ಗರ್ಭಿಣಿ ರಕ್ಷಿಸಿದ್ದಕ್ಕೆ ಅಮಿತ್‌ ಶಾ, ಬಿಎಸ್‌ವೈ ಮೆಚ್ಚುಗೆ

By Web Desk  |  First Published Aug 12, 2019, 3:08 PM IST

ಲಿಂಗಸ್ಗೂರಿನಲ್ಲಿ ಗರ್ಭಿಣಿ ರಕ್ಷಣೆ ಮಾಡಿದ ಸೇನಾ ಸಿಬ್ಬಂದಿಗೆ ಕೇಂದ್ರ ಸಚಿವ ಅಮಿತ್ ಶಾ ಹಾಗೂ ಬಿ ಎಸ್ ಯಡಿಯೂರಪ್ಪ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 


ಲಿಂಗಸ್ಗೂರು [ಆ.12] : ಕೃಷ್ಣಾ ನದಿಯಲ್ಲಿ ಪ್ರವಾಹದಿಂದಾಗಿ ನಡುಗುಡ್ಡೆಯಾಗಿದ್ದ ರಾಯಚೂರು ಜಿಲ್ಲೆ ಲಿಂಗಸ್ಗೂರು ತಾಲೂಕಿನ ಕರಕಲಗಡ್ಡಿಯಲ್ಲಿ ಸಿಲುಕಿದ್ದ ಏಳು ಮಂದಿಯನ್ನು ಸೇನಾ ಹೆಲಿಕಾಪ್ಟರ್‌ ಕಾರ್ಯಾಚರಣೆ ಮೂಲಕ ರಕ್ಷಿಸಲಾಗಿದೆ. 

ಇದರಲ್ಲಿ ಒಬ್ಬಳು ಗರ್ಭಿಣಿಯೂ ಇದ್ದು, ಆಕೆಗೆ ಶುಶ್ರೂಷೆ ಮಾಡಿದ ಸೇನೆಯ ಮಹಿಳಾ ಸಿಬ್ಬಂದಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಟ್ವೀಟರ್‌ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.

Latest Videos

undefined

ಕರ್ನಾಟಕ ಪ್ರವಾಃದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗ್ರಾಮದ ಹನುಮಪ್ಪ 60, ಹನುಮವ್ವ 55, ತಿಪ್ಪಣ್ಣ 45, ಪಾರ್ವತಮ್ಮ 37, ಕವಿತಾ 19, ಕಮಲಾಕ್ಷ 17 ರಕ್ಷಣೆ ಮೊದಲು ಬರಲು ಒಪ್ಪದ ನಡುಗಡ್ಡೆ ಸಂತ್ರಸ್ತರ ಮನವೊಲಿಸಿ ಕರೆದುಕೊಂಡು ಹೋದ ಸೇನಾ ಅಧಿಕಾರಿಗಳು ಹೆಲಿಕಾಪ್ಟರ್‌ ಮೂಲಕ ಕರೆದುಕೊಂಡು ನೆರೆ ಸಂತ್ರಸ್ಥರನ್ನು ಬೆಳಗಾವಿಗೆ  ಶಿಫ್ಟ್ ಮಾಡಲಾಗಿತ್ತು. ನೆರೆಯಲ್ಲಿ ಸಿಲುಕಿದವರಲ್ಲಿ 7 ತಿಂಗಳ ಗರ್ಭಿಣಿ ಕವಿತಾಗೆ ಸೇನೆಯ ಮಹಿಳಾ ಸಿಬ್ಬಂದಿ ಹೆಲಿಕ್ಯಾಪ್ಟರ್‌ನಲ್ಲಿಯೇ ಆರೈಕೆ ಮಾಡಿದ ಪೋಟೋ ವೈರಲ್ ಆಗಿದೆ.

click me!