ಯುವ ಸಂಸತ್‌ನಲ್ಲಿ ಪಾಲ್ಗೊಂಡವರಲ್ಲಿ ನಾಯಕತ್ವ ಗುಣ: ಸಚಿವ ಎಚ್.ಕೆ.ಪಾಟೀಲ್‌

By Kannadaprabha News  |  First Published Nov 26, 2023, 11:59 PM IST

ಪರಿಣಾಮಕಾರಿ ವಿಷಯ ಮಂಡನಾ ಸಾಮರ್ಥ್ಯ ಇರುವವರನ್ನು ಸಮಾಜವು ನಾಯಕ ಎಂದು ಒಪ್ಪಿಕೊಳ್ಳುತ್ತದೆ, ಅದಕ್ಕಾಗಿ ಇಂದಿನ ಯುವ ಸಂಸತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ನಾಯಕತ್ವದದ ಗುಣ ಸಹಜವಾಗಿಯೇ ಮೂಡುತ್ತದೆ ಎಂದು ಸಚಿವ ಎಚ್.ಕೆ.ಪಾಟೀಲ್‌ ಹೇಳಿದರು.


ಗದಗ (ನ.26): ಪರಿಣಾಮಕಾರಿ ವಿಷಯ ಮಂಡನಾ ಸಾಮರ್ಥ್ಯ ಇರುವವರನ್ನು ಸಮಾಜವು ನಾಯಕ ಎಂದು ಒಪ್ಪಿಕೊಳ್ಳುತ್ತದೆ, ಅದಕ್ಕಾಗಿ ಇಂದಿನ ಯುವ ಸಂಸತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ನಾಯಕತ್ವದದ ಗುಣ ಸಹಜವಾಗಿಯೇ ಮೂಡುತ್ತದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ್‌ ಹೇಳಿದರು. ಜಿಲ್ಲಾಡಳಿತ ಭವನದ ಜಿಪಂ ಸಭಾಭವನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ ಸಹಯೋಗದೊಂದಿಗೆ ಪ್ರೌಢಶಾಲಾ ಮತ್ತು ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಯುವ ಸಂಸತ್ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಮಾರೋಪ ಉದ್ಘಾಟಿಸಿ, ಬಹುಮಾನ ವಿತರಣೆ ಮಾಡಿ ಮಾತನಾಡಿದರು.

ಯುವ ಸಂಸತನಲ್ಲಿ ಪಾಲ್ಗೊಂಡವರಲ್ಲಿ ನಾಯಕತ್ವ ಗುಣ ಖಂಡಿತ ಮೂಡುತ್ತದೆ. ಅದನ್ನು ಇಂದು ನಡೆದ ಸಂಸತ್ ಕಲಾಪದಲ್ಲಿ ಸಾಬೀತುಪಡಿಸಿದ್ದಿರಿ, ಯುವ ಸಂಸತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಮುಂದೆ ಖಂಡಿತವಾಗಿ ಶಾಸಕರು, ಸಂಸದರು, ಸ್ಥಳೀಯ ಸಂಸ್ಥೆಯ, ತಾ.ಪಂ., ಜಿಪಂ ಸದಸ್ಯರು ಅಧ್ಯಕ್ಷರಾಗುತ್ತೀರಿ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಯುವಕರು ದೇಶ ಕಟ್ಟುವ ಕಾಯಕದಲ್ಲಿ ಮಹತ್ವದ ಪಾತ್ರ ವಹಿಸಬೇಕು. ನಿಮ್ಮ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಮೌಲ್ಯಗಳು, ಪ್ರಾಮಾಣಿಕತೆ ಮೈಗೂಡಿಸಿಕೊಂಡು ಸಾಮಾಜಿಕ, ರಾಜಕೀಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ತಿಳಿಸಿದರು. ಕೇವಲ‌ ಮಾಧ್ಯಮಗಳನ್ನು ತಲೆಯಲ್ಲಿಟ್ಡುಕೊಂಡು ರಾಜಕೀಯ ಮಾಡದೇ, ಪ್ರಾಮಾಣಿಕ,‌ ನೈತಿಕ ನೆಲೆಗಟ್ಟಿನಲ್ಲಿ ಸಾಮಾಜಿಕ‌ ಸೇವೆ ಮಾಡುವ ಮನೋಭಾವನೆ ರೂಢಿಸಿಕೊಳ್ಳಬೇಕು.

