ಕುಗಳಿಗೆ ಮುಂಜಾನೆ 2.40ಕ್ಕೆ ಸಂಚರಿಸಿತ್ತು. ಒಟ್ಟಾರೆ 8,59,467 ಪ್ರಯಾಣಿಕರು ಸಂಚರಿ ಸಿದ್ದಾರೆ. ಇದರಲ್ಲಿ ನೇರಳೆ ಮಾರ್ಗದಲ್ಲಿ 4,00,583, ಹಸಿರು ಮಾರ್ಗದಲ್ಲಿ 2,90, 530 ಮತ್ತು ಕೆಂಪೇಗೌಡ ನಿಲ್ದಾಣದಿಂದ 1,62,931 ಹಾಗೂ ಪೇಪರ್ ಟಿಕೆಟ್ ಪಡೆದು 5.423 ಜನ ಪ್ರಯಾಣಿಸಿದ್ದಾರೆ ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚೌಹಾಣ್ ಮಾಹಿತಿ ನೀಡಿದರು.
ಮೆಟ್ರೋ ನಿತ್ಯದ ಸರಾಸರಿ 8.50 ಲಕ್ಷ ಸಂಚರಿಸುತ್ತಿದ್ದಾರೆ. ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ತಡರಾತ್ರಿ ಪಾರ್ಟಿ ಮುಗಿಸುವ ಜನರ ಓಡಾಟಕ್ಕೆ ಅನುಕೂಲ ಆಗುವಂತೆ ಮೆಟ್ರೋ ಅವಧಿ ವಿಸ್ತರಿಸಲಾಗಿತ್ತು. ಹೀಗಾಗಿ ಹೆಚ್ಚಿನ ಜನ ಸಂಚರಿಸುವ ನಿರೀಕ್ಷೆ ಯಿತ್ತು. ದೈನಂದಿನ ಪ್ರಯಾಣಿಕರ ಸಂಖ್ಯೆಗೆ ಹೋಲಿಸಿದರೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿಯೇ ಇದೆ. ವಿಶೇಷವಾಗಿ ಟ್ರಿನಿಟಿ, ಕಬ್ಬನ್‌ಪಾರ್ಕಿಂದ ಎಷ್ಟು ಜನ ಸಂಚರಿಸಿದ್ದಾರೆ ಎಂಬುದು ಇನ್ನಷ್ಟೇ ತಿಳಿಯ ಬೇಕಿದೆ ಎಂದು ತಿಳಿಸಿದರು. ಕಳೆದ ಡಿ.6 ರಂದು ಮೆಟ್ರೋದಲ್ಲಿ ಗರಿಷ್ಠ ಸಂಖ್ಯೆಯ ಅಂದರೆ 9.20 ಲಕ್ಷ ಜನ ಓಡಾಡಿ ರುವುದು ಈವರೆಗಿನ ದಾಖಲೆಯಾಗಿದೆ.