
ಬೆಂಗಳೂರು (ಆ.14): ಧರ್ಮಸ್ಥಳದಲ್ಲಿ ಅಸ್ಥಿಪಂಜರ ಹುಡುಕಾಟ ಪ್ರಕರಣದಲ್ಲಿ ಸುದ್ದಿಯಾಗಿದ್ದ ಮತ್ತೊಂದು ಹೆಸರು ಸುಜಾತಾ ಭಟ್. ತನ್ನ ಮಗಳು ಅನನ್ಯಾ ಭಟ್ 2003ರಲ್ಲಿ ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದ ಬೆನ್ನಲ್ಲಿಯೇ ತನಿಖೆಯ ಆಳಕ್ಕೆ ಇಳಿದಿದ್ದ ಏಷ್ಯಾನೆಟ್ ಸುವರ್ಣ ನ್ಯೂಸ್ ಹಲವು ಎಕ್ಸ್‌ಕ್ಲೂಸಿವ್ ಮಾಹಿತಿಯನ್ನು ಬಹಿರಂಗ ಮಾಡಿತ್ತು. ಸತತ 2ನೇ ದಿನ ಇದರ ತನಿಖೆಗೆ ಇಳಿದ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಇನ್ನಷ್ಟು ಮಾಹಿತಿಗಳು ಪತ್ತೆಯಾಗಿದೆ. ಗೌರಿ ಗಣೇಶ ಸಿನಿಮಾದಲ್ಲಿ ಅನಂತ್‌ನಾಗ್ ಹೇಳಿದ್ದ ಕಟ್ಟುಕಥೆಗಿಂತ ಮಿಗಿಲಾದ ಸ್ಟೋರಿಯನ್ನು ಸುಜಾತಾ ಭಟ್ ರಿಯಲ್ ಲೈಫ್‌ನಲ್ಲಿ ಕಟ್ಟಿದ್ದರು ಅನ್ನೋದು ಮೇಲ್ನೋಟಕ್ಕೆ ಗೊತ್ತಾಗಿದೆ.
ಅನನ್ಯಾ ಭಟ್ ಮಿಸ್ಸಿಂಗ್ ಕೇಸ್‌ನ ಮತ್ತಷ್ಟು ಫಾಲೋಅಪ್‌ಅನ್ನು ಮಾಡಲಾಗಿದೆ. ಅನನ್ಯಾ ಭಟ್ ನಾಪತ್ತೆ ಎಂದು ದೂರು ಕೊಟ್ಟಿದ್ದ ಸುಜಾತಾ ಸ್ವತಃ ದೂರು ಕೊಟ್ಟ ಬಳಿಕ ನಾಪತ್ತೆಯಾಗಿದ್ದರು. ಆದರೆ, ಪ್ರಕರಣದ ಬಗ್ಗೆ ಪೊಲೀಸರು ಮಾತ್ರ ಬಹಳ ಎಚ್ಚರಿಕೆಯಿಂದ ತನಿಖೆ ಮಾಡಿದ್ದರು. ಅನನ್ಯಾ ಭಟ್ ನಾಪತ್ತೆ ಕೇಸ್‌ನಲ್ಲಿ ಯಾವ ವಿಚಾರ ಕೂಡ ತಾಳಮೇಳ ಆಗ್ತಾ ಇರ್ಲಿಲ್ಲ. ಹಲವು ಸುತ್ತಿನ ಹುಡುಕಾಟದ ಬಳಿಕವೂ ಸಿಕ್ಕಿಲ್ಲ. ಅನನ್ಯಾ ಅನ್ನೋ ಹುಡುಗಿ ಇದ್ದಳು ಅನ್ನೋದಕ್ಕೆ ಸಾಕ್ಷಿಯೇ ಸಿಕ್ಕಿರಲಿಲ್ಲ. ಇದರ ಬೆನ್ನಲ್ಲಿಯೇ ಆಕೆಯ ಅಸ್ತಿತ್ವದ ಬಗ್ಗೆಯೇ ಅನುಮಾನ ಶುರುವಾಗಿದೆ.
