ನನ್ನ ಸಾವಿಗೆ ನಾನೇ ಕಾರಣ: FB ಪೋಸ್ಟ್ ಹಾಕಿ ಪರಿಸರವಾದಿ ಸಾಹಿತಿ ಭೂಹಳ್ಳಿ ಪುಟ್ಟಸ್ವಾಮಿ ಆತ್ಮಹತ್ಯೆ!

By Mahmad Rafik  |  First Published Jul 29, 2024, 11:57 AM IST

ನಿವೃತ್ತಿ ಹಣದಿಂದಲೇ ಬರಡು ಭೂಮಿಯಲ್ಲಿ ಗಿಡಗಳನ್ನು ಬೆಳೆಸಿದ್ದಾರೆ. ಪುಟ್ಟಸ್ವಾಮಿಯವರ ನಿರಂತರ ಪರಿಶ್ರಮದಿಂದ ಸುಮಾರು 40 ಎಕರೆ ಭೂಮಿ ಹಸಿರುಮಯವಾಗಿದೆ.


ರಾಮನಗರ: ಹಿರಿಯ ಪರಿಸರವಾದಿ ಮತ್ತು ಸಾಹಿತಿ ಭೂಹಳ್ಳಿ ಪುಟ್ಟಸ್ವಾಮಿ ಅವರು ಫೇಸ್‌ಬುಕ್‌ ಪೋಸ್ಟ್ ಹಾಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಭೂಹಳ್ಳಿ ಪುಟ್ಟಸ್ವಾಮಿ ಅನಾರೋಗ್ಯದಿಂದ ಬಳಲುತ್ತಿದ್ರಿಂದ ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರೋದಾಗಿ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಪುಟ್ಟಸ್ವಾಮಿ ಅವರು ಚನ್ನಪಟ್ಟಣ ತಾಲೂಕಿನ ಭೂಹಳ್ಳಿ ಗ್ರಾಮದವರು. ಭೂಹಳ್ಳಿ ಪುಟ್ಟಸ್ವಾಮಿ ಎಂದೇ ಎಲ್ಲರಿಗೂ ಚಿರಪರಿಚಿತರಾಗಿದ್ದರು. ನನ್ನ ಸಾವಿಗೆ ನಾನೇ ಕಾರಣ. ಅನಾರೋಗ್ಯದಿಂದ ಬೇಸರಗೊಂಡು ಜೀವನಯಾತ್ರೆ ಮುಗಿಸುತ್ತಿದ್ದೇನೆ ಎಂದು ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಪರಿಸರ ಪ್ರೇಮಿಯಾಗಿದ್ದ ಪುಟ್ಟಸ್ವಾಮಿ ಅವರು ತಮ್ಮ ಸ್ವಂತ ಹಣದಲ್ಲಿ ಸಾವಿರಾರು ಗಿಡಗಳನ್ನು ಬೆಳೆಸಿ ವನವೊಂದನ್ನು ನಿರ್ಮಾಣ ಮಾಡಿದ್ದರು. 

ಭೂಹಳ್ಳಿಯ ಬಾಡಿಗೆ ಮನೆಯೊಂದರಲ್ಲಿ ಪುಟ್ಟಸ್ವಾಮಿ ನೆಲೆಸಿದ್ದರೆ, ಪತ್ನಿ ಹಾಗೂ ಇಬ್ಬರು ಪುತ್ರರು ಮೈಸೂರಿನಲ್ಲಿ ವಾಸವಾಗಿದ್ದರು. ಪುಟ್ಟಸ್ವಾಮಿ ಅವರೇ ಭೂಹಳ್ಳಿಯಿಂದ ಮೈಸೂರಿಗೆ ಹೋಗಿ ಬರುತ್ತಿದ್ದರು. ಇತಿಹಾಸ ಉಪನ್ಯಾಸಕರಾಗಿದ್ದ ಭೂಹಳ್ಳಿ ಪುಟ್ಟಸ್ವಾಮಿ ಅವರು, ನಿವೃತ್ತಿ ಹಣದಿಂದಲೇ ಬರಡು ಭೂಮಿಯಲ್ಲಿ ಗಿಡಗಳನ್ನು ಬೆಳೆಸಿದ್ದಾರೆ. ಪುಟ್ಟಸ್ವಾಮಿಯವರ ನಿರಂತರ ಪರಿಶ್ರಮದಿಂದ ಸುಮಾರು 40 ಎಕರೆ ಭೂಮಿ ಹಸಿರುಮಯವಾಗಿದೆ.

ರಾಮನಗರ ಜಿಲ್ಲೆ ಹೆಸರು ಬದಲಾವಣೆಗೆ ವಿರೋಧ ಎಡಬಿಡಂಗಿತನದ್ದು: ಡಿ.ಕೆ.ಶಿವಕುಮಾರ್

Tap to resize

Latest Videos

ಭೂಹಳ್ಳಿ ಪುಟ್ಟಸ್ವಾಮಿ ಅವರು 25ಕ್ಕೂ ಹೆಚ್ಚು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ನೆಲದ ಕಂಬನಿ, ಗೋಜಲು, ಹೆಜ್ಜೆ, ಬೆಳದಿಂಗಳ ಕುಡಿ, ನೂಲು ಸ್ವರ ಸೇರಿದಂತೆ ಹಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಪುಟ್ಟಸ್ವಾಮಿಯವರ ಸೇವೆಗೆ ಚುಟುಕು ಸಾಹಿತ್ಯ ಪ್ರಶಸ್ತಿ,ಕೆಎಸ್‌ಆರ್‌ಟಿಸಿ ಕನ್ನಡ ಕ್ರಿಯಾ ಸಮಿತಿಯ ಸಾಹಿತ್ಯ ಕೌಸ್ತುಭ ಪ್ರಶಸ್ತಿಗಳು ಹಲವು ಪ್ರಶಸ್ತಿಗಳು ಇವರನ್ನು ಅರಸಿ ಬಂದಿದ್ದೇವೆ.

ನಾನು ಮೂಲತಃ ರೈತ, ಹಾರರ್ ಕಥಾ ಹಂದರ 'ಕಬಂಧ' ಚಿತ್ರದಲ್ಲೂ ರೈತ: ನಟ ಕಿಶೋರ್

click me!