Tap to resize

Latest Videos

ಡಿಕೆಶಿ ರಕ್ಷಣೆ ಮಾಡಲು ಸಿಬಿಐ ಪ್ರಕರಣ ವಾಪಸ್: ಆರ್.ಆಶೋಕ್

ನಮ್ಮ ಯೋಜನಾ ಸಾಮರ್ಥ್ಯ ಮಹತ್ತರವಾಗಿ ಇಟ್ಟುಕೊಂಡು ಅದರ ಸಾಕಾರಕ್ಕೆ ನಿರಂತರ ಶ್ರಮ ವಹಿಸಿ, ಸಮಾಜಕ್ಕೆ ನಮ್ಮದೇ ಆದ ಸೇವೆಯನ್ನು‌ ನೀಡಲು ಯುವಕರು ಮುಂದಾಗಬೇಕು. ಜನಹಿತಕ್ಕಾಗಿ ನಿಮ್ಮ ಅಮುಲ್ಯವಾದ ಸಮಯವನ್ನು ಮೀಸಲಿಡುವ ಶಪಥವನ್ನು‌ ಮಾಡಬೇಕು. ರಾಜಕಾರಣಿಗಳ ಕೈ ಹಿಡಿದು ಉತ್ತಮ ಮಾರ್ಗದೆಡೆಗೆ ಸಾಗಿಸುವ ಶಕ್ತಿ ಯುವ ಜನತೆಗಿದೆ. ಅದನ್ನು ತಾವು ನಿರಂತರವಾಗಿ ಮಾಡಬೇಕು ಎಂದರು. ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಗದಗ ಜಿಲ್ಲೆ ವಿವಿಧ ಕ್ಷೇತ್ರದಲ್ಲಿ ತನ್ನದೇ ಆದ ಸಾಧನೆ ಮಾಡಿದೆ, ಇಂತಹ ಕ್ಷೇತ್ರದಲ್ಲಿ ರಾಜ್ಯ ಮಟ್ಟದ ಯುವ ಸಂಸತ್ ಸ್ಪರ್ಧೆ ನಡೆದದ್ದು, ಹಾಗೂ ಸಂಸದೀಯ ಸಚಿವರು ಗದಗ ಜಿಲ್ಲೆಯವರು ಎಂಬುದು ಹೆಮ್ಮೆ ತಂದಿದೆ. ಯುವ ಸಂಸತ್ ಸ್ಪರ್ಧೆ ಪಾಲ್ಗೊಂಡ ಯುವಕರ ರಾಜಕೀಯ ಸಾಮಾಜಿಕ ಜೀವನಕ್ಕೆ ಸ್ಫೂರ್ತಿ ನೀಡಲಿದೆ ಎಂದರು.

ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಒತ್ತು: ಸಚಿವ ಡಿ.ಸುಧಾಕರ್

ಹಾಲಕೆರೆ ಮಠದ ಮುತ್ತಿನ ಬಸವಲಿಂಗ ಶ್ರೀಗಳು ಸಾನಿಧ್ಯ ವಹಿಸಿ, ಆಶಿರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು, ಮುಖ್ಯ ಅತಿಥಿಗಳು ಯುವ ಸಂಸತ್ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ‌ ಮಾಡಿದರು. ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯ ಕಾರ್ಯದರ್ಶಿ ಜಿ. ಶ್ರೀಧರ್, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್., ಶಾಲಾ ಶಿಕ್ಷಣ ಇಲಾಖೆಯ ಉಪನಿದೇಶಕ ಎಂ.ಎ. ರಡ್ಡೇರ (ಆಡಳಿತ) ಹಾಗೂ ಜಿ.ಎಲ್. ಬಾರಾಟಕ್ಕೆ (ಅಭಿವೃದ್ಧಿ), ಡಿಡಿಪಿಯು ಕೃಷ್ಣಪ್ಪ ಪಿ., ರವೀಂದ್ರನಾಥ ದೊಡ್ಡಮೇಟಿ, ಎನ್.ಆರ್. ಗೌಡರ, ವಿ.ಎಸ್. ದೊತ್ರದ್, ವೈ.ಸಿ. ಪಾಟೀಲ, ಕೊಟ್ರೇಶ್ ವಿಭೂತಿ, ನೊಡಲ್ ಅಧಿಕಾರಿ ಪ್ರಭಾಕರ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸ್ಪರ್ಧಾಳುಗಳು, ಶಿಕ್ಷಕರು ಹಾಜರಿದ್ದರು.

click me!