ಅನನ್ಯಾ ಭಟ್ ಮಿಸ್ಸಿಂಗ್ ಮಿಸ್ಟರಿ ಬೆನ್ನತ್ತಿದ್ದ ಸುವರ್ಣ ನ್ಯೂಸ್ ಬುಧವಾರ ಅತೀ ದೊಡ್ಡ ಬೇಟೆಯನ್ನು ನಿಮ್ಮೆದುರು ತೆರೆದಿಟ್ಟಿತ್ತು. ಆಗ ಹಲವು ಸತ್ಯಗಳು ಜಗತ್ತಿನೆದರು ಬಯಲಾಗಿದ್ದವು. ಸುಜಾತಾ ಭಟ್ ಹಿನ್ನೆಲೆ ಹುಡುಕಾಟದ ವೇಳೆ ಹಲವು ಸೀಕ್ರೆಟ್ಸ್ ಹೊರಬಂದಿತ್ತು. ಸುಜಾತಾ ಭಟ್ ಹತ್ತಿರದ ಸಂಬಂಧಿಯನ್ನೇ ಪತ್ತೆ ಹಚ್ಚಿದ್ದಲ್ಲದೆ, ಆಕೆಯ ಅಕ್ಕನ ಗಂಡನ ಸಂದರ್ಶನವನನ್ನು ಎಕ್ಸ್‌ಕ್ಲೂಸಿವ್ ಆಗಿ ಪ್ರಸಾರ ಮಾಡಿತ್ತು. ಸುಜಾತಾ ಭಟ್ ಜಾತಕವನ್ನು ಎಳೆಎಳೆಯಾಗಿ ಬಿಡಿಸಿಟ್ಟಿದ್ದರು ಆಕೆಯ ಬಾವ ಮಹಾಬಲೇಶ್ವರ.
ಮಹಾಬಲೇಶ್ವರ ಮಧ್ಯಸ್ಥ ಸಂದರ್ಶನದ ಬೆನ್ನಲ್ಲೇ ಸಂಚಲನ ಶುರುವಾಗಿತ್ತು. ವರದಿ ಬೆನ್ನಲ್ಲೇ ಮತ್ತಷ್ಟು ಭಯಾನಕ ಸತ್ಯ ಹೊರಬಿದ್ದಿವೆ. ಸುಜಾತಾ ಭಟ್ ಜೀವನ ಚರಿತ್ರೆ ಎಳೆಎಳೆಯಾಗಿ ಬಿಡಿಸಿಕೊಳ್ಳುತ್ತಿದೆ. ಸುಜಾತಾ ಭಟ್ ನಿಜಕ್ಕೂ ಯಾರು..? ಇದ್ದಿದ್ದು ಎಲ್ಲಿ..? ಸುಜಾತಾ ಹೇಳಿದ್ದರಲ್ಲಿ ಎಷ್ಟು ಸತ್ಯ..? ಎಷ್ಟು ಮಿಥ್ಯ..? ಸುಜಾತಾ ಭಟ್ ಬಗ್ಗೆ ಆಕೆಯ ಹತ್ತಿರದವರು ಬಿಚ್ಚಿಟ್ಟ ಸತ್ಯವೇನು..? ಅನ್ನೋದರ ವಿವರ ಇಲ್ಲಿದೆ.
