ರೈತರ ಖಾತೆಗೆ 78.39 ಕೋಟಿ ಬೆಳೆ ವಿಮೆ ಪರಿಹಾರ ಬಿಡುಗಡೆ: ಶಿವರಾಮ್ ಹೆಬ್ಬಾರ್‌

By Kannadaprabha News  |  First Published Nov 26, 2023, 11:30 PM IST

ಸೆಪ್ಟೆಂಬರ್ ವೇಳೆಗೆ ರೈತರ ಖಾತೆಗೆ ಜಮಾ ಆಗಬೇಕಿದ್ದ ಬೆಳೆ ವಿಮೆ ಪರಿಹಾರ ಈಗ ಬಂದಿದೆ. ಒಟ್ಟು ₹ 78.39 ಕೋಟಿ ಜಿಲ್ಲೆಗೆ ಪರಿಹಾರ ಬಿಡುಗಡೆಯಾಗಿದ್ದು, ತಡವಾದರೂ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡಿರುವುದು ರೈತರಿಗೆ ಸಂತಸ ತಂದಿದೆ. 


ಶಿರಸಿ (ನ.26): ಸೆಪ್ಟೆಂಬರ್ ವೇಳೆಗೆ ರೈತರ ಖಾತೆಗೆ ಜಮಾ ಆಗಬೇಕಿದ್ದ ಬೆಳೆ ವಿಮೆ ಪರಿಹಾರ ಈಗ ಬಂದಿದೆ. ಒಟ್ಟು ₹ 78.39 ಕೋಟಿ ಜಿಲ್ಲೆಗೆ ಪರಿಹಾರ ಬಿಡುಗಡೆಯಾಗಿದ್ದು, ತಡವಾದರೂ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡಿರುವುದು ರೈತರಿಗೆ ಸಂತಸ ತಂದಿದೆ. ಒಂದೆಡೆ ಬರಗಾಲ, ಮತ್ತೊಂದೆಡೆ ಅಡಕೆ ತೋಟಕ್ಕೆ ಬಂದ ಎಲೆಚುಕ್ಕೆ ರೋಗದಿಂದ ಈ ವರ್ಷ ರೈತರು ಕಂಗಾಲಾಗಿದ್ದರು.

ಈ ಕುರಿತು ಶಿರಸಿ ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವರಾಮ್ ಹೆಬ್ಬಾರ್‌ ಪತ್ರಿಕಾ ಪ್ರಕಟಣೆ ನೀಡಿ 2022-23ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಯಡಿಯಲ್ಲಿ ಅಡಕೆ ಮತ್ತು ಕಾಳುಮೆಣಸು ಕ್ಷೇತ್ರಕ್ಕೆ ಸಂಬಂಧಿಸಿ ₹ 78.39 ಕೋಟಿ ವಿಮಾ ಪರಿಹಾರದ ರಖಂ ಆಧಾರ ಲಿಂಕ್ ಆದ ರೈತರ ಉಳಿತಾಯ ಖಾತೆಗೆ ನೇರವಾಗಿ ವಿಮಾ ಕಂಪನಿಯಿಂದ ಜಮಾ ಆಗುತ್ತಿದೆ ಎಂದಿದ್ದಾರೆ. 2022-23ನೇ ಸಾಲಿನಲ್ಲಿ ಸರ್ಕಾರದ ಆದೇಶದಂತೆ ಮುಂಗಾರು ಅವಧಿಗೆ ಸಂಬಂಧಿಸಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಅಡಕೆ ಮತ್ತು ಕಾಳುಮೆಣಸು ಕ್ಷೇತ್ರಕ್ಕೆ ಕೆಡಿಸಿಸಿ ಬ್ಯಾಂಕ್ ಸಹಕಾರ ಸಂಘಗಳ ಮೂಲಕ ಒಟ್ಟು 79643 ಪ್ರಸ್ತಾವನೆಗಳನ್ನು ಬೆಳೆ ವಿಮೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ಈ ಪೈಕಿ ರೈತರು ಹೊಂದಿರುವ 79,197 ಸರ್ವೇ ನಂಬರ್‌ಗಳಿಗೆ ಪರಿಹಾರ ಬಿಡುಗಡೆಯಾಗುತ್ತಿದೆ.

