ಮಂಗಳೂರು: CAA ವಿರೋಧಿ ಪ್ರತಿಭಟನೆಯಿಂದ ಅಮೂಲ್ಯ ಔಟ್..!

By Kannadaprabha News  |  First Published Feb 21, 2020, 11:45 AM IST

ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಿಎಎ ವಿರುದ್ಧ ಪ್ರತಿಭಟನೆಯ ವೇಳೆ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗಿದ ಅಮೂಲ್ಯಾಳನ್ನು ಫೆ.25ರಂದು ಮಂಗಳೂರಿನಲ್ಲಿ ನಡೆಯುವ ಸಿಎಎ ವಿರುದ್ಧದ ಪ್ರತಿಭಟನೆಯಿಂದ ಹೊರಗಿಡಲಾಗಿದೆ.


ಮಂಗಳೂರು(ಫೆ.21): ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಿಎಎ ವಿರುದ್ಧ ಪ್ರತಿಭಟನೆಯ ವೇಳೆ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗಿದ ಅಮೂಲ್ಯಾಳನ್ನು ಫೆ.25ರಂದು ಮಂಗಳೂರಿನಲ್ಲಿ ನಡೆಯುವ ಸಿಎಎ ವಿರುದ್ಧದ ಪ್ರತಿಭಟನೆಯಿಂದ ಹೊರಗಿಡಲಾಗಿದೆ.

ಪಾಕ್‌ ಪರವಾದ ಘೋಷಣೆ ಖಂಡನೀಯ. ಪ್ರತಿಯೊಬ್ಬರು ತಾವಿರುವ ನೆಲವನ್ನು ಪ್ರೀತಿಸಬೇಕು. ಅದು ನಮ್ಮ ಕರ್ತವ್ಯ. ಆದುದರಿಂದ ಜೀವನದಲ್ಲಿ ದೇಶವನ್ನು ಚೆನ್ನಾಗಿ ಪ್ರೀತಿಸಬೇಕು. ಫೆ.25ಕ್ಕೆ ಅಮೂಲ್ಯಳನ್ನು ಮಂಗಳೂರಿನಲ್ಲಿ ಮುಸ್ಲಿಂ ಐಕ್ಯತಾ ವೇದಿಕೆ ಪ್ರತಿಭಟನೆಗೆ ಆಹ್ವಾನಿಸಿರುವುದನ್ನು ರದ್ದುಪಡಿಸಲಾಗಿದೆ ಎಂದು ಸಂಘಟಕ, ಮಾಜಿ ಮೇಯರ್‌ ಕೆ. ಅಶ್ರಫ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tap to resize

Latest Videos

undefined

ಫೇಸ್‌ಬುಕ್‌ನಲ್ಲೂ ಪಾಕ್‌ಗೆ ಅಮೂಲ್ಯ ‘ಜೈ’!

ಬೆಂಗಳೂರಿನಲ್ಲಿ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಹಾಕಿರುವ ಅಮೂಲ್ಯ ಲಿಯೋನಾ ವರ್ತನೆಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಅವರ ತಂದೆ ಓಸ್ವಲ್ಡ್‌ ನರೋನ(ವಾಜಿ) ಇದರಿಂದ ನನಗೂ ನೋವಾಗಿದ್ದು, ಪೊಲೀಸರು ಆಕೆಯ ಕೈ ಕಾಲು ಮುರಿದರೂ ನಾವು ಕೇಳುವುದಿಲ್ಲ ಎಂದು ಹೇಳಿದ್ದಾರೆ.

ಗುರುವಾರ ಸಂಜೆ ಅಮೂಲ್ಯ ಲಿಯೋನಾ ಬೆಂಗಳೂರಿನಲ್ಲಿ ಪಾಕ್‌ ಪರ ಘೋಷಣೆ ಕೂಗಿ ಬಂಧಿತರಾದ ಬೆನ್ನಲ್ಲೇ ಚಿಕ್ಕಮಗಳೂರು ಜಿಲ್ಲೆಯ ಶಿವಪುರ ಗ್ರಾಮದಲ್ಲಿರುವ ಅವರ ಮನೆಯೆದುರು ರಾತ್ರಿ ಬಿಜೆಪಿ ಹಾಗೂ ಭಜರಂಗದಳ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಅಮೂಲ್ಯ ಕುಟುಂಬಕ್ಕೆ ನಕ್ಸಲ್‌ ನಂಟು..?

ಇದೇ ಸಂದರ್ಭದಲ್ಲಿ ಮಾತನಾಡಿದ ಓಸ್ವಲ್ಡ್‌ ನರೋನ ಅವರು ಪಾಕ್‌ ಪರ ಘೋಷಣೆ ಹಾಕಿದ್ದು ತಪ್ಪು, ಈ ಬಗ್ಗೆ ನನಗೂ ನೋವಿದೆ. ಅಂತಹ ಮಗಳನ್ನು ಮನೆಗೆ ಸೇರಿಸಿಕೊಳ್ಳುವುದಿಲ್ಲ, ಪೊಲೀಸರು ಆಕೆಯ ಕೈಕಾಲು ಮುರಿದರೂ ನಾವು ಕೇಳುವುದಿಲ್ಲ, ಜಾಮೀನಿಗೂ ಪ್ರಯತ್ನಿಸುವುದಿಲ್ಲ, ಬಿಡಿಸಿಕೊಳ್ಳಲು ಹೋಗೋದಿಲ್ಲ ಎಂದು ಹೇಳಿದರು.

click me!