ಸುಜಾತ ಭಟ್ ಬಾವ ಮಹಾಬಲೇಶ್ವರ ನೀಡಿದ ಮಾಹಿತಿ ಮೇರೆಗೆ ಸುವರ್ಣನ್ಯೂಸ್ ಸತ್ಯ ಶೋಧನೆಗೆ ಇಳಿದಿತ್ತು. ಅಸಲಿಗೆ ಸುಜಾತ ಭಟ್ ಯಾವ್ಯಾವ ವರ್ಷ ಎಲ್ಲೆಲ್ಲಿದ್ದರು ಅನ್ನೋ ಚರ್ಚೆಯೂ ಜೋರಾಗಿತ್ತು. ಅದನ್ನು ಹುಡುಕಿಕೊಂಡು ಹೋದಾಗ ಮತ್ತಷ್ಟು ನಿಗೂಢ ಸತ್ಯಗಳು ಹೊರಬಿದ್ದವು. ನಾನು ಅಲ್ಲಿದ್ದೆ, ಇಲ್ಲಿದ್ದೆ, ಹಾಗೆ ಮಾಡ್ತಿದ್ದೆ ಅಂತಾ ಸುಜಾತ ಭಟ್ ಏನೇನೋ ಹೇಳಿದ್ರಲ್ಲಾ. ಆದರೆ ಆ ಸಮಯದಲ್ಲಿ ಸುಜಾತ ಭಟ್ ಅವರನ್ನು ಕಂಡವರು ಹೇಳೋದೇ ಬೇರೆ.
ಈಗ ಇಡೀ ದೇಶವನ್ನು ಸುಜಾತಾ ಭಟ್ ಕಹಾನಿ ಸುತ್ತಾಡುತ್ತಿದೆ. ಉಡುಪಿಯಿಂದ ಶುರುವಾಗಿ ಕೋಲ್ಕತ್ತಾವರೆಗೆ ಹೋಗಿತ್ತು. ಈಗ ಶಿವಮೊಗ್ಗಕ್ಕೆ ಬಂದು ನಿಂತಿದೆ.ಸುಜಾತ ಭಟ್ ಕೋಲ್ಕತ್ತಾದಲ್ಲಿ CBI ಸ್ಟೇನೋಗ್ರಾಫರ್ ಆಗಿದ್ದು ಯಾವಾಗ ಅನ್ನೋ ಮಾಹಿತಿಯೂ ಇದೆ. 2005ರವರೆಗೆ ಸುಜಾತಾ ಭಟ್ ಕೋಲ್ಕತ್ತಾದಲ್ಲಿ ಇದ್ದೆ ಎಂದು ಆಕೆಯೇ ಹಲವು ಸಂದರ್ಶನಗಳಲ್ಲಿ ಹೇಳಿದ್ದಾರೆ. ಆದರೆ, ಆಕೆಯೇ ಹೇಳಿರುವ ಶಿವಮೊಗ್ಗದ ಕಥೆಗಳು ಇದಕ್ಕೆ ತದ್ವಿರುದ್ಧವಾಗಿದೆ. ಅದರೊಂದಿಗೆ ಶಿವಮೊಗ್ಗದ ರಿಪ್ಪನ್‌ಪೇಟೆ ನಿವಾಸಿಗಳು ಹೇಳೋ ಕಥೆಯೇ ಬೇರೆ.
ಕೋಲ್ಕತ್ತಾದಲ್ಲಿ ಸಿಬಿಐ ಸ್ಟೇನೋಗ್ರಾಫರ್ ಕೆಲಸದಲ್ಲಿದ್ದ ಸುಜಾತಾ ಭಟ್ ವಿಆಆರ್‌ಎಸ್ ತೆಗೆದುಕೊಂಡರಂತೆ. ಕೆಲಸ ಬಿಟ್ಟು 2004ಕ್ಕೆ ಬೆಂಗಳೂರಿಗೆ ಬಂದು ಲಿವಿನ್ ರಿಲೇಷನ್‌ಷಿಪ್‌ನಲ್ಲಿ ಇದ್ದರಂತೆ ಸುಜಾತ ಭಟ್. ಹಾಗಾದ್ರೆ 2004ರಲ್ಲಿ ಸುಜಾತಾ ಭಟ್ ಶಿವಮೊಗ್ಗದಲ್ಲಿದ್ದರಾ, ಕೋಲ್ಕತ್ತಾದಲ್ಲಿದ್ದರಾ..? ಬೆಂಗಳೂರಿಲಿದ್ದರಾ..?