Tap to resize

Latest Videos

undefined

ಡಿಕೆಶಿ ರಕ್ಷಣೆ ಮಾಡಲು ಸಿಬಿಐ ಪ್ರಕರಣ ವಾಪಸ್: ಆರ್.ಆಶೋಕ್

ಶಿರಸಿ ತಾಲೂಕಿನ 33 ಪಂಚಾಯಿತಿ ವ್ಯಾಪ್ತಿಯ 28218 ಸರ್ವೇ ನಂಬರ್‌ಗಳಿಗೆ ಪ್ರತಿ ಗುಂಟೆಗೆ ₹ 414.66ನಂತೆ ಒಟ್ಟೂ ₹ 2957.62 ಲಕ್ಷ, ಸಿದ್ದಾಪುರ ತಾಲೂಕಿನ 24 ಪಂಚಾಯಿತಿ ವ್ಯಾಪ್ತಿಯ 25,860 ಸರ್ವೇ ನಂಬರ್ ಗಳಿಗೆ ಪ್ರತಿ ಗುಂಟೆಗೆ ₹ 428.60ರಂತೆ ₹ 1348.03 ಲಕ್ಷ, ಮುಂಡಗೋಡ ತಾಲೂಕಿನ 16 ಪಂಚಾಯಿತಿ ವ್ಯಾಪ್ತಿಯ 1963 ಸರ್ವೇ ನಂಬರ್‌ಗಳಿಗೆ ಪ್ರತಿ ಗುಂಟೆಗೆ ₹ 625.93ರಂತೆ ₹ 926.23 ಲಕ್ಷ, ಯಲ್ಲಾಪುರ ತಾಲೂಕಿನ 16 ಪಂಚಾಯಿತಿ ವ್ಯಾಪ್ತಿಯ 10608 ಸರ್ವೇ ನಂಬರ್‌ಗಳಿಗೆ ಪ್ರತಿ ಗುಂಟೆಗೆ ₹ 458.88ರಂತೆ ₹ 1678.13 ಲಕ್ಷ.

ಜೋಯಿಡಾ ತಾಲೂಕಿನ 14 ಪಂಚಾಯಿತಿ ವ್ಯಾಪ್ತಿಯ 1219 ಸರ್ವೇ ನಂಬರ್ ಗಳಿಗೆ ಪ್ರತಿ ಗುಂಟೆಗೆ ₹ 269.75ರಂತೆ ₹ 131 ಲಕ್ಷ, ಅಂಕೋಲಾ ತಾಲೂಕಿನ 7 ಪಂಚಾಯಿತಿ ವ್ಯಾಪ್ತಿಯ 2312 ಸರ್ವೇ ನಂಬರ್ ಗಳಿಗೆ ಪ್ರತಿ ಗುಂಟೆಗೆ ಸರಾಸರಿ ₹ 471.96ರಂತೆ 462.82 ಲಕ್ಷ, ಕುಮಟಾ ತಾಲೂಕಿನ 13 ಪಂಚಾಯಿತಿ ವ್ಯಾಪ್ತಿಯ 1192 ಸರ್ವೇ ನಂಬರ್‌ಗಳಿಗೆ ಸರಾಸರಿ ₹ 191.73ರಂತೆ ಒಟ್ಟೂ ₹ 52.82 ಲಕ್ಷ, ಹೊನ್ನಾವರ ತಾಲೂಕಿನ 25 ಪಂಚಾಯಿತಿ ವ್ಯಾಪ್ತಿಯ 6613 ಸರ್ವೇ ನಂಬರ್‌ಗಳಿಗೆ ಸರಾಸರಿ ₹ 190.17ರಂತೆ ₹ 176.00 ಲಕ್ಷ, ಭಟ್ಕಳ ತಾಲೂಕಿನ 18 ಪಂಚಾಯಿತಿ ವ್ಯಾಪ್ತಿಯ 1212 ಸರ್ವೇ ನಂಬರ್‌ಗಳಿಗೆ ಸರಾಸರಿ ₹ 335.56ರಂತೆ ₹ 106.68 ಲಕ್ಷ ಜಮೆ ಆಗಿದೆ.

ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚಿನ ಒತ್ತು: ಸಚಿವ ಡಿ.ಸುಧಾಕರ್

ಅಡಕೆ ಬೆಳೆಗೆ 75776 ಪ್ರಸ್ತಾವನೆಗಳಿಗೆ ₹ 7718.27 ಲಕ್ಷ ವಿಮಾ ಪರಿಹಾರ ದೊರಕಿದ್ದು ಕಾಳುಮೆಣಸಿಗೆ ಸಂಬಂಧಿಸಿ 3421 ಪ್ರಸ್ತಾವನೆಗಳಿಗೆ ₹ 121.06 ಲಕ್ಷ ಪರಿಹಾರ ದೊರಕಿದೆ. ಮಳೆ ಕೊರತೆಯಿಂದ ಬರಗಾಲದ ಸಂಕಷ್ಟದಲ್ಲಿರುವ ರೈತರಿಗೆ ಬೆಳೆ ವಿಮೆ ಜಮೆ ಆಗುತ್ತಿರುವುದು ವರದಾನವಾಗಿದೆ. ಕೇಂದ್ರ-ರಾಜ್ಯ ಸರ್ಕಾರದ ಯೋಜನೆಗಳನ್ನು ಅಳವಡಿಸಿಕೊಂಡು 2022-23ನೇ ಸಾಲಿನ ಹಂಗಾಮಿಗೆ ಸಂಬಂಧಿಸಿ ಬೆಳೆ ವಿಮೆ ರಖಂ ರೈತರಿಗೆ ಸಕಾಲದಲ್ಲಿ ದೊರೆತಿರುವುದು ನಮ್ಮ ಕೆಡಿಸಿಸಿ ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಗಲಿರುಳು ಶ್ರಮಿಸಿರುವುದರ ಫಲಶ್ರುತಿಯಾಗಿದೆ ಎಂದು ಶಿವರಾಮ ಹೆಬ್ಬಾರ ಹೇಳಿದ್ದಾರೆ.

click me!