
ಉಡುಪಿ (ನ.5): ಸಾವಿರಾರು ವರ್ಷಗಳ ಇತಿಹಾಸವಿರುವ ದೇವರುಗಳ ವಿಗ್ರಹ ನಾಪತ್ತೆ ಪ್ರಕರಣದಲ್ಲಿ ದೂರು ದಾಖಲಾಗುತ್ತಿದ್ದಂತೆ ಹಂಗಾರಕಟ್ಟೆ ಬಾಳೆಕುದ್ರು ಮಠದ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿ ಮಠಕ್ಕೆ ಬೀಗ ಜಡಿದು ಪರಾರಿಯಾದ ಘಟನೆ ನಡೆದಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿರುವ ಬಾಳೆಕುದ್ರು ಮಠ ಭಾಗವತ ಸಂಪ್ರದಾಯಕ್ಕೆ ಸೇರಿದ್ದು, ಮಠವು ಶತಮಾನಗಳ ಇತಿಹಾಸವಿದೆ.. ಮಠದಲ್ಲಿ ಶತ ಶತಮಾನಗಳಿಂದ ಪೂಜಿಸಲ್ಪಡುತ್ತಿದ್ದ ವಿಗ್ರಹ ನಾಪತ್ತೆಯಾಗಿದ್ದವು. ಪುರಾತನ ವಿಗ್ರಹಗಳ ನಾಪತ್ತೆಯ ಹಿಂದೆ ಸ್ವಾಮೀಜಿಗಳು, ಮಠದ ಸಿಬ್ಬಂದಿಗಳ ಮೇಲೆ ಶಿಷ್ಯಂದಿರು ಆರೋಪ ಮಾಡಿದ್ದರು. ಈ ವಿಚಾರವಾಗಿ ಮಠದ ಶಿಷ್ಯ ಜಗದೀಶ್ ಐತಾಳ್ ಪ್ರಶ್ನಿಸಿದಾಗ ಸ್ವಾಮೀಜಿ, 'ಹಳೆಯ ಮೂರ್ತಿ ವಿಸರ್ಜನೆ ಮಾಡಿ ಹೊಸ ಮೂರ್ತಿ ಪ್ರತಿಷ್ಠಾಪಿಸಿದ್ದಾಗಿ ಹೇಳಿದ್ದರು.
ಮಠದಲ್ಲಿದ್ದ ನರಸಿಂಹದೇವರು, ಗಣಪತಿ, ಮಹಿಷ ಮರ್ದಿನಿ ಸೇರಿದಂತೆ ಆರು ವಿಗ್ರಹಗಳಿಗೆ ನೂರಾರು ವರ್ಷಗಳಿಂದಲೂ ಪೂಜಿಸಲಾಗುತ್ತಿತ್ತು. ಆದರೆ ಪುರಾತನ ವಿಗ್ರಹಗಳೇ ನಾಪತ್ತೆಯಾಗಿದ್ದವು. ಈ ಬಗ್ಗೆ ಅನುಮಾನಗೊಂಡು ಪ್ರಶ್ನಿಸಿದಾಗ ಸ್ವಾಮೀಜಿ ಸರಿಯಾಗಿ ಮಾಹಿತಿ ನೀಡಿದರಲಿಲ್ಲ. ಈ ಹಿನ್ನೆಲೆ ವಿಗ್ರಹಗಳ ನಾಪತ್ತೆಯಾಗಿರುವ ಕುರಿತು ಶಿಷ್ಯ ಜಗದೀಶ್ ಐತಾಳ್ ಅವರು ಬೆಂಗಳೂರಿನ ಬಸವೇಶ್ವರನಗರದಲ್ಲಿ ಎಫ್‌ಐಆರ್ ದಾಖಲಿಸಿದ್ದರು. ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದ್ದರು.
ತನಿಖೆ ವೇಳೆ ಬೆಂಗಳೂರಿನ ಪ್ರಸಿದ್ಧಿ Idols ಗೆ ಮಾರಾಟ ಮಾರಾಟ ಮಾಡಲಾಗಿರುವುದು ಪೊಲೀಸರು ಪತ್ತೆಹಚ್ಚಿದ್ದರು. . ನಾಗೇಂದ್ರ ಪ್ರಸಾದ್ ಎಂಬುವವರು ಈ ಕಂಪನಿಯ ಮಾಲೀಕರಾಗಿದ್ದಾರೆ. ವಿಗ್ರಹಗಳು ನಾಪತ್ರೆ ಪ್ರಕರಣದಲ್ಲಿ ನಾಗೇಂದ್ರ ನನ್ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗಲೇ ಪ್ರಕರಣ ಬಯಲಾಗಿದೆ. ಅನಿಲ್ ಕುಮಾರ್, ಜಯಲಕ್ಷ್ಮಿ,ಶ್ರೇಯಸ್ ಈ ಪ್ರಕರಣದ ಇತರೆ ಆರೋಪಿಗಳಾಗಿದ್ದಾರೆ.
ಅಲ್ಲದೆ ಶಿಷ್ಯ ಸಮುದಾಯದ ಜೊತೆಗೆ ಅನೇಕ ವರ್ಷಗಳಿಂದ ಸಂಘರ್ಷ ನಡೆಸುತ್ತಿದ್ದರು. ಇದು ಕಳೆದೆರಡು ತಿಂಗಳಿಂದ ಸ್ವಾಮೀಜಿ ಶಿಷ್ಯಂದಿರ ನಡುವೆ ಸಂಘರ್ಷ ತಾರಕಕ್ಕೇರಿತ್ತು. ಬಾಳೆಕುದ್ರು ಸ್ವಾಮೀಜಿ ಪೀಠ ತ್ಯಾಗ ಮಾಡಬೇಕೆಂದು ಆಗ್ರಹಿಸಿ ಬಾಳೆಕುದ್ರು ಮಠ ಹಿತರಕ್ಷಣಾ ಸಮಿತಿ ಸದಸ್ಯರು ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಶೃಂಗೇರಿ ಶ್ರೀಗಳನ್ನು ಬಾಳೆಕುದ್ರು ಸ್ವಾಮೀಜಿ ಅವಹೇಳನ ಮಾಡಿದ್ದಾರೆ ಎಂಬ ಕಾರಣಕ್ಕೆ ಸಂಘರ್ಷ ಇನ್ನಷ್ಟು ತೀವ್ರಗೊಂಡಿತ್ತು. ಇದೀಗ ವಿಗ್ರಹ ಮಾರಾಟ ಪ್ರಕರಣದಲ್ಲಿ ಆರೋಪಿಯಾಗಿ ಸ್ವಾಮೀಜಿ ಪರಾರಿಯಾಗಿದ್ದಾರೆ.