ಸುಜಾತಾ ಭಟ್ ಅವರ ವೈಯಕ್ತಿಕ ಜೀವನದ ಬಗ್ಗೆ ಹೊಸ ಮಾಹಿತಿ ಹೊರಬಿದ್ದಿದೆ. ಸುಜಾತಾ ಭಟ್ ಅವರು ರಿಪ್ಪನ್‌ಪೇಟೆಯ ನಿವಾಸಿ ಪ್ರಭಾಕರ್ ಬಾಳಿಗ ಎಂಬುವವರೊಂದಿಗೆ ಸುಮಾರು ಆರು-ಏಳು ವರ್ಷಗಳ ಕಾಲ ಲಿವಿನ್ರಿಲೇಷನ್ಶಿಪ್ನಲ್ಲಿದ್ದರು ಎಂದು ತಿಳಿದುಬಂದಿದೆ. ಉಡುಪಿಯಲ್ಲಿ ಬಸ್ ಏಜೆಂಟ್ ಆಗಿದ್ದ ಪ್ರಭಾಕರ್ ಬಾಳಿಗ ಅವರೊಂದಿಗೆ ಸುಜಾತಾ ಅವರಿಗೆ ಪರಿಚಯವಾಗಿತ್ತು. ಈ ಸ್ನೇಹದ ನಂತರ, ಪ್ರಭಾಕರ್ ಅವರ ತಾಯಿಯನ್ನು ನೋಡಿಕೊಳ್ಳಲು ಸುಜಾತಾ ಅವರು ರಿಪ್ಪನ್‌ಪೇಟೆಗೆ ಬಂದಿದ್ದರು. ಈ ಅವಧಿಯಲ್ಲಿ ಪ್ರಭಾಕರ್ ಅವರ ಮೊದಲ ಪತ್ನಿ ಮತ್ತು ಮಗಳು ಅವರನ್ನು ತೊರೆದಿದ್ದರು. ಆದರೆ, ವಿಚ್ಛೇದನ ಪಡೆಯದೆಯೇ, ಪ್ರಭಾಕರ್ ಮತ್ತು ಸುಜಾತಾ 1999ರಿಂದ 2005ರವರೆಗೆ ಒಟ್ಟಿಗೆ ವಾಸಿಸಿದ್ದರು. ಈ ಅವಧಿಯಲ್ಲಿ ಇವರಿಬ್ಬರು ಮದುವೆಯಾಗದೇ ಲಿವ್ ಇನ್‌ನಲ್ಲಿ ಇದ್ದರು ಎಂದು ಮೂಲಗಳು ತಿಳಿಸಿವೆ.
ಉಡುಪಿಯಿಂದ ಶಿವಮೊಗ್ಗದ ರಿಪ್ಪನ್‌ಪೇಟೆಗೆ ಬಂದ ಸುಜಾತ ಭಟ್ ಅಲ್ಲಿನ ಪ್ರಭಾಕರ್ ಬಾಳಿಗ ಅನ್ನೋರ ಜತೆ ಸುಮಾರು ಆರೇಳು ವರ್ಷ ಲಿವಿನ್ ನಲ್ಲಿದ್ದರು. 1999 ರಿಂದ 2005ರವರೆಗೆ ಸುಜಾತ ಭಟ್ ಶಿವಮೊಗ್ಗದ ರಿಪ್ಪನ್‌ಪೇಟೆಯಲ್ಲಿದ್ದರು. ಈ ವೇಳೆ ಸುಜಾತ ಭಟ್ ಹೇಳೋ ಪ್ರಕಾರ ಅವರ ಮಗಳು ಅನನ್ಯಾ ಭಟ್ ಎಲ್ಲಿದ್ದಳು ಅನ್ನೋದೆ ಈಗ ಎಲ್ಲರ ಪ್ರಶ್ನೆ..? ಇನ್ನೊಂದೆಡೆ ಅವರ ಶಿವಮೊಗ್ಗದ ಮೂಲ ಸುಜಾತ ಭಟ್ ಅವರಿಗೆ ಮಗಳಿರಲಿಲ್ಲ ಎನ್ನುತ್ತಿದೆ. ಮಗಳೇ ಇಲ್ಲದೆ ರಿಪ್ಪನ್ ಪೇಟೆಯಲ್ಲಿದ್ದ ಸುಜಾತಾ ಭಟ್ ಅವರ ಮಗು ನಾಪತ್ತೆ ಹೇಗೆ ಅನ್ನೋದೇ ಎಲ್ಲರ ಪ್ರಶ್ನೆ.
ಪ್ರಭಾಕರ್ ಬಾಳಿಗ ತಾಯಿ ನೋಡಿಕೊಳ್ಳಲು ಸೇರಿಕೊಂಡಿದ್ದ ಸುಜಾತ ಭಟ್ ಈ ವೇಳೆಯೇ ಪ್ರಭಾಕರ್‌ಗೆ ಪರಿಚಯವಾಗಿದ್ದರು. ಸುಜಾತ ಭಟ್ ಸೇರಿಕೊಂಡ 20 ದಿನದಲ್ಲಿ ಬಾಳಿಗ ತಾಯಿ ನಿಧನವಾಗಿದ್ದರು. ಬಾಳಿಗ ತಾಯಿ ನಿಧನ ನಂತರ ಪ್ರಭಾಕರ್ ಜತೆಯೇ ಸುಜಾತ ಉಳಿದುಕೊಂಡಿದ್ದರು. ಆರೇಳು ವರ್ಷ ಜತೆಗಿದ್ದ ಇವರು ಮದುವೆ ಆಗಿರಲಿಲ್ಲ.
ಅಸಲಿಗೆ ಸುಜಾತ ಭಟ್-ಪ್ರಭಾಕರ್ ಬಾಳಿಗ ಲಿವ್ ಇನ್ ರಿಲೇಷನ್‌ಷಿಪ್‌ಗೆ ಇಡೀ ರಿಪ್ಪನ್‌ಪೇಟೆಯೇ ಸಾಕ್ಷಿಯಾಗಿದೆ, ಲಿವಿನ್‌ನಲ್ಲಿದ್ದ ಪ್ರಬಾಕರ್ ಬಾಳಿಗ ಮನೆ ಈಗ ಪಾಳು ಕೊಂಪೆಯಾಗಿದೆ . ಪ್ರಭಾಕರ್ ಬಾಳಿಗ ಜತೆ ಸುಜಾತ ಭಟ್ ಈ ಮನೆಯಲ್ಲಿದ್ದದ್ದನ್ನು ಕಂಡವರಿದ್ದಾರೆ. ಹೊಸನಗರ ಸ್ಥಳೀಯರು, ಅಕ್ಕಪಕ್ಕದವ್ರು ಇವರಿಬ್ಬರ ಒಡನಾಟದ ಬಗ್ಗೆ ಮಾತಾಡಿದ್ದಾರೆ. ಪ್ರಭಾಕರ್ ಭಟ್ ಅವರ ಮೊದಲ ಪತ್ನಿಗೆ ಒಬ್ಬಳು ಮಗಳಿದ್ದಳು ಅನ್ನೋದು ನಿಜ. ನಾವು ಸುಜಾತ ಭಟ್ ನೋಡಿದ್ದೇವೆ, ಅವರಿಗೆ ಮಕ್ಕಳಿರಲಿಲ್ಲ ಎಂದು ಸ್ಥಳೀಯರಾದ ರಾಘವೇಂದ್ರ ಹಾಗೂ ವಿಘ್ನೇಶ್ ಮಾಹಿತಿ ನೀಡಿದ್ದಾರೆ.
ಬೀದಿ ನಾಯಿಗಳನ್ನು ಸಾಕುತ್ತಿದ್ದ ಪ್ರಭಾಕರ್ ಬಾಳಿಗ-ಸುಜಾತ ಭಟ್, ಈ ಬೀದಿ ನಾಯಿಗಳೇ ತಮ್ಮ ಮಕ್ಕಳು ಎನ್ನುತ್ತಿದ್ದರು. ಇವರ ಸಂದರ್ಶನ ಸ್ಥಳೀಯ ಪತ್ರಿಕೆಗಳನ್ನೂ ಪ್ರಕಟವಾಗಿತ್ತು. 2009ರಲ್ಲಿ ಆನಾರೋಗ್ಯದಿಂದ ಪ್ರಭಾಕರ್ ಬಾಳಿಗ ಮೃತಪಟ್ಟರೆ, ಬಾಳಿಗ ಸಾಯುವ 2 ವರ್ಷ ಮೊದಲೇ ಸುಜಾತ ಭಟ್ ಅವರನ್ನು ತೊರೆದಿದ್ದರು. ಬಿಟ್ಟು ಹೋದ 4 ವರ್ಷ ನಂತರ ಸುಜಾತ ಭಟ್‌ರನ್ನು ಪೊಲೀಸರು ಹುಡುಕಿಕೊಂಡು ಬಂದಿದ್ದರು.
ಅದಾದ ಬಳಿಕ ಗ್ರಾ.ಪಂ ಚುನಾವಣೆಗೆ ಸ್ಪರ್ಧಿಸುಂತೆ ಸುಜಾತ ಭಟ್‌ಗೆ ಒತ್ತಾಯ ಬಂದಿತ್ತು. ಆದರೆ ಸ್ಥಳೀಯರ ಒತ್ತಾಯವನ್ನು ಅವರು ತಿರಸ್ಕರಿಸಿದ್ದರು.ಸ್ಪರ್ಧಿಸಿದ್ರೆ ಮಹಿಳಾ ಮೀಸಲಾತಿಯಡಿ ಗ್ರಾ.ಪಂ ಅಧ್ಯಕ್ಷೆಯಾಗುವ ಸಾಧ್ಯತೆ ಕೂಡ ಇತ್ತು.
1999 ರಿಂದ 2005ರವರೆಗೆ 6 ವರ್ಷ ಇವರು ಒಟ್ಟಿಗೆ ಇದ್ದರು. ಬಳಿಕ ಬೆಂಗಳೂರಿನಲ್ಲಿ ಜಡ್ಜ್ ಮನೆಯಲ್ಲಿ ಕೆಲಸ ಸಿಕ್ಕಿದೆ ಎಂದು ಬಿಟ್ಟು ಹೋಗಿದ್ದರು. ಪ್ರಭಾಕರ್ನನ್ನು ಬಿಟ್ಟು ಹೋದ ಮೇಲೆ ಬೇರೆ ಮದುವೆಯಾದ ಸುದ್ದಿಯೂ ಸಿಕ್ಕಿತ್ತು. ಕೆಲ ಪ್ರತಿಭಟನೆಗಳಲ್ಲಿ ಸುಜಾತ ಭಟ್ ಭಾಗಿಯಾಗಿದ್ದು ನೋಡಿದ್ದೇನೆ ಎಂದು ಪ್ರಭಾಕರ್ ಅವರ ಸ್ನೇಹಿತ ಹರೀಶ್ ಪ್ರಭು ಹೇಳಿದ್ದಾರೆ.
ಓದಿದರಲ್ಲ ಇಡೀ ಪ್ರಕರಣದಲ್ಲಿ ಎಷ್ಟೊಂದು ಮಿಸ್ಸಿಂಗ್ ಲಿಂಕ್‌ಗಳಿವೆ. ಒಂದು ಲಿಂಕ್ ಮಿಸ್ ಆದರು ಎಲ್ಲಾ ತನಿಖೆ ಹಾದಿ ತಪ್ಪುವ ಸಾಧ್ಯತೆಯೇ ಹೆಚ್ಚು. ಆದರೆ ಎಲ್ಲೋ ಒಂದು ಕಡೆ ತನಿಖೆಯ ಹಾದಿ ತಪ್ಪಿಸುವ ಪ್ರಯತ್ನವೇ ನಡೆದಿದಿದ್ಯಾ? ಗೊಂದಲ ಮೂಡಿಸುತ್ತಿರುವವರು ಯಾರು? ಇದಕ್ಕೆಲ್ಲಾ ಉತ್ತರಗಳು ದೊರಕಬೇಕಿದೆ.